Bengaluru 22°C
Ad

ಸಾಲುಮರದ ತಿಮ್ಮಕ್ಕ ಅವರ ಆದರ್ಶ ಗುಣ ಎಲ್ಲರಲ್ಲೂ ಬರಬೇಕು: ಪಿಡಿಒ ಜುಂಜೇಗೌಡ

ಪರಿಸರ ಸಮತೋಲನ ಕಾಪಾಡಲು ಹೆಚ್ಚು ಸಸಿಗಳನ್ನು ನೆಡಬೇಕು. ಅವುಗಳನ್ನು ಪಾಲನೆ, ಪೋಷಣೆ ಮಾಡಿ ಗಿಡಗಳಾದ ಮೇಲೆ ಸಂರಕ್ಷಣೆ ಮಾಡಬೇಕು. ವಾತಾವರಣದಲ್ಲಿ ತಾಪಮಾನ ಪ್ರಮಾಣ ಕಡಿಮೆ ಆಗುತ್ತದೆ. ಆರೋಗ್ಯಯುತ ಜೀವನ ನಡೆಸಲು ಉಪಯುಕ್ತವಾಗುತ್ತದೆ ಎಂದು ಪಿಡಿಒ ಜುಂಜೇಗೌಡ ಹೇಳಿದರು.

ಶಿರಾ: ಪರಿಸರ ಸಮತೋಲನ ಕಾಪಾಡಲು ಹೆಚ್ಚು ಸಸಿಗಳನ್ನು ನೆಡಬೇಕು. ಅವುಗಳನ್ನು ಪಾಲನೆ, ಪೋಷಣೆ ಮಾಡಿ ಗಿಡಗಳಾದ ಮೇಲೆ ಸಂರಕ್ಷಣೆ ಮಾಡಬೇಕು. ವಾತಾವರಣದಲ್ಲಿ ತಾಪಮಾನ ಪ್ರಮಾಣ ಕಡಿಮೆ ಆಗುತ್ತದೆ. ಆರೋಗ್ಯಯುತ ಜೀವನ ನಡೆಸಲು ಉಪಯುಕ್ತವಾಗುತ್ತದೆ ಎಂದು ಪಿಡಿಒ ಜುಂಜೇಗೌಡ ಹೇಳಿದರು.

ಶಿರಾ ತಾಲ್ಲೂಕಿನ ರತ್ನಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಸಿರುವನ ಅಭಿಯಾನದಡಿ ಶುಕ್ರವಾರ ಕೂಸಿನ ಮನೆ ಆವರಣದಲ್ಲಿ ಅರೆಹಳ್ಳಿ ಸ್ಮಶಾನ ಹಾಗೂ ಎರಗುಂಟೆಯಿಂದ ರತ್ನ ಸಂದ್ರದವರೆಗೆ ರಸ್ತೆಯ ಬದಿಯಲ್ಲಿ ಸಸಿಗಳನ್ನು ನೀಡಲಾಯಿತು.

ಹ

ಅಭಿಯಾನಕ್ಕೆ ಚಾಲನೆ ನೀಡಿ ಮಾತಾನಾಡಿದ ಅವರು ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ವಾಹನಗಳ ಬೆಳಕಿನ ಮಾಲಿನ್ಯದಿಂದ ಒಟ್ಟು ಪರಿಸರ, ವಾತಾವಾರಣದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದರ ಪರಿಣಾಮವನ್ನೂ ಎಲ್ಲರೂ ಅನುಭವಿಸುತ್ತಿದ್ದೇವೆ. ಸಾವಿರಾರು ಸಸಿಗಳನ್ನು ನೆಟ್ಟು ಸಂರಕ್ಷಣೆ ಮಾಡಿ ಗಿಡಗಳನ್ನಾಗಿಸಿ ಸಂರಕ್ಷಣೆ ಮಾಡಿದ ಸಾಲುಮರದ ತಿಮ್ಮಕ್ಕ ಅವರ ಆದರ್ಶ ಗುಣ ಎಲ್ಲರಲ್ಲೂ ಬರಬೇಕು ಎಂದು ವಿವರಿಸಿದರು ತಾವು ಬೆಳೆಸುವ ಗಿಡಗಳು ಎಲ್ಲರಿಗೂ ಮಾದರಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಿಂಗಮ್ಮ ಶ್ರೀರಂಗಪ್ಪ ಉಪಾಧ್ಯಕ್ಷರಾದ ದಿಲೀಪ್ ಕುಮಾರ್ ಸದಸ್ಯರುಗಳಾದ ಕೃಷ್ಣಪ್ಪ ಮಹದೇವಪ್ಪ ರವಿಕುಮಾರ್ ಅರೆಳ್ಳಿ ಮಂಜುನಾಥ ಪ್ರಾಥಮಿಕ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಅಂಗನವಾಡಿಯ ಶಿಕ್ಷಕರು ಮಕ್ಕಳು ಕೂಸಿನ ಮನೆ ಸಿಬ್ಬಂದಿಗಳು.. ಎನ್ ಆರ್ ಎಲ್ ಎಂ ಒಕ್ಕೂಟದ ಸದಸ್ಯರು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಸಿಬ್ಬಂದಿಗಳು ಹಾಜರಿದ್ದರು.

Ad
Ad
Nk Channel Final 21 09 2023
Ad