ಭಾರತ ಮಹಿಳಾ ಕ್ರಿಕೆಟ್ ತಂಡ ಬಾಂಗ್ಲಾದೇಶ ಪ್ರವಾಸದಲ್ಲಿದ್ದು, ಟಿ20 ಸರಣಿಯನ್ನು ಆಡುತ್ತಿದೆ. ಭಾನುವಾರ ನಡೆದಿದ್ದ ಮೊದಲ ಟಿ20 ಪಂದ್ಯದಲ್ಲಿ ಹರ್ಮನ್ಪ್ರೀತ್ ಕೌರ್ ಪಡೆ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿರುವ ಭಾರತೀಯ ವನಿತೆಯರು ಇದೀಗ ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಸ್ಟೇಡಿಯಂನಲ್ಲಿ ದ್ವಿತೀಯ ಪಂದ್ಯದಲ್ಲಿ ಗೆದ್ದು ಬೀಗಿದ್ದಾರೆ.
ಅತ್ತ ತವರಿನಲ್ಲಿ ಮಾನ ಉಳಿಸಿಕೊಳ್ಳಬೇಕಾದರೆ ಬಾಂಗ್ಲಾಕ್ಕೆ ಇಂದಿನ ಪಂದ್ಯ ಮಾಡು ಇಲ್ಲವೇ ಮಡಿ ಆಗಿತ್ತು. ಆದರೆ ಭಾರತದ ತಂಡದ ವನಿತೆಯರು 8 ರನ್ ಗಳಿಂದ ಜಯಗಳಿಸಿದ್ದಾರೆ. ಭಾರತ 10 ವಿಕೆಟ್ ನಷ್ಟಕ್ಕೆ 95 ರನ್ ಕಲೆಹಾಕಿದರೆ, ಬಾಂಗ್ಲಾ 87 ರನ್ ಗಳಿಗೆ ಆಲೌಟ್ ಆದರು.ಬಾಂಗ್ಲಾದ ಮೂರು ವಿಕೆಟ್ ಶಫಾಲಿ ವರ್ಮಾ ಕಬಳಿಸಿದ್ದು, ಜತೆಗೆ ಇಂದು ಭಾರತದ ಅತಿ ಹೆಚ್ಚು ರನ್ ಸ್ಕೋರರ್ ಮತ್ತು ಜಂಟಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.