ಕೋಲ್ಕತ್ತಾ: 2016-17 ರಿಂದ 2021-22 ರವರೆಗಿನ ಆರು ವರ್ಷಗಳ ಅವಧಿಯಲ್ಲಿ ಬಿಜೆಪಿ ಘೋಷಿಸಿದ ಒಟ್ಟು ದೇಣಿಗೆ ಇತರ ಎಲ್ಲಾ ರಾಷ್ಟ್ರೀಯ ಪಕ್ಷಗಳು ಘೋಷಿಸಿದ ಒಟ್ಟು ದೇಣಿಗೆಗಳ ಮೂರು ಪಟ್ಟು ಹೆಚ್ಚಾಗಿದೆ ಎಂದು ವರದಿಯೊಂದು ಹೇಳಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ ಜಂಟಿಯಾಗಿ ಸಿದ್ಧ ಪಡಿಸಿದ ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ.
ಆರು ವರ್ಷಗಳ ಅವಧಿಯಲ್ಲಿ, ಬಿಜೆಪಿಯ ಒಟ್ಟು ದೇಣಿಗೆಯಲ್ಲಿ ಶೇ. 52 ಕ್ಕಿಂತ ಹೆಚ್ಚು ದೇಣಿಗೆ (5271.97 ಕೋಟಿ ರೂಪಾಯಿ) ಎಲೆಕ್ಟೋರಲ್ ಬಾಂಡ್ಗಳಿಂದ ಬಂದಿದ್ದರೆ, ಇತರ ಎಲ್ಲಾ ರಾಷ್ಟ್ರೀಯ ಪಕ್ಷಗಳು ಇದೇ ಅವಧಿಯಲ್ಲಿ 1783.93 ಕೋಟಿ ರೂಪಾಯಿ ದೇಣಿಗೆ ಪಡೆದಿವೆ ಎಂದು ವರದಿ ಹೇಳಿದೆ.
ಅದೇ ಅವಧಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 952.29 ಕೋಟಿ ರೂಪಾಯಿಗಳ ಬಾಂಡ್ ದೇಣಿಗೆ ಪಡೆದಿದೆ. ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ರೂ 767.88 ಕೋಟಿ ಘೋಷಿಸಿದೆ.
ಬಿಜು ಜನತಾ ದಳದ (ಬಿಜೆಡಿ) ಒಟ್ಟು ದೇಣಿಗೆಯಲ್ಲಿ 89.81% ಕ್ಕಿಂತ ಹೆಚ್ಚು 622 ಕೋಟಿ ರೂಪಾಯಿ ಮೌಲ್ಯದ ಎಲೆಕ್ಟೋರಲ್ ಬಾಂಡ್ಗಳಿಂದ ಬಂದಿದೆ. ಡಿಎಂಕೆ ಬಾಂಡ್ಗಳಿಂದ 431.50 ಕೋಟಿ ರೂ. ದೇಣಿಗೆ ಘೋಷಿಸಿದೆ. ಟಿಆರ್ಎಸ್ ಮತ್ತು ರೂ 330.44 ಕೋಟಿ ದೇಣಿಗೆಗಳನ್ನು ಪಡೆದಿದೆ.
ರಾಷ್ಟ್ರೀಯ ಪಕ್ಷಗಳು ಘೋಷಿಸಿದ ಒಟ್ಟು ನೇರ ಕಾರ್ಪೊರೇಟ್ ದೇಣಿಗೆ 3,894.83 ಕೋಟಿ ರೂ.ಗಳಾಗಿದೆ. ಒಟ್ಟು ಏಳು ರಾಷ್ಟ್ರೀಯ ಪಕ್ಷಗಳು ಘೋಷಿಸಿದ ನೇರ ಕಾರ್ಪೊರೇಟ್ ದೇಣಿಗೆ 719.69 ಕೋಟಿ ರೂ. ಆಗಿದೆ. ಬಿಜೆಪಿ ಘೋಷಿಸಿದ ಕಾರ್ಪೊರೇಟ್ ದೇಣಿಗೆಗಳು ಇತರ ಎಲ್ಲಾ ರಾಷ್ಟ್ರೀಯ ಪಕ್ಷಗಳ ಒಟ್ಟು ಕಾರ್ಪೊರೇಟ್ ದೇಣಿಗೆಗಳಿಗಿಂತ ಕನಿಷ್ಠ ಮೂರರಿಂದ ನಾಲ್ಕು ಪಟ್ಟು ಹೆಚ್ಚು ಎಂದು ಅದು ಗಮನಸೆಳೆದಿದೆ.