News Karnataka Kannada
Friday, May 03 2024
ಕ್ರೀಡೆ

ಏಷ್ಯನ್ ಗೇಮ್ಸ್‌ 2023ಗೆ ವೈಭವದ ತೆರೆ : ಮುಂದಿನ ವರ್ಷ ಎಲ್ಲಿ ಆತಿಥ್ಯ ?

Asian Games 2023: Where to host next year?
Photo Credit : IANS

ಹ್ಯಾಂಗ್‌ಝೌ: ಕಳೆದ ಎರಡು ವಾರಗಳ ಕಾಲ ನಡೆದ 19ನೇ ಆವೃತ್ತಿಯ ಏಷ್ಯನ್ ಗೇಮ್ಸ್‌ಗೆ ವೈಭವದ ತೆರೆ ಬಿದ್ದಿದೆ. 45 ರಾಷ್ಟ್ರಗಳ ಕ್ರೀಡಾಪಟುಗಳ ನಡುವೆ ಪದಕಗಳಿಗಾಗಿ ಭಾರಿ ಪೈಪೋಟಿಗೆ ಸಾಕ್ಷಿಯಾದ ಈ ಕ್ರೀಡಾಕೂಟವು ಸ್ನೇಹ, ವಿಶ್ವಾಸವನ್ನು ಮುಂದುವರೆಸುವ, ಕ್ರೀಡಾ ಸ್ಪೂರ್ತಿಯನ್ನು ಎತ್ತಿಹಿಡಿಯುವ ಶಪಥದೊಂದಿಗೆ ಮುಕ್ತಾಯವಾಯಿತು.

ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ ಆರಂಭಗೊಂಡಿದ್ದ ಕ್ರೀಡಾಕೂಟಕ್ಕೆ ಆಯೋಜಕರು ಅಷ್ಟೇ ಆಕರ್ಷಕ ಸಮಾರೋಪ ಸಮಾರಂಭವನ್ನು ಆಯೋಜಿಸಿದ್ದರು. ಲೇಸರ್ ಶೋ, ಆಗಸದಲ್ಲಿ ಚಿತ್ತಾರ ಮೂಡಿಸಿದ ಸಿಡಿ ಮದ್ದುಗಳನ್ನು ಕಂಡು ಮೂಕವಿಸ್ಮಿತರಾದ ಪ್ರೇಕ್ಷಕರು, ನೃತ್ಯ, ಸಂಗೀತದ ಸುಧೆಯಲ್ಲಿ ಮುಳುಗೆದ್ದರು. ಕ್ರೀಡಾಕೂಟದ ಕೆಲ ರೋಚಕ ಕ್ಷಣಗಳನ್ನು ದೊಡ್ಡ ಪರದೆಯ ಮೇಲೆ ಪ್ರದರ್ಶಿಸಿ, ಆ ಕ್ಷಣಗಳನ್ನು ಮೆಲುಕು ಹಾಕಲಾಯಿತು.

ಈ ಬಾರಿ 19ನೇ ಏಷ್ಯನ್​ ಗೇಮ್ಸ್​ನಲ್ಲಿ ಭಾರತ 28 ಚಿನ್ನದ ಪದಕ ಸೇರಿ 107 ಪದಕ ಗೆದ್ದು, ಐತಿಹಾಸಿಕ ಸಾಧನೆಯೊಂದಿಗೆ ಏಷ್ಯನ್ ಗೇಮ್ಸ್ ಅಭಿಯಾನ ಅಂತ್ಯಗೊಳಿಸಿದೆ.

ಸಮಾರೋಪ ಸಮಾರಂಭದಲ್ಲಿ ಪಥಸಂಚಲನ ನಡೆಯಿತು. ಎಲ್ಲಾ 45 ರಾಷ್ಟ್ರಗಳ ಕ್ರೀಡಾಪಟುಗಳು, ಸಿಬ್ಬಂದಿ ಪಾಲ್ಗೊಂಡರು. ಭಾರತದ ಅಂದಾಜು 100 ಕ್ರೀಡಾಪಟುಗಳು, ಸಿಬ್ಬಂದಿ ಪಥಸಂಚಲನದಲ್ಲಿ ಪಾಲ್ಗೊಂಡರು. ಹಾಕಿ ತಂಡದ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ಭಾರತದ ಧ್ವಜಧಾರಿಯಾಗಿದ್ದರು.

ಏಷ್ಯಾ ಒಲಿಂಪಿಕ್ ಸಮಿತಿ(ಒಸಿಎ)ಯ ಹಂಗಾಮಿ ಅಧ್ಯಕ್ಷ ರಣ್‌ಧೀರ್ ಸಿಂಗ್ ಕ್ರೀಡಾಕೂಟವು ಅಧಿಕೃತವಾಗಿ ಮುಕ್ತಾಯಗೊಂಡಿದೆ ಎಂದು ಘೋಷಿಸಿ, ಕ್ರೀಡಾಕೂಟದ ಧ್ವಜ ಹಾಗೂ ಕ್ರೀಡಾ ಜ್ಯೋತಿಯನ್ನು 2026ರ ಗೇಮ್ಸ್‌ಗೆ ಆತಿಥ್ಯ ವಹಿಸುವ ಜಪಾನ್‌ಗೆ ಹಸ್ತಾಂತರಿಸಿದರು.

ಈ ವೇಳೆ ಮಾತನಾಡಿದ ರಣ್‌ಧೀರ, ‘ಏಷ್ಯಾದ ಯುವಕರು ಏಷ್ಯನ್ ಗೇಮ್ಸ್‌ ಅನ್ನು ಭ್ರಾತೃತ್ವದ ಭಾವನೆಯೊಂದಿಗೆ ಸಂಭ್ರಮಿಸಲಿ ಎಂದು ಆಶಿಸುತ್ತೇನೆ’ ಎಂದರು. ಜಪಾನ್‌ನ ಐಚಿ ಹಾಗೂ ನಗೊಯಾದಲ್ಲಿ 20ನೇ ಆವೃತ್ತಿಯ ಏಷ್ಯಾಡ್‌ ನಡೆಯಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು