Bengaluru 22°C
Ad

ಸೋನಿ ಇಂಡಿಯಾ ಅಲ್ಟ್‌ ಸರಣಿಯ ಸ್ಪೀಕರ್‌, ಹೆಡ್‌ಫೋನ್‌ ಬಿಡುಗಡೆ

ಸೋನಿ ಇಂಡಿಯಾ ಅಲ್ಟ್‌ ಸರಣಿಯ ಸ್ಪೀಕರ್‌, ಹೆಡ್‌ಫೋನ್‌ ಬಿಡುಗಡೆ

ನವದೆಹಲಿ : ಸೋನಿ ಇಂಡಿಯಾ ಅಲ್ಟ್‌ ಪವರ್‌ ಸೌಂಡ್‌ ಸರಣಿಯ 4 ಸಾಧನಗಳನ್ನು ಸೋಮವಾರ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಅಲ್ಟಿಮೇಟ್‌ ಧ್ವನಿಯ ಸರಣಿಯಲ್ಲಿ ವೈರ್‌ಲೆಸ್‌ ಸ್ಪೀಕರ್‌ಗಳಾದ ಯುಎಲ್‌ಟಿ ಟವರ್‌ 10, ಯುಎಲ್‌ಟಿ ಫೀಲ್ಡ್‌ 7, ಯುಎಲ್‌ಟಿ ಫೀಲ್ಡ್‌ 1, ಮತ್ತು ವೈರ್‌ಲೆಸ್‌ ಹೆಡ್‌ಫೋನ್‌ ಯುಎಲ್‌ಟಿ ವೇರ್‌ ಬಿಡುಗಡೆಯಾಗಿವೆ.

ಯುಎಲ್‌ಟಿ ಟವರ್‌ 10: ಪ್ರಬಲ ಬೇಸ್‌, 360 ಧ್ವನಿ ಹಾಗೂ ಕರಾವೋಕೆ, ವೈರ್‌ಲೆಸ್‌ ಮೈಕ್‌ ಇದರಲಿದ್ದು, ಮನೆಯಲ್ಲಿ ಅಥವಾ ಹಾಲ್‌ನಲ್ಲಿ ಪಾರ್ಟಿ ಅಯೋಜಿಸಿ ಸಂಗೀತ ಪ್ಲೇ ಮಾಡಲು ಸೂಕ್ತ. ದೊಡ್ಡ ಗಾತ್ರದ ಈ ಟವರ್‌ಸ್ಪೀಕರ್‌ನಲ್ಲಿ ಯುಎಲ್‌ಟಿ ಪವರ್‌ ಸೌಂಡ್‌ನ ಎರಡು ಮೋಡ್‌ಗಳಿದ್ದು, ಆಕರ್ಷಕ ಎಲ್‌ಇಲಡಿ ಲೈಟ್‌ಗಳಿವೆ. ಸುತ್ತಮುತ್ತ ಇತರ ಶಬ್ದಗಳಿದ್ದರೂ ಸ್ಪಷ್ಟ ಸಂಗೀತವನ್ನು ಒದಗಿಸಲು ಸ್ವಯಂಚಾಲಿತ ಧ್ವನಿ ವ್ವವಸ್ಥೆ ಇದೆ.

ಯುಎಲ್‌ಟಿ ಫೀಲ್ಡ್‌ 7 : ಜಲನಿರೋಧಕ ಮತ್ತು ಧೂಳು ನಿರೋಧಕವಾಗಿರುವ ಈ ಸ್ಪೀಕರ್‌, ಮನೆಯೊಳಗೆ ಅಥವಾ ಪ್ರವಾಸಕ್ಕೆ ಹೋದಾಗ ಹೋರಾಂಗಣದಲ್ಲೂ ಸಂಗೀತವನ್ನು ಪ್ಲೇ ಮಾಡಲು ಅನುಕೂಲ. ಇದರಲ್ಲೂ ಕರಾವೊಕೆ ಮೈಕ್‌, ಗಿಟಾರ್‌ ಇನ್‌ಪುಟ್‌ ಇದ್ದು, ಬೇಕಾದಲ್ಲಿ ತೆಗೆದುಕೊಂಡು ಹೋಗಬಹುದು. 30 ಗಂಟೆಯ ಬ್ಯಾಟರಿ ಬಾಳಿಕೆ ಇದ್ದು ವೇಗವಾಗಿ ಚಾರ್ಜ್‌ ಆಗುತ್ತದೆ.

ಯುಎಲ್‌ಟಿ ಫೀಲ್ಡ್‌ 1: ಇದು ಕೂಡ ಜಲನಿರೋಧಕ, ಧೂಳು ನಿರೋಧಕವಾಗಿ ಸಣ್ಣ ವೈರ್‌ಲೆಸ್‌ ಸ್ಪೀಕರ್‌ ಆಗಿದ್ದು ಬೇಕಾದಲ್ಲಿ ಒಯ್ಯಬಹುದು.12 ಗಂಟೆ ಬ್ಯಾಟರಿ ಸಾಮರ್ಥ್ಯ ಇದೆ.
ಯುಎಲ್‌ಟಿ ವೇರ್‌1:ಅತ್ಯುತ್ತಮ ಬೇಸ್‌ ಮತ್ತು ಪ್ರೀಮಿಯಮ್‌ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲಿಂಗ್‌ನೊಂದಿಗೆ ಹೊಸ ಯುಎಲ್‌ಟಿಇ ವೇರ್‌ ಹೆಡ್‌ಫೋನ್‌ ವೈಯಕ್ತಿಕ ಬಳಕೆಗೆ ಬ್ಲೂಟೂತ್‌ ಸಂಪರ್ಕಿತ ಹೆಡ್‌ಫೋನ್‌. ನಾಯ್ಸ್‌ ಕ್ಯಾನ್ಸಲಿಂಗ್‌ ವ್ಯವಸ್ಥೆ, ಅಲ್ಟ್‌ ಬಟನ್‌, ಸಂಗೀತದ ಅದ್ಭುತ ಅನುಭೂತಿಗಾಗಿ ಗರಿಷ್ಠ ಬೇಸ್‌ ಈ ವೈಶಿಷ್ಟ್ಯಗಳೊಂದಿಗೆ ಸೋನಿ ಈ ನಾಲ್ಕು ಉತ್ಪನ್ನಗಳನ್ನು ಮಾರುಕಟ್ಟೆಗಳಿಸಿದೆ.

ಬೆಲೆ ಹೀಗಿದೆ,
ಯುಎಲ್‌ಟಿ ಟವರ್‌ 10 : ರೂ.89,990
ಯುಎಲ್‌ಟಿ ಫೀಲ್ಡ್‌ 7 : ರೂ. 39, 990
ಯುಎಲ್‌ಟಿಇ ಫೀಲ್ಡ್‌ 1: ರೂ. 10,990
ಯುಎಲ್‌ಟಿ ವೇರ್‌ : ರೂ.16.990

Ad
Ad
Nk Channel Final 21 09 2023
Ad