Ad

ತೈಲ ಬೆಲೆ ಏರಿಕೆ ಖಂಡಿಸಿ ಬೈಕ್‌ಗೆ ಹಗ್ಗಕಟ್ಟಿ ಎಳೆದು ಬಿಜೆಪಿ ಕಾರ್ಯಕರ್ತರ ಬೃಹತ್ ಪ್ರತಿಭಟನೆ

ಬಿಜೆಪಿ ವಿಜಯಪುರ ಜಿಲ್ಲಾ ಘಟಕದ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಹೇರಿದ್ದು ಖಂಡಸಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ವಿಜಯಪುರ: ಬಿಜೆಪಿ ವಿಜಯಪುರ ಜಿಲ್ಲಾ ಘಟಕದ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಹೇರಿದ್ದು ಖಂಡಸಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

Ad
300x250 2

ನಗರದ ಗಾಂಧಿವೃತ್ತದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೂ ಬೈಕ್‌ಗೆ ಹಗ್ಗಕಟ್ಟಿ ಎಳೆದುಕೊಂಡು ಬರುವುದ ಮೂಲಕ ವಿನೂತನ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಓಬಿಸಿ ಮೋರ್ಚಾ ಉಪಾಧ್ಯಕ್ಷರಾದ ವಿವೇಕಾನಂದ ಡಬ್ಬಿ ಮಾತನಾಡಿ, ಕರ್ನಾಟಕ ರಾಜ್ಯ ಇತಿಹಾಸದಲ್ಲಿ ಇಂದಿನ ಕಾಂಗ್ರೆಸ್ ಸರ್ಕಾರದಷ್ಟು ಜನವಿರೋಧಿ ಎಂದು ಕಂಡಿಲ್ಲ.  ಈ ಸರ್ಕಾರ ಜನಕಲ್ಯಾಣವನ್ನು ಮರೆತು ಭ್ರಷ್ಟಾಚಾರದಲ್ಲಿ ತೊಡಗಿ ರಾಜ್ಯದ ಜನತೆಯನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ಕೂಡಲೇ ಪೆಟ್ರೋಲ್ ಡಿಸೇಲ್ ಏರಿಕೆಯನ್ನು ಕಡಿತಗೊಳಿಸಿ ಈ ನಿರ್ಧಾರವನ್ನು ಹಿಂಪಡೆಯಬೇಕು.

ಈ ಸಂದರ್ಭದಲ್ಲಿ ದೇವರ ಹಿಪ್ಪರಗಿ ಮತಕ್ಷೇತ್ರದ ಮಾಜಿ ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿ, ರಾಜ್ಯದ ಜನತೆಗೆ ನೆಮ್ಮದಿಯ ಬದುಕು ನೀಡಲು ಸಾಧ್ಯವಿಲ್ಲದಿದ್ದರೆ, ಕಾಂಗ್ರೆಸ್ಸಿಗರು ಜನರ ಬದುಕಿನೊಂದಿಗೆ ಚೆಲ್ಲಾಟವಾಡಲು ಹೊರಟಿದ್ದಾರೆ. ಇದನ್ನು ನೋಡಿಕೊಂಡು ಭಾರತೀಯ ಜನತಾ ಪಾರ್ಟಿ, ಕೈಕಟ್ಟಿ ಕೂರಲು ಸಾಧ್ಯವಿಲ್ಲ, ನಿಮ್ಮ ರೈತ ವಿರೋಧಿ, ಜನ ವಿರೋಧಿ, ಬಡವರ ವಿರೋಧಿ ಹಾಗೂ ಮಧ್ಯಮ ವರ್ಗಗಳ ವಿರೋಧಿ ಆಡಳಿತ ಕೊನೆಯಾಗುವ ವರೆಗೆ ನಾವೂ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದರು.

ಪ (1)

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ವಿಜಯಕುಮಾರ ಪಾಟೀಲ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅಭಿವೃದ್ಧಿ ಕೆಲಸ ಆಗಿಲ್ಲ. ಡೀಸೆಲ್ ದರ ಏರಿಕೆಯ ಹಿನ್ನೆಲೆಯಲ್ಲಿ ಕೇವಲ ವಾಹನ ಸವಾರರಿಗೆ ಮಾತ್ರ ಹೊರೆಯಾಗುವುದಿಲ್ಲ, ಇದು ಸರಕು ಸಾಗಾಣಿಕೆಯ ಮೇಲೆ ಪರಿಣಾಮ ಬೀರಲಿದೆ ಎಂದರು.

ಈ ಸಂದರ್ಭದಲ್ಲಿ ಬೆಳಗಾವಿ ವಿಭಾಗದ ಪ್ರಭಾರಿಗಳಾದ ಚಂದ್ರಶೇಖರ ಕವಟಗಿ ಮಾತನಾಡಿ, ಬೆಲೆ ಏರಿಸಿದ ದರ ಹಿಂಪಡೆಯುವವರೆಗೂ ಬಿಜೆಪಿ ಹೋರಾಟ ನಿರಂತರವಾಗಿರುತ್ತದೆ ಎಂದರು.

ಈ ಸಂದರ್ಭದಲ್ಲಿ ನಗರದ ಮಂಡಲ ಅಧ್ಯಕ್ಷರಾದ ಶಂಕರ ಹೂಗಾರ ಮಾತನಾಡಿ, 18 ರಿಂದ 19 ಸ್ಥಾನ ಗೆಲ್ಲುವ ನಿರೀಕ್ಷೆಯನ್ನು ಕಾಂಗ್ರೆಸ್ ಮುಖಂಡರು ಇಟ್ಟುಕೊಂಡಿದ್ದರು, ಅವರು ಈಗ ಹತಾಶರಾಗಿದ್ದಾರೆ. ಹತಾಶರಾಗಿ ಬೆಲೆ ಏರಿಕೆಗೆ ಮುಂದಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಂಜುನಾಥ ಮೀಸೆ, ಇಂಡಿಯ ಕಾಸುಗೌಡ ಬಿರಾದಾರ, ಗುರಲಿಂಗಪ್ಪ ಅಂಗಡಿ, ಸ್ವಪ್ನಾ ಕಣಮುಚನಾಳ ಮಾತನಾಡಿದರು.

ಈ ಸಂದರ್ಭದಲ್ಲಿ ಜನತಾ ಪಾರ್ಟಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳಾದ ಹಾಗೂ ಮಹಾನಗರ ಪಾಲಿಕೆ ಸದಸ್ಯರಾದ ಮಳುಗೌಡ ಪಾಟೀಲ, ಸಾಬು ಮಾಶ್ಯಾಳ, ಈರಣ್ಣ ರಾವುರ, ಪ್ರಭುಗೌಡ ಅಸ್ಕಿ, ಸಿದ್ದು ಬುಳ್ಳಾ, ಸುರೇಶ ಬಿರಾದಾರ, ಚಿದಾನಂದ ಚಲವಾದಿ, ಶ್ರೀನಿವಾಸ ಕಂದಗಲ,

ಅನೀಲ ಉಪ್ಪಾರ, ಮಹೇಂದ್ರ ನಾಯಕ, ರಾಜಕುಮಾರ ಸಗಾಯಿ, ಗೂಳಪ್ಪ ಶಟಗಾರ, ಶರಣು ಕಾಖಂಡಕಿ, ಸಂತೋಷ ಪಾಟೀಲ ಡಂಬಳ, ರಾಕೇಶ ಕುಲಕರ್ಣಿ, ಮಲ್ಲಿಕಾರ್ಜುನ ಕಿವಡೆ, ವಿಜಯ ಜೋಶಿ, ಶಂಕರಗೌಡ ಪಾಟೀಲ, ಕಾಂತು ಶಿಂಧೆ, ಜಗದೀಶ ಮುಚ್ಚಂಡಿ, ಪಾಪುಸಿಂಗ ರಜಪೂತ,

ವಿಕಾಸ ಪದಕಿ, ಶರಣಬಸು ಕುಂಬಾರ, ರಾಜೇಶ ತವಸೆ,ಆನಂದ ಮುಚ್ಚಂಡಿ, ಶಿವಾನಂದ ಮಕಣಾಪೂರ, ಗುರು ತಳವಾರ, ರಾಘು ಕಾಪ್ಸೆ, ಸೀತಲಕುಮಾರ ಓಗಿ, ಶೀಲವಂತ ಉಮರಾಣಿ, ಮಹಾನಗರ ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ಕಿರಣ ಪಾಟೀಲ, ಪ್ರೇಮಾನಂದ ಬಿರಾದಾರ, ರಾಹುಲ ಜಾಧವ, ವಿಠ್ಠಲ ಹೊಸಪೇಟೆ, ಮಲ್ಲಿಕಾರ್ಜು ಗಡಗಿ, ಮಹೇಶ ಒಡೆಯರ ಮತ್ತು ಪ್ರವೀನ ಕೂಡಗಿ, ವಿಠ್ಠಲ ನಡುವಿನಕೇರಿ,

ಪ್ರಕಾಶ ಚವ್ಹಾಣ, ದತ್ತಾ ಗೋಲಾಂಡೆ, ರಾಹುಲ ಆಪ್ಟೆ, ಪ್ರವೀಣ ವಂದಾಲಮಠ, ಸಂತೋಷ ಭೋವಿ, ಸಂತೋಷ ಕುರದಡ್ಡಿ, ವಿನೋದ ಪತ್ತಾರ, ಸಂಗಮೇಶ ಉಕ್ಕಲಿ, ಅನೀಲ ಉಪ್ಪಾರ, ಸಂತೋಷ ನಿಂಬರಗಿ, ಸುಚೀತಾ ಜಾಧವ, ಮಧು ಪಾಟೀಲ, ಸುವರ್ಣ ಕುರ್ಲೆ, ಈರಣ್ಣ ಶಿರಮಗೊಂಡ, ಆನಂದ, ರಾಚು ಬಿರಾದಾರ, ಈರಣ್ಣಾ ಬಿರಾದಾರ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Ad
Ad
Nk Channel Final 21 09 2023
Ad