Ad

ಸರ್ಕಾರಿ ಶಾಲೆಯ ಮೇಲ್ಛಾವಣಿ ಗಾರೆ ಕುಸಿತ : ಶಿಕ್ಷಕಿಯ ತಲೆಗೆ ಗಾಯ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಕೊಠಡಿಯ ಮೇಲ್ಛಾವಣಿಯ ಗಾರೆ ಕುಸಿದು ಶಿಕ್ಷಕಿಯ ತಲೆಗೆ ಪೆಟ್ಟು ಬಿದ್ದು ಇನ್ನಿತರ ವಿದ್ಯಾರ್ಥಿಗಳು ಪಾರಾಗಿರುವ ಘಟನೆ ಶಿರಾ ನಗರದ ಮಧುಗಿರಿ ರಸ್ತೆಯ ಹತ್ತಿರ ವಾರ್ಡ್ ನಂ 21 ರಲ್ಲಿ ಗುರುವಾರ ನಡೆದಿದೆ.

ತುಮಕೂರು: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಕೊಠಡಿಯ ಮೇಲ್ಛಾವಣಿಯ ಗಾರೆ ಕುಸಿದು ಶಿಕ್ಷಕಿಯ ತಲೆಗೆ ಪೆಟ್ಟು ಬಿದ್ದು ಇನ್ನಿತರ ವಿದ್ಯಾರ್ಥಿಗಳು ಪಾರಾಗಿರುವ ಘಟನೆ ಶಿರಾ ನಗರದ ಮಧುಗಿರಿ ರಸ್ತೆಯ ಹತ್ತಿರ ವಾರ್ಡ್ ನಂ 21 ರಲ್ಲಿ ಗುರುವಾರ ನಡೆದಿದೆ.

Ad
300x250 2

ಫರೀದಾಬಾನು ಗಾಯಗೊಂಡ ಶಿಕ್ಷಕಿ. ಮಧ್ಯಾಹ್ನ ಸಮಯದಲ್ಲಿ ಇದ್ದಕ್ಕಿದ್ದಂತೆ ಪಾಠ ಮಾಡುತ್ತಿದ್ದ ಕೊಠಡಿಯ ಮೇಲ್ಛಾವಣಿಯ ಗಾರೆ ಬಿದ್ದು ಶಿಕ್ಷಕಿಯ ತಲೆಯ ಮೇಲೆ ಕುಸಿದರು ಬಿದ್ದಿದೆ. ಅದೃಷ್ಟವಶಾತ್​ ಶಾಲೆಯಲ್ಲಿದ್ದ ಇನ್ನಿತರ ವಿದ್ಯಾರ್ಥಿಗಳಿಗೆ ಯಾವುದೆ ಹಾನಿಯಾಗಿಲ್ಲ ಈ ಘಟನೆ ನಡೆದಿದೆ, ಇಲ್ಲವಾದ್ರೆ ದೊಡ್ಡ ಅನಾವುತವೇ ಆಗುತ್ತಿತ್ತು.

ಇನ್ನು ಸರ್ಕಾರಿ ಶಾಲೆಗಳು ಅಂದ್ರೆ, ಅದೇಷ್ಟೊ ಜನ ಪೋಷಕರು ಮೂಗು ಮುರಿಯುತ್ತಾರೆ. ಇನ್ನೂ ನಗರದ ಭಾಗದಲ್ಲಿರುವ ಸರ್ಕಾರಿ ಶಾಲೆಗಳನ್ನೇ ನಂಬಿಕೊಂಡು ಬಂದಿದ್ದ ವಿದ್ಯಾರ್ಥಿಗಳು ಬದುಕುಳಿದಿದ್ದೆ ಹೆಚ್ಚು, ದೊಡ್ಡ ಅವಾಂತರವಾಗುವುದಕ್ಕೂ ಮುನ್ನ ಸರ್ಕಾರ ಈ ಕುರಿತು ಎಚ್ಚೇತ್ತುಕೊಳ್ಳಬೇಕಿದೆ.

ಸ (3)

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಬಹಳ ಹಳೆಯ ಕಾಲದ್ದಾಗಿದ್ದು ಶಿಥಿಲಾವಸ್ಥೆ ತಲುಪಿದೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡದಲ್ಲೇ ನಿತ್ಯ ಪಾಠ ಬೋಧನೆ ನಡೆಯುತ್ತಿದೆ. ಶಾಲೆಯ ಕಟ್ಟಡ, ಮೇಲ್ಛಾವಣಿ ಕುಸಿದಿರುವ ಬಗ್ಗೆ ಇದರಿಂದ ಮಕ್ಕಳ ಜೀವಕ್ಕೆ ಅಪಾಯ ಆಗಲಿದೆ ಎಂದು ಮನವಿಯನ್ನು ಮಾಡಿದರು.

ಶಿಕ್ಷಣ ಇಲಾಖೆ ಮತ್ತು ಜನಪ್ರತಿನಿಧಿಗಳನ್ನು ಎಚ್ಚರಿಸಿತ್ತು. ಆದರೆ ಯಾರೊಬ್ಬರೂ ಎಚ್ಚೆತ್ತುಕೊಳ್ಳದಿರುವುದಕ್ಕೆ ಈಗ ವಿದ್ಯಾರ್ಥಿಗಳು ಜೀವ ಭಯದಲ್ಲೇ ನಿತ್ಯ ಪಾಠ ಆಲಿಸುವಂತಾಗಿದೆ. ಮತ್ತೆ ಯಾವಾಗ ಶಾಲೆಯ ಛಾವಣಿಯ ಗಾರೆಕುಸಿದು ಮತ್ಯಾವ ವಿದ್ಯಾರ್ಥಿಯ ತಲೆ ಒಡೆಯುತ್ತದೋ ಎಂದು. ಪಾಲಕರು ಆತಂಕ ವ್ಯಕ್ತ ಪಡಿಸಿ ಹೇಳಿದ್ದಾರೆ.

ಸದರಿ ಶಾಲೆಯ 14 ಕೊಠಡಿಗಳು ಇದ್ದು ಇದರಲ್ಲಿ ಸುಮಾರು 10ಶಿಥಿಲಾವಸ್ಥೆ ತಲುಪಿದೆ. ಶಾಲೆಯಲ್ಲಿ ಸುಮಾರು 240 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಘಟನೆ ಸ್ಥಳಕ್ಕೆ ಕ್ಷೇತ್ರ ಶಿಕ್ಷಣ ಅಧಿಕಾರ ಕೃಷ್ಣಪ್ಪ ನಗರಸಭೆ ಸದಸ್ಯ ಇರ್ಷಾದ್ ಚಾಂದ್ ಭಾಷಾ ಸೇರಿದಂತೆ ಹಲವರು ಭೇಟಿ ನೀಡಿ ಪರಿಶೀಲನೆ ನಡೆಸಿ ತಾತ್ಕಾಲಿಕವಾಗಿ ಶಾಲೆಗೆ ಬದಲಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Ad
Ad
Nk Channel Final 21 09 2023
Ad