News Karnataka Kannada
Friday, May 10 2024
ಕ್ರೀಡೆ

ವಿಶ್ವಕಪ್ ಕ್ವಾಲಿಫೈಯರ್ ಫೈನಲ್: ಇಂದು ಶ್ರೀಲಂಕಾ- ನೆದರ್ಲೆಂಡ್ಸ್ ಕದನ

sri-lanka-vs-netherlands
Photo Credit : Twitter

ವಿಶ್ವಕಪ್‌ ಆರಂಭಕ್ಕೂ ಮುನ್ನ ಶ್ರೀಲಂಕಾ ಮತ್ತು ನೆದರ್ಲೆಂಡ್ಸ್ ನಡುವೆ ಐಸಿಸಿ ಕ್ವಾಲಿಫೈಯರ್‌ ಫೈನಲ್‌ ಪಂದ್ಯ ಇಂದು ನಡೆಯಲಿದೆ. ಅಕ್ಟೋಬರ್ 5ರಿಂದ ಆರಂಭವಾಗಲಿರುವ ಏಕದಿನ ವಿಶ್ವಕಪ್ ಸಮರಕ್ಕೆ ಈ ಹಿಂದೆಯೇ 8 ತಂಡಗಳು ನೇರ ಪ್ರವೇಶ ಪಡೆದಿದ್ದವು. ಇದೀಗ ಐಸಿಸಿ ವಿಶ್ವಕಪ್ ಕ್ವಾಲಿಫೈಯರ್ ಟೂರ್ನಿಯಲ್ಲಿ ಆಡುವ ಮೂಲಕ ಶ್ರೀಲಂಕಾ ಮತ್ತು ನೆದರ್ಲೆಂಡ್ಸ್ ತಂಡಗಳು ಸಜ್ಜಾಗಿದೆ

ಈ ಅರ್ಹತಾ ಪಂದ್ಯಾವಳಿಯ ಗ್ರ್ಯಾಂಡ್ ಫೈನಲ್ ಜುಲೈ 9 ರ ಇಂದು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿದೆ. ಪಂದ್ಯ ಮಧ್ಯಾಹ್ನ 12:30ಕ್ಕೆ ಆರಂಭವಾಗಲಿದೆ. ದಸುನ್ ಶನಕ ಶ್ರೀಲಂಕಾವನ್ನು ಮುನ್ನಡೆಸುತ್ತಿದ್ದರೆ, ಸ್ಕಾಟ್ ಎಡ್ವರ್ಡ್ಸ್ ನೆದರ್ಲೆಂಡ್ಸ್ ಕ್ರಿಕೆಟ್ ತಂಡದ ನಾಯಕತ್ವ ಹೊತ್ತಿದ್ದಾರೆ.

ನೆದರ್ಲೆಂಡ್ಸ್ ಮತ್ತು ಶ್ರೀಲಂಕಾ ನಡುವೆ ಸೂಪರ್ 6 ಹಂತದಲ್ಲಿ ಜೂನ್ 30 ರಂದು ನಡೆದ ಪಂದ್ಯದಲ್ಲಿ ಶ್ರೀಲಂಕಾ 21 ರನ್‌ಗಳಿಂದ ನೆದರ್ಲೆಂಡ್ಸ್ ತಂಡವನ್ನು ಸೋಲಿಸಿತು. ಇದಾದ ಬಳಿಕ ಇಂದು (ಜುಲೈ 9) ನಡೆಯಲಿರುವ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಹೀಗಾಗಿ ಇದೀಗ ಶ್ರೀಲಂಕಾ ತಂಡಕ್ಕೆ ನೆದರ್ಲೆಂಡ್ಸ್ ತಂಡವನ್ನು ಸತತ ಎರಡನೇ ಬಾರಿ ಸೋಲಿಸಿ ಚಾಂಪಿಯನ್ ಆಗುವ ಅವಕಾಶ ಸಿಕ್ಕಿದೆ. ಇತ್ತ ನೆದರ್ಲೆಂಡ್ಸ್​ಗೆ ಶ್ರೀಲಂಕಾ ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳುವ ರೀತಿಯಲ್ಲಿ ಸೋಲಿನ ಶಾಕ್ ನೀಡುವ ಅವಕಾಶವಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು