Bengaluru 22°C
Ad

ನ್ಯಾಯ ಕೇಳಲು ಬಂದ ರೈತರ ಮೇಲೆ ಹಲ್ಲೆ, ದಮ್ಕಿ : ರೈತರ ದಿಢೀರ್ ಪ್ರತಿಭಟನೆ

ನಂಜನಗೂಡು ನಗರದ ಮಿನಿವಿಧಾನಸೌಧದಲ್ಲಿರುವ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನ್ಯಾಯ ಕೇಳಲು ಬಂದ ರೈತರಿಗೆ ಹಲ್ಲೆ ನಡೆಸಿ, ಧಮ್ಕಿ ಹಾಕಿದ ಪರಿಣಾಮ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರೈತರು ದಿಡೀರ್ ಪ್ರತಿಭಟನೆ ನಡೆಸಿದ್ದಾರೆ.

ನಂಜನಗೂಡು; ನಂಜನಗೂಡು ನಗರದ ಮಿನಿವಿಧಾನಸೌಧದಲ್ಲಿರುವ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನ್ಯಾಯ ಕೇಳಲು ಬಂದ ರೈತರಿಗೆ ಹಲ್ಲೆ ನಡೆಸಿ, ಧಮ್ಕಿ ಹಾಕಿದ ಪರಿಣಾಮ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರೈತರು ದಿಡೀರ್ ಪ್ರತಿಭಟನೆ ನಡೆಸಿದ್ದಾರೆ.

ನಂಜನಗೂಡಿನಲ್ಲಿ ಖಾಸಗಿ ಕಂಪ್ಯೂಟರ್ ನವರು ಹೆಚ್ಚುವರಿ ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಸಬ್ ರಿಜಿಸ್ಟರ್ ಕಚೇರಿಯ ಸಿಬ್ಬಂದಿಗಳಿಗೆ ಕೊಡಬೇಕು ಎಂದು ಹೆಚ್ಚುವರಿ 200 ರೂಪಾಯಿ ಹಣವನ್ನು ಮುಸೂಲಿ ಮಾಡಿ ಅಧಿಕಾರಿಗಳಿಗೆ ನೀಡಬೇಕೆಂದು ಹೇಳುತ್ತಿದ್ದಾರೆ. ಅಧಿಕಾರಿಗಳು ದಲ್ಲಾಳಿ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ. ದಳ್ಳಾಳಿ ಮತ್ತು ಏಜೆಂಟರಗಳನ್ನು ಇಟ್ಟುಕೊಂಡು ರೈತರ ಮೇಲೆ ಹಲ್ಲೆ ಮಾಡಿಸಿ ಧಮ್ಕಿ ಹಾಕಿಸಿದ್ದಾರೆ. ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಜನರ ಕೆಲಸ ಕಾರ್ಯಗಳು ನಡೆಯುತ್ತಿಲ್ಲ.

ಕೂಡಲೇ ಇಂತಹ ಭ್ರಷ್ಟ ಅಧಿಕಾರಿಗಳನ್ನು ಅಮಾನತ್ತು ಪಡಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮಹದೇವಸ್ವಾಮಿ ಎಂಬ ರೈತ ಇ.ಸಿ ತೆಗೆದುಕೊಳ್ಳಲು ಹೆಚ್ಚುವರಿ 200 ರೂಪಾಯಿಗಳನ್ನು ಕೇಳುತ್ತಾರೆ. ಹೆಚ್ಚು ಹಣ ಯಾಕೆ ಕೊಡಬೇಕು ಎಂದು ಕೇಳಿದರೆ, ಸಬ್ ರಿಜಿಸ್ಟರ್ ಅಧಿಕಾರಿಗಳಿಗೆ ಕೊಡಬೇಕು. ಇಲ್ಲದಿದ್ದರೆ ಕೆಲಸ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ. ತಹಶೀಲ್ದಾರ್ ಅವರ ಮಾತಿಗೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಪ್ರತಿನಿತ್ಯ ಜನರು ಅಲೆದಾಡುತ್ತಿದ್ದಾರೆ.

ರೈತರು ನ್ಯಾಯವನ್ನು ಕೇಳುತ್ತಿದ್ದರೆ ಪುಂಡ ರೌಡಿಯನ್ನು ಕರೆದು ಹಲ್ಲೆ ಧಮ್ಕಿ ಹಾಕಿಸುತ್ತಾರೆ. ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿ ಸಿಸಿ ಕ್ಯಾಮೆರಾ ಗಳು ಇಲ್ಲ. ಸಿ ಸಿ ಕ್ಯಾಮೆರಾ ಗಳನ್ನು ಅಳವಡಿಸಿಲ್ಲ. ಈ ಕೂಡಲೇ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಬೇಕು. ಇಂತಹ ಭ್ರಷ್ಟಾಧಿಕಾರಿಗಳನ್ನು ನಂಜನಗೂಡಿನಿಂದ ತೊಲಗಿಸಬೇಕು. ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲು ಮಾಡಿಸಬೇಕು. ಈ ಕೂಡಲೇ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ.

ಪ್ರತಿಭಟನೆಯಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಸತೀಶ್ ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ಮಾವು ರಘು, ಮಹಿಳಾ ಘಟಕದ ಅಧ್ಯಕ್ಷೆ ಶೇತ್ವಾ, ಮಂಜುನಾಥ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Ad
Ad
Nk Channel Final 21 09 2023
Ad