News Karnataka Kannada
Sunday, April 28 2024
ಕ್ರೀಡೆ

ವಿಶ್ವಕಪ್‌: ಮಳೆಯಿಂದ ಭಾರತ ಮತ್ತು ಇಂಗ್ಲೆಂಡ್‌ ಪಂದ್ಯ ರದ್ದು

Icc Cricket World Cup 2019: India-England match called off due to rain
Photo Credit : IANS

ಗುವಾಹಾಟಿ: ಭಾರತ ಮತ್ತು ಇಂಗ್ಲೆಂಡ್‌ ನಡುವೆ ಶನಿವಾರ ನಡೆಯಬೇಕಿದ್ದ ವಿಶ್ವಕಪ್‌ ಕ್ರಿಕೆಟ್‌  ಅಭ್ಯಾಸ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಬರ್ಸಾಪರ ಕ್ರೀಡಾಂಗಣದಲ್ಲಿ ಪಂದ್ಯ ಆರಂಭವಾಗುವ ಹೊತ್ತಿಗೆ ಸ್ಪಲ್ಪ ಸಮಯ ಮೊದಲು ಮಳೆ ಆರಂಭವಾಯಿತು. ಇದೇ ಕಾರಣದಿಂದ ಸಾಯಂಕಾಲ 6 ಗಂಟೆಯ ಹೊತ್ತಿಗೆ ಪಂದ್ಯವನ್ನು ರದ್ದು ಮಾಡಲಾಯಿತು.

ಈ ಹಿಂದೆ ನಡೆದ ಏಷ್ಯಾಕಪ್​ಗೂ (2023) ಮಳೆ ಕಾಟ ನೀಡಿತ್ತು. ಇದರಿಂದ ಹಲವು ಪಂದ್ಯಗಳನ್ನು ರದ್ದುಗೊಳಿಸಲಾಗಿತ್ತು. ಇದೀಗ ವಿಶ್ವಕಪ್ ಆರಂಭಕ್ಕೂ ಮುನ್ನ ನಡೆಯುತ್ತಿರುವ ಅಭ್ಯಾಸ ಪಂದ್ಯಗಳಿಗೆ ವರುಣನ ಅವಕೃಪೆ ಎದುರಾಗುತ್ತಿದೆ. ಹೀಗಾಗಿ ಏಷ್ಯಾಕಪ್​ನಲ್ಲಿ ಆದ ಅವಾಂತರವೇ ವಿಶ್ವಕಪ್‌ನಲ್ಲೂ ಆಗುತ್ತಾ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡಲಾರಂಭಿಸಿದೆ.

ಟೂರ್ನಿಯಲ್ಲಿ ಸ್ಪರ್ಧಿಸಲಿರುವ ಹತ್ತು ತಂಡಗಳಿಗೂ ತಲಾ ಎರಡು ಅಭ್ಯಾಸ ಪಂದ್ಯಗಳು ನಡೆಯಲಿವೆ. ಸೋಮವಾರ ನಡೆಯುವ ಪಂದ್ಯದಲ್ಲಿ ಇಂಗ್ಲೆಂಡ್‌ ಎದುರು ಬಾಂಗ್ಲಾದೇಶ ಆಡಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು