Bengaluru 23°C
Ad

ಮನೆ ದೇವರ ಪೂಜೆಗೆ ಹೊರಟಿದ್ದ 13 ಮಂದಿ ದಾರುಣ ಸಾವು : ಮುಗಿಲು ಮುಟ್ಟಿದ ಆಕ್ರಂದನ

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನ ಹಳ್ಳಿಯಲ್ಲಿ ಟಿಟಿ ಮತ್ತು ಲಾರಿ ಅಪಘಾತದ ಪ್ರಕರಣದಲ್ಲಿ ಒಟ್ಟು 13 ಮಂದಿ ಸಾವನ್ನಪ್ಪಿದ್ದಾರೆ. ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮಿಹಟ್ಟಿ ಗ್ರಾಮದವರು.

ಶಿವಮೊಗ್ಗ: ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನ ಹಳ್ಳಿಯಲ್ಲಿ ಟಿಟಿ ಮತ್ತು ಲಾರಿ ಅಪಘಾತದ ಪ್ರಕರಣದಲ್ಲಿ ಒಟ್ಟು 13 ಮಂದಿ ಸಾವನ್ನಪ್ಪಿದ್ದಾರೆ. ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮಿಹಟ್ಟಿ ಗ್ರಾಮದವರು. ಇದೀಗ ಮೃತ ವ್ಯಕ್ತಿಗಳ ಫೋಟೋ ರಿವೀಲ್ ಆಗಿದೆ. ಇವರ ಅಗಲಿಕೆ ಯಿಂದ ಸಂಬಂಧಿಕರು ಮತ್ತು ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದೆ.

15 ದಿನದ ಹಿಂದಷ್ಟೇ ಆದರ್ಶ ಟಿಟಿ ವಾಹನ ಖರೀದಿ ಮಾಡಿದ್ದ. ಈ ಹಿನ್ನೆಲೆಯಲ್ಲಿ ತಂದೆ- ತಾಯಿ ಹಾಗೂ ಕುಟುಂಬಸ್ಥರೊಂದಿಗೆ ದೇವರ ದರ್ಶನಕ್ಕೆ ತೆರಳಿದ್ದ. ಆದರೆ ವಿಧಿಯಾಟವಬೇ ಬೇರೆಯಾಗಿತ್ತು.

ಮೂರು ದಿನಗಳ ಹಿಂದೆ ಕುಟುಂಬಸ್ಥರೆಲ್ಲ ಸೇರಿ ಮನೆದೇವರ ಪೂಜೆಗೆ ಹೋಗಿದ್ದರು. ಆದರೆ ಇಂದು ಬೆಳಗ್ಗೆ 4 ಗಂಟೆ ಸುಮಾರಿಗೆ ನಡೆದ ಅಪಘಾತದಲ್ಲಿ 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿ ಒಟ್ಟು 13 ಪ್ರಯಾಣಿಕರು ಮೃತಪಟ್ಟಿದ್ದಾರೆ. ಟಿಟಿ ಮಾಲಿಕ ನಾಗೇಶ ರಾವ್ ಕುಟುಂಬದಲ್ಲಿ ಒಟ್ಟು ನಾಲ್ಕು ಜನ ಸೇರಿದಂತೆ ಅವರ ಮನೆಯ ಇತರೆ ಸಂಬಂಧಿಕರು ಸಾವನ್ನಪ್ಪಿದ್ದಾರೆ.

ಎಮ್ಮೆಹಟ್ಟಿ ಗ್ರಾಮದ ಶಾಲಾ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಎಮ್ಮೆಹಟ್ಟಿ ಗ್ರಾಮದ ಹಿಂದೂ ರುದ್ರಭೂಮಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆದಿದೆ.

Ad
Ad
Nk Channel Final 21 09 2023
Ad