Bengaluru 22°C
Ad

ತೈಲ ಬೆಲೆ ಏರಿಕೆ ಖಂಡಿಸಿ ಉಮೇಶ್ ಕೆ ಮುದ್ನಾಳ್ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ

ರಾಜ್ಯ ಸರ್ಕಾರದ ತೈಲ ಬೆಲೆ ಏರಿಕೆ ಖಂಡಿಸಿ ಉಮೇಶ್ ಕೆ ಮುದ್ನಾಳ್ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ

ಯಾದಗಿರಿ: ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರರಾದ ಉಮೇಶ್ ಕೆ ಮುದ್ನಾಳ್ ಅವರು ರಾತ್ರೋರಾತ್ರಿ ಸರ್ಕಾರದ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಖಂಡಿಸಿ ಗಿರಿನಾಡು ಟ್ಯಾಕ್ಸಿ ಚಾಲಕರೊಂದಿಗೆ ಬೃಹತ್ ಪ್ರತಿಭಟನೆ ನಡೆಸಿದ್ರು‌. ಟ್ಯಾಕ್ಸಿ ಚಾಲಕರು ಕಾರುಗಳನ್ನ ಮಾನವ ಸರಪಳ್ಳಿಯಂತೆ ವಾಹನಗಳನ್ನು ಸರಪಳಿಯನ್ನಾಗಿ ನಗರದ ಸುಭಾಷ್ ವೃತ್ತದಲ್ಲಿ ರಸ್ತೆ ತಡೆದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತೈಲ ಬೆಲೆ ಏರಿಕೆಯಿಂದ ರೈತರಿಗೆ, ಬಡವರಿಗೆ ಟ್ಯಾಕ್ಸಿ, ಆಟೋ ಚಾಲಕರ ಮೇಲೆ ಹೊರೆಯಾಗುತ್ತಿದ್ದು, ತಕ್ಷಣ ರಾಜ್ಯ ಸರ್ಕಾರದ ತೈಲ ಬೆಲೆ ಏರಿಕೆ ಆದೇಶ ಹಿಂಪಡೆಯುವಂತೆ ಒತ್ತಾಯಿಸಿದ್ರು. ಜನರಿಗೆ ಅನುಕೂಲ ಮಾಡಿಕೊಡಬೇಕಾದ್ರೇ ಸರ್ಕಾರದ ಜನಪ್ರತಿನಿಧಿಗಳು ಪಡೆಯುವ ಸೌಲತ್ತುಗಳನ್ನ ತ್ಯಾಗ ಮಾಡಿ ಅಂತ ಜನಪ್ರತಿನಿಧಿಗಳ ವಿರುದ್ಧ ಕಿಡಿ ಕಾರಿದ್ರು. ಈ ವೇಳೆ ರಫೀಕ್ ಪಟೇಲ್, ಬಾಬಾ ಖಾನ್, ನೈಮ್ ಶೇಕ್, ಮರೆಪ್ಪ, ರಫೀಕ್ ಅಪ್ಸರ್, ವೆಂಕಟರೆಡ್ಡಿ, ಚಂದ್ರಶೇಖರ, ಬನಶೆಂಕರ್, ಮಹಿಬೂಬ್, ಮುತ್ತು, ಬನ್ನಪ್ಪ, ಜಮಾಲ್ ಬಾಬಾ ಸಾಬನ್ನ, ಬಸ್ಸು, ನವೀನ್, ಖಂಡಪ್ಪ, ಅಯ್ಯನ, ಶೀವು, ಶರಣು, ಅಶೋಕ್ ಪಾಟೀಲ್, ರಶೀದ್ ಪಾಷಾ, ಸಲೀಮ್ ಸೇರಿ ಮಲ್ಲನಗೌಡ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು

Ad
Ad
Nk Channel Final 21 09 2023
Ad