ಮಂಗಳೂರು : ನಗರದಲ್ಲಿ ಹೆಲಿಕಾಪ್ಟರ್ಗಳಿಗೆ ಶಾಶ್ವತ ಹೆಲಿಪ್ಯಾಡ್ ನಿರ್ಮಿಸುವ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಜಾಗ ನಿಗದಿಪಡಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದೆ ಎಂದು ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್ವಿ ಹೇಳಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಗುರುವಾರ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಂಗಳೂರಿನಲ್ಲಿ ಅನೇಕ ಆಸ್ಪತ್ರೆಗಳು ಇರುವ ಕಾರಣದಿಂದಾಗಿ ಮೆಡಿಕಲ್ ತುರ್ತು ಆವಶ್ಯಕತೆಗಳಿಗೆ, ವಿಐಪಿ ಗಳಿಗೆ, ಹೆಲಿಟ್ಯೂರಿಸಮ್ಗೆ ಹೆಲಿಪ್ಯಾಡ್ ಅಗತ್ಯ ನಗರದಲ್ಲಿ ಪ್ರತ್ಯೇಕ ಹೆಲಿಪ್ಯಾಡ್ ಇಲ್ಲದ ಕಾರಣದಿಂದಾಗಿ ವಿಐಪಿಗಳು ಆಗಮಿಸುವಾಗ ಪ್ರತಿಬಾರಿಯೂ ಸಮಸ್ಯೆ ಎದುರಾಗುತ್ತಿದೆ. ಹೆಲಿಟೂರಿಸಮ್ ಗೂ ಶಾಶ್ವತ ಹೆಲಿಪ್ಯಾಡ್ ಹೆಚ್ಚು ಅನುಕೂಲವಾಗುತ್ತದೆ ಎಂದು ನುಡಿದರು.

