ನವದೆಹಲಿ: ಸೆಪ್ಟಂಬರ್ 23ರಿಂದ ಆರಂಭವಾಗಲಿರುವ ಏಷ್ಯನ್ ಕ್ರೀಡಾಕೂಟಕ್ಕೆ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ 22 ಸದಸ್ಯರ ಫುಟ್ಬಾಲ್ ತಂಡವನ್ನು ಪ್ರಕಟಿಸಿದೆ. ಹಿರಿಯ ಆಟಗಾರರಾದ ಸುನಿಲ್ ಛೆಟ್ರಿ, ಸಂದೇಶ್ ಜಿಂಗನ್ ಮತ್ತು ಗೋಲ್ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರು ಕ್ರೀಡಾಕೂಟಕ್ಕೆ ತಂಡದಲ್ಲಿ ಸ್ಥಾನ ಪಡೆದಿದ್ದು, ಫುಟ್ಬಾಲ್ ಅಭಿಮಾನಿಗಳ ಆತಂಕಕ್ಕೆ ತೆರೆ ಬಿದ್ದಿದೆ.
ಏಷ್ಯನ್ ಗೇಮ್ಸ್ನಲ್ಲಿ ಒಟ್ಟು 23 ಪುರುಷ ಫುಟ್ಬಾಲ್ ತಂಡಗಳು ಭಾಗವಹಿಸಲಿವೆ. ಈ 23 ತಂಡಗಳನ್ನು ಆರು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಐದು ಗುಂಪುಗಳಲ್ಲಿ ತಲಾ ನಾಲ್ಕು ತಂಡಗಳನ್ನು ಇರಿಸಲಾಗಿದ್ದು, ಒಂದು ಗುಂಪಿನಲ್ಲಿ ಮಾತ್ರ ಮೂರು ತಂಡಗಳಿವೆ. ಭಾರತ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಆತಿಥೇಯ ಚೀನಾ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಕೂಡ ಇದೇ ಗುಂಪಿನಲ್ಲಿವೆ.
ಗೋಲ್ಕೀಪರ್- ಗುರುಪ್ರೀತ್ ಸಿಂಗ್ ಸಂಧು, ಗುರ್ಮೀತ್ ಸಿಂಗ್, ಧೀರಜ್ ಸಿಂಗ್, ಡಿಫೆಂಡರ್ಸ್- ಸಂದೇಶ್ ಜಿಂಗನ್, ಅನ್ವರ್ ಅಲಿ, ನರೇಂದ್ರ ಗೆಹ್ಲೋಟ್, ಲಾಲ್ಚುಂಗ್ನುಂಗಾ, ಆಕಾಶ್ ಮಿಶ್ರಾ, ರೋಷನ್ ಸಿಂಗ್, ಆಶಿಶ್ ರೈ, ಮಿಡ್ಫೀಲ್ಡರ್ಸ್- ಜಾಕ್ಸನ್ ಸಿಂಗ್, ಸುರೇಶ್ ಸಿಂಗ್ , ಅಪುಯಾ ರಾಲ್ಟೆ, ಅಮರ್ಜೀತ್ ಸಿಂಗ್, ರಾಹುಲ್ ಕೆಪಿ, ನೌರೆಮ್ ಮಹೇಶ್, ಫಾರ್ವರ್ಡ್- ಶಿವ ಶಕ್ತಿ ನಾರಾಯಣ್, ರಹೀಮ್ ಅಲಿ, ಅನಿಕೇತ್ ಯಾದವ್, ವಿಕ್ರಮ್ ಪ್ರತಾಪ್ ಸಿಂಗ್, ರೋಹಿತ್ ದಾನು, ಸುನಿಲ್ ಛೆಟ್ರಿ ಇರಲಿದ್ದಾರೆ
ಭಾರತ ಪುರುಷರ ಫುಟ್ಬಾಲ್ ತಂಡ ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸುತ್ತಿರುವುದು ಇದು 16ನೇ ಬಾರಿ.