ಮುಂಬೈ: ಭಾರತದಲ್ಲಿ ಕ್ರಿಕೆಟ್ ನಿಯಂತ್ರಣ ಮಂಡಳಿ ಒರಿಸ್ಸಾ ಮೂಲದ ಕ್ರಿಕೆಟರ್ ಸುಮಿತ್ ಶರ್ಮಾರನ್ನು ಬ್ಯಾನ್ ಮಾಡಿದೆ. ವಯೋಮಾನದ ವಂಚನೆ ಆರೋಪದ ಮೇಲೆ ಬ್ಯಾನ್ ಮಾಡಿರುವುದಾಗಿ ತಿಳಿಸಿದೆ.
ಒರಿಸ್ಸಾ ಕ್ರಿಕೆಟ್ ಅಸೋಸಿಯೇಷನ್ ಸುಮಿತ್ ಶರ್ಮಾರನ್ನು ಒರಿಸ್ಸಾ ರಣಜಿ ಟೀಂನಲ್ಲಿ ಸೇರಿಕೊಂಡಿದ್ದ. ಆದರೆ ಬಿಸಿಸಿಐ ಸುಮಿತ್ ಶರ್ಮಾ ವಯಸ್ಸಿನ ಬಗ್ಗೆ ಸರಿಯಾಗಿ ಪರಿಶೀಲಿಸಿದಾಗ ಆತ ವಂಚಿಸಿರೋದು ಬೆಳೆಕಿಗೆ ಬಂದಿದೆ.
ಸುಮಿತ್ ಶರ್ಮಾ ರಣಜಿ ತಂಡ ಸೇರಲು ನಕಲಿ ದಾಖಲೆಯನ್ನು ನೀಡಿದ್ದರು. ಇದನ್ನು ಸರಿಯಾಗಿ ಪರಿಶೀಲಿಸಿದ ಬಿಸಿಸಿಐ ಸದ್ಯ 2 ವರ್ಷಗಳ ಕಾಲ ಅವರನ್ನು ಬ್ಯಾನ್ ಮಾಡಿದೆ.