News Karnataka Kannada
Friday, April 19 2024
Cricket
ಹಾಸನ

ತಾಯಿ ಮೃತಪಟ್ಟಿದ್ದಾಳೆ ಎಲ್ಲೇ ಇದ್ದರೂ ಮನೆಗೆ ಬೇಗ ಬಾ: ತಂಗಿಗಾಗಿ ಕಣ್ಣೀರಿಡುತ್ತಿರುವ ಅಣ್ಣ

Mother dead wherever she was, come home early: Son in tears with mother's body for sister
Photo Credit : IANS

ಹಾಸನ: ತಾಯಿ ಮೃತಪಟ್ಟಿದ್ದಾಳೆ ಎಲ್ಲೇ ಇದ್ದರು ಮನೆಗೆ ಬೇಗ ಬಾ ಎಂದು ಮನೆಬಿಟ್ಟು ಹೋಗಿರುವ ತಂಗಿಗಾಗಿ ಅಣ್ಣನು ಅಳಲು ತೋಡಿಕೊಂಡಿದ್ದಾನೆ.

ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ, ಬೊಮ್ಮನಕೆರೆ ಗ್ರಾಮದ ಲಕ್ಷ್ಮಯ್ಯ-ಹೊನ್ನಮ್ಮ ದಂಪತಿ ಪುತ್ರಿ ಹರಿಣಿ ಗಂಡನನ್ನು ಬಿಟ್ಟು ತವರು ಸೇರಿದ್ದಳು. ಹರಿಣಿ ಗ್ರಾಮದ ಸಂಘಗಳಲ್ಲಿ ಐದು ಲಕ್ಷ ಸಾಲ ಮಾಡಿದ್ದು, ಸಾಲ ತೀರಿಸಲಾಗದೆ ಕಳೆದ ಆರು ತಿಂಗಳ ಹಿಂದೆ ಮನೆ ಬಿಟ್ಟು ಪರಾರಿಯಾಗಿದ್ದರು.

ಮಗಳು ಮಾಡಿದ ಸಾಲ ತೀರಿಸುವಂತೆ ಹೊನ್ನಮ್ಮನಿಗೆ ಸಾಲಗಾರರು ಕಿರುಕುಳ ನೀಡುತ್ತಿದ್ದರು ಎಂದು ಆರೋಪ ಕೇಳಿಬಂದಿದ್ದು, ಸಾಲಗಾರರ ಕಿರುಕುಳ ತಾಳಲಾರದೆ ಕಳೆದ ಮೂರು ದಿನಗಳಿಂದ ಹೊನಮ್ಮ ಊಟ, ತಿಂಡಿ ಬಿಟ್ಟಿದ್ದರು. ನಿನ್ನೆ ತಡರಾತ್ರಿ ಹೊನ್ನಮ್ಮ ಸಾವನ್ನಪ್ಪಿದ್ದಾರೆ. ಅಮ್ಮ ಸಾವನ್ನಪ್ಪಿದ್ದು ಎಲ್ಲಿದ್ದರು ಮನೆಗೆ ಬಾ ಎಂದು ತಂಗಿಗಾಗಿ ಅಸಹಾಯಕ ಅಣ್ಣ ಕಣ್ಣೀರಿಡುತ್ತಿದ್ದಾನೆ. ಮನೆಯಲ್ಲಿಯೇ ಮೃತ ತಾಯಿಯ ಶವವಿಟ್ಟು ಕೊಂಡು ತಂಗಿಗಾಗಿ ಅಣ್ಣ ಕಾಯುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು