Showing 20 of 4103 posts • Page 45 of 206
ಬೆಂಗಳೂರು ಮೆಟ್ರೋ ದರ ಪರಿಷ್ಕರಣೆ ವಿಚಾರವಾಗಿ ಮಂಗಳೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರವಾಗಿ ನಮ್ಮನ್ನು ಯಾರೂ ಸಂಪರ್ಕ ಮಾಡಿಲ್ಲ ಎಂದರು.
ಪಿಲಿಕುಳ ಜೈವಿಕ ಉದ್ಯಾನವನದ (ಅಥವಾ ಮೃಗಾಲಯ) ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ (ZAK) ಹಸ್ತಾಂತರಿಸಲು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವು ಉತ್ಸುಕವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೆಚ್.ವಿ. ದರ್ಶನ್ ಹೇಳಿದ್ದಾರೆ.
ಗಡಾಯಿಕಲ್ಲು ಚಾರಣ ಪ್ರವೇಶ ತಾತ್ಕಾಲಿಕ ನಿಷೇಧಿಸಿ ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದಿಂದ ಆದೇಶ ಹೊರಡಿಸಲಾಗಿದೆ.
ಮುಂದಿನ ಐದು ವರ್ಷ ನನ್ನ ತಂದೆಯವರೇ ಸಿಎಂ ಆಗಿರುತ್ತಾರೆ, ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿರುವುದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ವ್ಯಂಗ್ಯದ ಪ್ರತಿಕ್ರಿಯೆ ನೀಡಿದ್ದಾರೆ.
ಕೇಂದ್ರ ಸರಕಾರವು ಮನ್ರೇಗಾ ಸ್ವರೂಪ ಬದಲಾವಣೆ ಹಾಗೂ ಮಹಾತ್ಮ ಗಾಂಧೀಜಿ ಹೆಸರು ಬದಲಾವಣೆ ಮಾಡಿರುವುದನ್ನು ವಿರೋಧಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಸುಳ್ಯದಿಂದ ಮುಲ್ಕಿ ವರೆಗೆ 4 ದಿನಗಳ 100 ಕಿಮೀ ಪಾದಯಾತ್ರೆಯನ್ನು ಫೆ.9ರಿಂದ 12ರವರೆಗೆ ಆಯೋಜಿಸಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ತಿಳಿಸಿದ್ದಾರೆ.
ಬಹ್ರೇನ್ನ ಭಾರತೀಯ ಎನ್ಆರ್ಐ ಸಮುದಾಯದಲ್ಲಿ ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿದ್ದ, ಮಂಗಳೂರು ಮೂಲದ ಹಿರಿಯ ಸಮಾಜಸೇವಕ ಆನಂದ್ ಲೋಬೊ (63) ಫೆಬ್ರವರಿ 5ರಂದು ಮಂಗಳೂರಿನಲ್ಲಿ ನಿಧನರಾದರು.
ಫೆ.7 ರಂದು ಕ್ಯಾನ್ಸರ್ ರೋಗಿಗಳಿಗೆ ಬೆಂಬಲ ನೀಡಲು ಎ.ಜೆ. ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಿಂದ ಕೂದಲು ದಾನ ಶಿಬಿರ
ಮಂಗಳೂರಿನಲ್ಲಿ ತಂತ್ರಜ್ಞಾನದ ಹೊಸ ದಿಗಂತ ತೆರೆದ ಸ್ಪೇನ್ ರಾಯಭಾರಿ: ‘ದ ಗ್ರೇಟ್ ರಿಸೆಟ್’ ಲೋಕಾರ್ಪಣೆ
ರಾಷ್ಟ್ರೀಯ ಹೆದ್ದಾರಿಯ ನಂತೂರಿನಲ್ಲಿ ಪ್ರೈವರ್ ನಿರ್ಮಿಸುವ ಪ್ರಸ್ತಾವನೆಗ ಸಂಬಂಧಿ ಸಮಗ್ರ ಯೋಜನಾ ವರದಿ ( ಡಿಪಿಆರ್) ತಯಾರಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.
ಪಿಲಿಕುಳ ಮೃಗಾಲಯ ಬಂದ್ ಆದೇಶ ಬಂದಿಲ್ಲ, ಪಿಲಿಕುಳ ಮೃಗಾಲಯ ಬಂದ್ ಮಾಡಬೇಕೆಂದು ಹೈಕೋರ್ಟ್ ಆದೇಶ ಕೊಟ್ಟಿರುವುದು ತಮಗೆ ಗೊತ್ತಿಲ್ಲ. ಅಂತಹ ಯಾವುದೇ ಆದೇಶ ತಮಗೆ ಬಂದಿಲ್ಲ ಎಂದು ಜಿಲ್ಲಾಧಿಕಾರಿ ದರ್ಶನ್ ಮಾಹಿತಿ ನೀಡಿದರು.
ನೇಪಾಳದಲ್ಲಿ ಕುಳಿತು ಭಾರತೀಯರನ್ನು ಗುರಿಯಾಗಿಸಿಕೊಂಡು ಭಾರಿ ಮೊತ್ತದ ಹೂಡಿಕೆ ವಂಚನೆ ನಡೆಸುತ್ತಿದ್ದ ಅಂತರರಾಜ್ಯ ಹಾಗೂ ಅಂತರರಾಷ್ಟ್ರೀಯ ವಂಚಕರ ಜಾಲವನ್ನು ಮಂಗಳೂರು ನಗರ ಸೆನ್ ಕೈಂ ಪೊಲೀಸ್ ಠಾಣೆಯವರು ಭೇದಿಸಿದ್ದು, ಒಟ್ಟು 11 ಜನ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
ಬೈಕ್ ಗೆ ಕಾರು ಡಿಕ್ಕಿ ಹೊಡೆದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಬಳಿ ನಡೆದಿದೆ.
ನಗರದಲ್ಲಿ ಹೆಲಿಕಾಪ್ಟರ್ಗಳಿಗೆ ಶಾಶ್ವತ ಹೆಲಿಪ್ಯಾಡ್ ನಿರ್ಮಿಸುವ ಆವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಜಾಗ ನಿಗದಿಪಡಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದೆ ಎಂದು ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್ವಿ ಹೇಳಿದ್ದಾರೆ.
ಕಳೆದ 14 ವರ್ಷದಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಮುಕ್ಕಚೇರಿ ಉಳ್ಳಾಲದ ಮಹಮ್ಮದ್ ಸಂಶೀರ್ ಎಂದು ಗುರುತಿಸಲಾಗಿದೆ.
ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಳೆದ ಏಳು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ರಾಜಕೀಯದಲ್ಲಿ ಹೆಣ್ಣುಮಕ್ಕಳು ಗ್ಲಾಮರಸ್ ಆಗಿರ್ಬೇಕು ಅನ್ನೊದು ಹೆಚ್ಚಾಗಿದೆ ಎಂದು ಮಂಗಳೂರಿನಲ್ಲಿ ಮಾಜಿ ಸಚಿವೆ ಕಾಂಗ್ರೆಸ್ ನಾಯಕಿ ಮೋಟಮ್ಮ ಹೇಳಿಕೆ ನೀಡಿದರು.
ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿಯಾಗಿದ್ದ ಜಾಮೀನು ರಹಿತ ವಾರೆಂಟ್ ಕುರಿತು ಮಹೇಶ್ ಶೆಟ್ಟಿ ತಿಮರೋಡಿ ಅವರು ಬಂಟ್ವಾಳ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ಪರಿಗಣಿಸಿ ಜಾಮೀನು ಮಂಜೂರು ಮಾಡಿದೆ.
ಸ್ಮಾರ್ಟ್ ಸಿಟಿ ಯೋಜನೆ ಯಡಿ ಎಮ್ಮೆಕೆರೆ ಈಜುಕೊಳವನ್ನು ರೂ. 24.94 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಎಎಪಿ ಮಂಗಳೂರು ಸಂಶೋಧನಾ ತಂಡವು ಈ ಈಜು ಕೊಳದ ನಿರ್ಮಾಣದ ಸಮಯ ದಲ್ಲಿ ಅತಿಯಾಗಿ ಹೆಚ್ಚಿದ ವೆಚ್ಚಗಳ ಬಗ್ಗೆ ಮತ್ತು ನಿಯಮಗಳ ಪಾಲನೆಯ ನ್ಯೂನತೆಗಳು ಮತ್ತು ಈಜುಕೊಳದ ರಚನೆ ಯನ್ನು ನೆಲಮಟ್ಟ ದಿಂದ ಎತ್ತರಿಸಲಾಗಿದ್ದು, ಇದಕ್ಕೆ ಪೈಲಿಂಗ್ ಅಗತ್ಯವಿರುತ್ತದೆ.
ತುಳುನಾಡಿನ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಗುರುತಿಸುವಂತಹ ಕಂಬಳಕ್ಕೂ ಇದೀಗ ಚಿನ್ನದ ದರ ಏರಿಕೆಯ ನೇರ ಪರಿಣಾಮ ತಟ್ಟಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ನಾಗಾಲೋಟದಂತೆ ಏರಿಕೆಯಾಗುತ್ತಿದ್ದು, ಇದರ ಹೊರೆ ಕಂಬಳ ಕೂಟಗಳ ಮೇಲೂ ಹೆಚ್ಚಾಗಿದೆ.
ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಐಕಳ ಬಾವ ಕಾಂತಾಬಾರೆ-ಬೂದಾಬಾರೆ ಕಂಬಳವು ಫೆ.7 ಮತ್ತು 8ರಂದು ನಡೆಯಲಿದ್ದು, ಇದರ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದೆ.