News Karnataka Kannada
Friday, May 10 2024
ಕ್ರೀಡೆ

ಏಷ್ಯನ್‌ ಗೇಮ್ಸ್‌ಗೆ ಭಜರಂಗ್‌, ವಿನೇಶ್‌ ಫೊಗಟ್‌ ನೇರ ಆಯ್ಕೆ

Bajrang Punia and Vinesh Phogat
Photo Credit : News Kannada

ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್‌(ಡಬ್ಲ್ಯುಎಫ್‌ಐ)ನ ತಾತ್ಕಾಲಿಕ ಆಡಳಿತ ಸಮಿತಿ ತಾರಾ ಕುಸ್ತಿಪಟುಗಳಾದ ಭಜರಂಗ್‌ ಪೂನಿಯಾ ಹಾಗೂ ವಿನೇಶ್‌ ಫೋಗಟ್‌ಗೆ ಮುಂಬರುವ ಏಷ್ಯನ್‌ ಗೇಮ್ಸ್‌ಗೆ ನೇರ ಅರ್ಹತೆ ನೀಡಿದೆ. ಪುರುಷರ 65 ಕೆ.ಜಿ. ವಿಭಾಗದಲ್ಲಿ ಭಜರಂಗ್‌, 53 ಕೆ.ಜಿ. ವಿಭಾಗದಲ್ಲಿ ವಿನೇಶ್‌ ಸ್ಪರ್ಧಿಸಲಿದ್ದು, ಇನ್ನುಳಿದ ವಿಭಾಗಗಳಿಗೆ ಜು.21, 22ರಂದು ಆಯ್ಕೆ ಟ್ರಯಲ್ಸ್‌ ನಡೆಸುವುದಾಗಿ ತಾತ್ಕಾಲಿಕ ಸಮಿತಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಡಬ್ಲ್ಯುಎಫ್‌ಐ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಈ ಇಬ್ಬರು ಕಳೆದ 7 ತಿಂಗಳಿಂದ ಯಾವುದೇ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಂಡಿಲ್ಲ. ಇದೇ ವೇಳೆ 65 ಕೆ.ಜಿ. ವಿಭಾಗದಲ್ಲಿ ಸುಜೀತ್ ಕಲಾಕಲ್‌ ಹಾಗೂ 53 ಕೆ.ಜಿ. ವಿಭಾಗದಲ್ಲಿ ಅಂತಿಮ್‌ ಪಂಘಲ್‌ ಉತ್ತಮ ಪ್ರದರ್ಶನ ನೀಡಿದ್ದರೂ, ಆಯ್ಕೆಗೆ ಪರಿಗಣಿಸದೆ ಭಜರಂಗ್‌, ವಿನೇಶ್‌ಗೆ ನೇರ ಪ್ರವೇಶ ನೀಡಿರುವುದು ಭಾರತೀಯ ಕುಸ್ತಿ ವಲಯದಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ.

ಪ್ರತಿಭಟನೆಯಲ್ಲಿ ತೊಡಗಿದ್ದ ಸಾಕ್ಷಿ ಮಲಿಕ್‌, ಸಂಗೀತಾ ಫೋಗಟ್‌, ಸತ್ಯವರ್ತ್‌ ಕಡಿಯಾನ್‌ ಹಾಗೂ ಜಿತೇಂದರ್‌ ಕಿನ್ಹಾಗೆ ನೇರ ಪ್ರವೇಶ ನೀಡಿಲ್ಲ. ಹೀಗಾಗಿ ಇನ್ನುಳಿದ ಕುಸ್ತಿಪಟುಗಳಿಂದ ಆಸಮಾಧಾನ ಹೊರ ಹಾಕಿದ್ದಾರೆ. ಇನ್ನು ಈ ವಿಚಾರ ಯಾವ ಹಾದಿ ಹಿಡಿಯುತ್ತೋ ಕಾದು ನೋಡಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು