Bengaluru 25°C
Ad

ರಾಯರ ಮಠದಲ್ಲಿ ನಡೆಯುತ್ತಿದೆ ಹುಂಡಿ ಎಣಿಕೆ ಕಾರ್ಯ : ಮೇ ತಿಂಗಳಲ್ಲಿ ಎಷ್ಟು ಸಂಗ್ರಹವಾಗಿದೆ ಗೊತ್ತಾ?

ಮಂತ್ರಾಲಯದ ರಾಯರ ಮಠದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದೆ. ಇಲ್ಲಿಯವರೆಗೆ ಸುಮಾರು 2 ಕೋಟಿಗೂ ಅಧಿಕ ಲಕ್ಷ ರೂಪಾಯಿ ಸಂಗ್ರಹವಾಗಿದೆ ಎಂಬ ಮಾಹಿತಿ ಲಭಿಸಿದೆ.

ರಾಯಚೂರು: ಇಂದು ಗುರುವಾರ ರಾಯರ ಶ್ರೇಷ್ಠ ದಿನ ಮಂತ್ರಾಲಯದ ರಾಯರ ಮಠದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದೆ. ಇಲ್ಲಿಯವರೆಗೆ ಸುಮಾರು 2 ಕೋಟಿಗೂ ಅಧಿಕ ಲಕ್ಷ ರೂಪಾಯಿ ಸಂಗ್ರಹವಾಗಿದೆ ಎಂಬ ಮಾಹಿತಿ ಲಭಿಸಿದೆ.

ಮಂತ್ರಾಲಯದ ಪೀಠಾಧಿಪತಿ ಡಾ.ಸುಭುದೇಂದ್ರ ತೀರ್ಥರ ನೇತೃತ್ವದಲ್ಲಿ ಹುಂಡಿ ಎಣಿಕೆ ನಡೆಯುತ್ತಿದೆ. 100 ಕ್ಕೂ ಹೆಚ್ಚು ಮಠರ ಸಿಬ್ಬಂದಿಗಳು ಮತ್ತು ಭಕ್ತರಿಂದ ಹುಂಡಿ ಎಣಿಕೆ ಮಾಡುತ್ತಿದ್ದಾರೆ. 29 ದಿನಗಳಲ್ಲಿ 2 ಕೋಟಿ 93 ಲಕ್ಷ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.

ಮೇ ತಿಂಗಳಲ್ಲಿ ಹುಂಡಿಯಲ್ಲಿ ಹಾಕಿರೋ ರಾಯರ ಭಕ್ತರ ಕಾಣಿಕೆಯನ್ನು ಎಣಿಸಲಾಗುತ್ತಿದ್ದು, 136 ಗ್ರಾಂ ಬಂಗಾರ, 1510 ಗ್ರಾಂ ಬೆಳ್ಳಿ ಭಕ್ತರಿಂದ ಕಾಣಿಕೆಯಾಗಿ ಬಂದಿದೆ.

Ad
Ad
Nk Channel Final 21 09 2023
Ad