Bengaluru 22°C
Ad

ಹಾಡಹಗಲೇ ಹರಿದ ನೆತ್ತರು : ಭೀಮಾ ತೀರದಲ್ಲಿ ರೌಡಿಶೀಟರ್ ಭೀಕರ ಹತ್ಯೆ

‌ಜಿಲ್ಲೆಯ ಚಡಚಣ ಪಟ್ಟಣದ ನೀವರಗಿ ರಸ್ತೆ ಬಳಿ ಪೆರೋಲ್ ಮೇಲೆ ಇದ್ದ ರೌಡಿಶೀಟರ್​​ ಅಶೋಕ್ ಮಲ್ಲಪ್ಪ ಗಂಟಗಲ್ಲಿ ಎಂಬಾತನ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.

ವಿಜಯಪುರ: ‌ಜಿಲ್ಲೆಯ ಚಡಚಣ ಪಟ್ಟಣದ ನೀವರಗಿ ರಸ್ತೆ ಬಳಿ ಪೆರೋಲ್ ಮೇಲೆ ಇದ್ದ ರೌಡಿಶೀಟರ್​​ ಅಶೋಕ್ ಮಲ್ಲಪ್ಪ ಗಂಟಗಲ್ಲಿ ಎಂಬಾತನ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.

ಫೈರಿಂಗ್ ವೇಳೆ ಅಶೋಕ್​ನ​ ಬೆನ್ನಿಗೆ 3ಕ್ಕೂ ಹೆಚ್ಚು ಗುಂಡುಗಳು ಬಿದ್ದಿದೆ. ಮನೆಯಿಂದ ಚಡಚಣ ಪಟ್ಟಣಕ್ಕೆ ತೆರಳುತ್ತಿದ್ದಾಗ ಹಂತಕರು ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಇತ್ತೀಚೆಗೆ ಪೆರೋಲ್​ ಮೇಲೆ ಮೃತ ಅಶೋಕ್ ಜೈಲಿನಿಂದ ಹೊರಬಂದಿದ್ದ​​​. ಇತ ಕೊಲೆ ಹಾಗೂ ಇತರೆ ಕೇಸ್​ಗಳಲ್ಲಿ ಅಪರಾಧಿಯಾಗಿದ್ದ. ಇದೀಗ ಹಳೇ ದ್ವೇಷದ ಹಿನ್ನೆಲೆ ರೌಡಿಶೀಟರ್​ ಅಶೋಕ್​ನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಚಡಚಣ ಪಟ್ಟಣ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Ad
Ad
Nk Channel Final 21 09 2023
Ad