ಮುಂಬೈ: ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಕೇವಲ 2 ವಾರಗಳು ಮಾತ್ರ ಬಾಕಿ ಇವೆ. ಈ ಬೆನ್ನಲ್ಲೇ ನಡೆಯಲಿರೋ ಟಿ20 ವಿಶ್ವಕಪ್ಗೆ ಕಮ್ಬ್ಯಾಕ್ ಮಾಡಲು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೆ ಆರ್ಸಿಬಿ ಪರ ಆಡುವುದು ಕಡ್ಡಾಯವಾಗಿದೆ. ಕಿಂಗ್ ಪಾಲಿಗೆ ಈ ಬಾರಿ ಐಪಿಎಲ್ ನಿರ್ಣಾಯಕ ಎನ್ನಲಾಗಿದೆ.
ಆರ್ಸಿಬಿ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಈ ಬಾರಿ ಐಪಿಎಲ್ ಆಡುತ್ತಾರೋ ಇಲ್ಲವೋ ಅನ್ನೋ ಅನುಮಾನ ಇದೆ. ಈ ಬಗ್ಗೆ ಬಿಸಿಸಿಐ ಅಧಿಕಾರಿ ಅಚ್ಚರಿ ಹೇಳಿಕೆಯೊಂದು ನೀಡಿದ್ದಾರೆ.
“ನಮಗೆ ಇರೋ ಮಾಹಿತಿ ಪ್ರಕಾರ ವಿರಾಟ್ ಕೊಹ್ಲಿ ಐಪಿಎಲ್ ಆಡುತ್ತಾರೆ. ಆದರೆ ಯಾವಾಗ ಆರ್ಸಿಬಿ ಕ್ಯಾಂಪ್ ಸೇರಿಕೊಳ್ಳಲಿದ್ದಾರೆ ಅನ್ನೋ ಮಾಹಿತಿ ನಮಗಿಲ್ಲ, ಇದು ಆರ್ಸಿಬಿ ಫ್ರಾಂಚೈಸಿಗೆ ಬಿಟ್ಟದ್ದು. ಕೊಹ್ಲಿ ರೆಸ್ಟ್ನಲ್ಲಿರೋ ಕಾರಣ ಈ ಬಗ್ಗೆ ನಾವೇನು ಕೇಳಿಲ್ಲ. ಆದರೆ, ಖಂಡಿತವಾಗಲೂ ಟಿ20 ವಿಶ್ವಕಪ್ಗೆ ಆಟಗಾರರನ್ನು ಆಯ್ಕೆ ಮಾಡಲು ಐಪಿಎಲ್ ದೊಡ್ಡ ಪಾತ್ರವಹಿಸಲಿದೆ” ಎಂದಿದೆ ಬಿಸಿಸಿಐ.