Bengaluru 23°C
Ad

ತುಳುವರಿಗೊಂದು ಸಿಹಿ ಸುದ್ದಿ : ಗೂಗಲ್‌ ಟ್ರಾನ್ಸ್‌ಲೇಟರ್‌ ಪಟ್ಟಿಗೆ ಸೇರಿದ ತುಳು ಭಾಷೆ

ಗೂಗಲ್‌ ಇದೀಗ ತುಳುವರಿಗೊಂದು ಸಿಹಿ ಸುದ್ದಿ ನೀಡಿದೆ.ಟೆಕ್‌ ದೈತ್ಯ ಗೂಗಲ್‌ ತನ್ನ ಬಳಕೆದಾರರಿಗೆ ಮ್ಯಾಪ್‌, ಜಿಮೇಲ್‌, ಕ್ರೋಮ್‌, ಗೂಗಲ್‌ ಡ್ರೈವ್‌ನಂತಹ ಹಲವಾರು ಉಪಯುಕ್ತ ಅಪ್ಲಿಕೇಶನ್‌ಗಳನ್ನು ನೀಡುತ್ತಾ ಬಂದಿದೆ. ಅವುಗಳಲ್ಲಿ ಗೂಗಗ್‌ ಟ್ರಾನ್ಸ್‌ಲೇಟರ್‌ ಪ್ರಪಂಚದಾದ್ಯಂತ ಬಹಳಷ್ಟು ಜನಪ್ರಿಯವಾಗಿದೆ.

ಗೂಗಲ್‌ ಟ್ರಾನ್ಸ್‌ಲೇಟರ್‌ನಲ್ಲಿ ಇಲ್ಲಿಯವರೆಗೆ ಕನ್ನಡ, ಹಿಂದಿ, ತೆಲುಗು ಸೇರಿದಂತೆ ಭಾರತದ ಪ್ರಮುಖ ಭಾಷೆಗಳ ಭಾಷಾಂತರ ಸೌಲಭ್ಯ ಮಾತ್ರ ಲಭ್ಯವಿತ್ತು. ಇದೀಗ ಗೂಗಲ್‌ ಅನುವಾದ ಪಟ್ಟಿಗೆ ತುಳು ಭಾಷೆಯೂ ಕೂಡಾ ಸೇರ್ಪಡೆಯಾಗಿದ್ದು, ಈ ಮೂಲಕ ಟೆಕ್‌ ದೈತ್ಯ ಗೂಗಲ್‌ನಲ್ಲಿ ತುಳುವಿಗೂ ಗೌರವ ಸಿಕ್ಕಂತಾಗಿದೆ.

ಇನ್ನು ಮುಂದೆ ತುಳು ಭಾಷಿಗರು ಇಂಗ್ಲೀಷ್‌ ಅಥವಾ ಇನ್ನಾವುದೇ ಪದಗಳನ್ನು ಗೂಗಲ್‌ ಟ್ರಾನ್ಸ್‌ಲೇಟರ್‌ನಲ್ಲಿ ನೇರವಾಗಿ ತುಳುವಿನಲ್ಲಿಯೇ ಅರ್ಥೈಸಿಕೊಳ್ಳಬಹುದು. ಅಲ್ಲದೆ ಇದು ಅನ್ಯ ಭಾಷಿಗರಿಗೆ ತುಳು ಪದಗಳನ್ನು ಅರ್ಥೈಸಿಕೊಳ್ಳುವುದಕ್ಕೂ ಅನುಕೂಲಕರವಾಗಿದೆ.

Ad
Ad
Nk Channel Final 21 09 2023
Ad