Ad

ಐಸಿಯುನಲ್ಲಿದ್ದ ತಂದೆಯ ಮುಂದೆಯೇ ನೆರವೇರಿತು ಮಗಳ ಮದುವೆ

ಸಂಭ್ರಮದಲ್ಲಿ ನಡೆಯಬೇಕಿದ್ದ ಮದುವೆಯೊಂದು ಆಸ್ಪತ್ರೆಯ ಐಸಿಯುನಲ್ಲಿ ವಿಶಿಷ್ಟವಾಗಿ ನಡೆದಿರುವ ಮೂಲಕ ಸುದ್ದಿಯಾಗಿದೆ.ಲಕ್ನೋ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಈ ಘಟನೆ ನಡೆದಿದ್ದು, ಅದರ ವಿಡಿಯೋ ಇದೀಗ ವೈರಲ್ ಆಗಿದೆ.

ಲಕ್ನೋ: ಸಂಭ್ರಮದಲ್ಲಿ ನಡೆಯಬೇಕಿದ್ದ ಮದುವೆಯೊಂದು ಆಸ್ಪತ್ರೆಯ ಐಸಿಯುನಲ್ಲಿ ವಿಶಿಷ್ಟವಾಗಿ ನಡೆದಿರುವ ಮೂಲಕ ಸುದ್ದಿಯಾಗಿದೆ.ಲಕ್ನೋ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಈ ಘಟನೆ ನಡೆದಿದ್ದು, ಅದರ ವಿಡಿಯೋ ಇದೀಗ ವೈರಲ್ ಆಗಿದೆ.

Ad
300x250 2

ಲಕ್ನೋ ಚೌಕ್‌ನ ನಿವಾಸಿ ಮೊಹಮ್ಮದ್ ಇಕ್ಬಾಲ್ ಅವರ ತಮ್ಮ ಪುತ್ರಿಯ ಮದುವೆಯ ದಿನಾಂಕ ಸಮೀಪಿಸುತ್ತಿದ್ದಂತೆಯೇ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಂದೆಗೆ ತನ್ನ ಮಗಳ ಮದುವೆ ತನ್ನ ಮುಂದೆಯೇ ನಡೆಯಬೇಕೆನ್ನುವ ಆಸೆ ಇರುತ್ತದೆ. ಹೀಗಾಗಿ ಎರಡೂ ಕುಟುಂಬದ ಹಿರಿಯರು ಒಂದು ನಿರ್ಧಾರಕ್ಕೆ ಬಂದಿದ್ದಾರೆ.

ಎರಾ ವೈದ್ಯಕೀಯ ಕಾಲೇಜಿನ ವೈದ್ಯರ ಸಹಕಾರದೊಂದಿಗೆ ಇಕ್ಬಾಲ್‌ ಅವರ ಆಸೆಯನ್ನು ನೆರವೇರಿಸಲಾಗಿದೆ. ಎರಡೂ ಕುಟುಂಬಸ್ಥರು ಐಸಿಯುನಲ್ಲಿ ಮಾಸ್ಕ್‌ ಧರಿಸಿಕೊಂಡು ಮೌಲಾನಾ ಅವರನ್ನು ಕರೆಸಿ ನಿಕಾಹ್‌ ನಡೆಸಿಕೊಟ್ಟಿದ್ದಾರೆ. ಬೆಡ್‌ ನಲ್ಲಿ ಅನಾರೋಗ್ಯದಿಂದ ಮಲಗಿದ್ದ ಇಕ್ಬಾಲ್‌ ಮಗಳ ಮದುವೆಯನ್ನು ನೋಡಿ ಖುಷಿಪಟ್ಟಿದ್ದಾರೆ.

 

Ad
Ad
Nk Channel Final 21 09 2023
Ad