News Karnataka Kannada
Friday, May 03 2024
ಕ್ರೀಡೆ

ರೋಹಿತ್ ಶರ್ಮಾ ಸಿಕ್ಸರ್ ಗೆ ಪ್ರೇಕ್ಷಕನ ಮೂಗಿನ ಮೂಳೆ ಮುರಿಯಿತು!

Rohith Sharma Six
Photo Credit :
ಬೆಂಗಳೂರು: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಹೊಡೆದ ಸಿಕ್ಸರ್ಗೆ ಪ್ರೇಕ್ಷಕರೊಬ್ಬರಿಗೆ ಮೂಗು ಮುರಿತಕ್ಕೊಳಗಾಗಿದೆ.ತಕ್ಷಣವೇ ಕೆಎಸ್ ಸಿಎ ಅಧಿಕಾರಿಗಳು ಆತನಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಿಕೊಟ್ಟರು.
ರೋಹಿತ್ ಶರ್ಮಾ ಬ್ಯಾಟಿಂಗ್ ವೇಳೆ ಏಕೈಕ ಸಿಕ್ಸರ್ ಸಿಡಿಸಿದ್ದರು. ಈ ಸಿಕ್ಸರ್ ಪಂದ್ಯ ನೋಡುತ್ತಿದ್ದ ಪ್ರೇಕ್ಷಕರೊಬ್ಬರ ಮೂಗಿಗೆ ಕಂಟಕವಾಗಿದೆ. ಬಾಲ್ ಮೂಗಿಗೆ ಬಡಿದ ಪರಿಣಾಮ ಆತನ ಮೂಗಿನ ಮೂಳೆಗೆ ಪೆಟ್ಟಾಗಿದೆ.

ಎಕ್ಸ್ ರೇಯಲ್ಲಿ ಆತನ ಮೂಗಿನ ಮೂಳೆ ಮುರಿದಿರುವುದು ತಿಳಿದುಬಂದಿದೆ. ಸಾಮಾನ್ಯವಾಗಿ ಆಟಗಾರರು ಹೊಡೆದ ಸಿಕ್ಸರ್ ಪ್ರೇಕ್ಷಕರ ಗ್ಯಾಲರಿಗೆ ಬರುವಾಗ ಪ್ರೇಕ್ಷಕರು ಅದನ್ನು ಕ್ಯಾಚ್ ಹಿಡಿಯುವ ಪ್ರಯತ್ನ ನಡೆಸುತ್ತಾರೆ. ಇಂತಹ ಪ್ರಯತ್ನದಲ್ಲಿ ಎಡವಟ್ಟುಗಳಾಗುವುದು ಸಹಜ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು