ಬಾಗ್ದಾದ್ : ಇರಾಕ್ ನ ಉತ್ತರ ನಗರ ಇರ್ಬಿಲ್ ನ ಅಮೆರಿಕ ರಾಯಭಾರ ಕಚೇರಿ ಮೇಲೆ 12 ಕ್ಷಿಪಣಿಗಳು ದಾಳಿ ನಡೆಸಿವೆ ಎಂದು ಇರಾಕ್ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಬಾಗ್ದಾದ್ ನ ಇರಾಕ್ ಅಧಿಕಾರಿಯೊಬ್ಬರು ಮೊದಲಿಗೆ ಹಲವಾರು ಕ್ಷಿಪಣಿಗಳು ಯು.ಎಸ್. ರಾಯಭಾರ ಕಚೇರಿಗೆ ಅಪ್ಪಳಿಸಿವೆ. ನೆರೆಯ ಇರಾನ್ ನಿಂದ ನಗರದಲ್ಲಿ ಕ್ಷಿಪಣಿಗಳನ್ನು ಉಡಾವಣೆ ಮಾಡಲಾಗಿದೆ ಎಂದು ಅಮೆರಿಕದ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಯಾವುದೇ ಸಾವುನೋವಿನ ವರದಿಯಾಗಿಲ್ಲ.
ಎಷ್ಟು ಕ್ಷಿಪಣಿಗಳನ್ನು ಹಾರಿಸಲಾಗಿದೆ ಮತ್ತು ಅವು ನಿಖರವಾಗಿ ಎಲ್ಲಿ ಇಳಿದಿವೆ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಯು.ಎಸ್. ರಕ್ಷಣಾ ಅಧಿಕಾರಿ ಹೇಳಿದರು.