ಏಕದಿನ ವಿಶ್ವಕಪ್ 2023ರ ಮೊದಲ ಪಂದ್ಯದಲ್ಲೇ ಇಂಗ್ಲೆಂಡ್ ತಂಡ ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ಅದು ಕೂಡ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಯಾವ ತಂಡದಿಂದಲೂ ಸಾಧ್ಯವಾಗದ ದಾಖಲೆ ಎಂಬುದು ವಿಶೇಷ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಉತ್ತಮ ಆರಂಭ ಪಡೆದಿರಲಿಲ್ಲ.
ಆರಂಭಿಕ ಆಟಗಾರ ಡೇವಿಡ್ ಮಲಾನ್ 14 ರನ್ ಗಳಿಸಿ ಔಟಾದರೆ, ಜಾನಿ ಬೈರ್ಸ್ಟೋವ್ 33 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು. ಆದರೆ ಜಾನಿ ಬೈರ್ಸ್ಟೋವ್- 33., ಡೇವಿಡ್ ಮಲಾನ್- 14., ಜೋ ರೂಟ್- 77., ಹ್ಯಾರಿ ಬ್ರೂಕ್- 25., ಮೊಯೀನ್ ಅಲಿ- 11., ಜೋಸ್ ಬಟ್ಲರ್- 43., ಲಿಯಾಮ್ ಲಿವಿಂಗ್ಸ್ಟೋನ್- 20., ಸ್ಯಾಮ್ ಕರನ್- 14., ಕ್ರಿಸ್ ವೋಕ್ಸ್- 11., ಆದಿಲ್ ರಶೀದ್- 15*., ಮಾರ್ಕ್ ವುಡ್- 13* ರನ್ ಕಲೆಹಾಕಿದ್ದಾರೆ.
ವಿಶೇಷ ಎಂದರೆ ಈ ಪಂದ್ಯದಲ್ಲಿ ಇಂಗ್ಲೆಂಡ್ನ 11 ಬ್ಯಾಟರ್ಗಳು ಎರಡಂಕಿ ಮೊತ್ತಗಳಿಸಿದ್ದರು. ಇದರೊಂದಿಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ತಂಡವೊಂದರ ಎಲ್ಲಾ ಆಟಗಾರರು ಎರಡಂಕಿ ರನ್ಗಳಿಸಿದ ಹೊಸ ದಾಖಲೆ ನಿರ್ಮಾಣವಾಯಿತು. ಅಂದರೆ ಇದುವರೆಗೆ ಯಾವುದೇ ತಂಡದ 11 ಆಟಗಾರರು ಏಕದಿನ ಪಂದ್ಯದಲ್ಲಿ ಡಬಲ್ ಡಿಜಿಟ್ ಸ್ಕೋರ್ಗಳಿಸಿರಲಿಲ್ಲ. ಇದೀಗ ವಿಶ್ವಕಪ್ನ ಮೊದಲ ಪಂದ್ಯದಲ್ಲೇ ಇಂಗ್ಲೆಂಡ್ ತಂಡ ಈ ದಾಖಲೆ ನಿರ್ಮಿಸಿರುವುದು ವಿಶೇಷ.