ಮಂಗಳೂರು: ಬೆಂಗಳೂರು ಮೆಟ್ರೋ ದರ ಪರಿಷ್ಕರಣೆ ವಿಚಾರವಾಗಿ ಮಂಗಳೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರವಾಗಿ ನಮ್ಮನ್ನು ಯಾರೂ ಸಂಪರ್ಕ ಮಾಡಿಲ್ಲ ಎಂದರು.
ಮೆಟ್ರೋ ಚೇರ್ ಮೇನ್ ಆಗಿ ಕೇಂದ್ರ ಸರ್ಕಾರದ ಚೇರ್ ಮೇನ್ ಇದ್ದಾರೆ. ಇವತ್ತು ಅಥವಾ ನಾಳೆ ಅವರ ಜೊತೆ ಮಾತನಾಡುತ್ತೇನೆ. ಜನರಿಗೆ ತೊಂದರೆ ಕೊಡೋಕೆ ಬಿಡಲ್ಲ. ಮೆಟ್ರೋ ದರ ಪರಿಷ್ಕರಣೆ ಬಗ್ಗೆ ಮಾತನಾಡುತ್ತೇನೆ ಎಂದರು.

