ಮಂಗಳೂರು : ರಾಜಕೀಯದಲ್ಲಿ ಹೆಣ್ಣುಮಕ್ಕಳು ಗ್ಲಾಮರಸ್ ಆಗಿರ್ಬೇಕು ಅನ್ನೊದು ಹೆಚ್ಚಾಗಿದೆ ಎಂದು ಮಂಗಳೂರಿನಲ್ಲಿ ಮಾಜಿ ಸಚಿವೆ ಕಾಂಗ್ರೆಸ್ ನಾಯಕಿ ಮೋಟಮ್ಮ ಹೇಳಿಕೆ ನೀಡಿದರು.
ಮಹಿಳಾ ವೈಭವ 2026 ಕಾರ್ಯಕ್ರಮದಲ್ಲಿ ಮೋಟಮ್ಮ ಭಾಷಣ ಮಾಡಿದರು. ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದಿಂದ ಕಾರ್ಯಕ್ರಮ ಆಯೋಜಿಸಿದ್ದು, ರಾಜಕೀಯದಲ್ಲಿ ಮಹಿಳೆಯರು ಚುರುಕಾಗಿರಬೇಕು.
ಅದನ್ನು ಬಿಟ್ಟು, ಹೆಣ್ಣುಮಕ್ಕಳು ನಾವು, ಗ್ಲಾಮರಸ್ ಆಗಿ ಇರ್ಬೇಕು. ರಾಜಕೀಯ ಮುಖಂಡರ ನಮ್ಮನ್ನು ಗುರುತಿಸಬೇಕು. ಅವರಿಗೆ ನಾವು ಬಹಳ ಒಬಿಡಿಯಂಟ್ ಆಗಿ ಇರಬೇಕು ಇದನ್ನು ನಾವು ಬಿಡಬೇಕು. ಎಲ್ಲಿಯವರೆಗೂ ಹಲ್ಲುಕಿರಿಯೋದನ್ನು ನಾವು ಬಿಡಲ್ಲ, ಅಲ್ಲಿಯವರೆಗೂ ನಾವು ರಾಜಕೀಯದಲ್ಲಿ ಊಟಕ್ಕೆ ಉಪ್ಪಿನಕಾಯಿ ಅಷ್ಟೆ ಎಂದರು.

