News Karnataka Kannada
Saturday, May 04 2024
ಮೈಸೂರು

ಮೈಸೂರಿನ ಚಿತ್ರನಗರಿಗೆ ಪುನಿತ್ ರಾಜ್‌ಕುಮಾರ್ ಹೆಸರು?

Puneeth Raj
Photo Credit :

ಮೈಸೂರು: ಪ್ರತಿಭಾವಂತ ನಟ ಮತ್ತು ಕನ್ನಡದ ಮನೆಮಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಳೆದುಕೊಂಡು ರಾಜ್ಯ ಶೋಕಸಾಗರದಲ್ಲಿ ಮುಳುಗಿರುವಾಗಲೇ ಅಪ್ಪು ಹೆಸರು ಚಿರಸ್ಥಾಯಿಯಾಗಿಸುವ ಸಂತಸದ ಸುದ್ದಿಯೊಂದು ಹೊರಬಂದಿದೆ.

ಮೈಸೂರಿನಲ್ಲಿ ನಿರ್ಮಾಣವಾಗಲಿರುವ ಮಹತ್ವಾಕಾಂಕ್ಷೆಯ ಚಿತ್ರನಗರಿಗೆ ಕರ್ನಾಟಕದ ಯುವರತ್ನ ಪುನಿತ್ ರಾಜ್‌ಕುಮಾರ್ ಅವರ ಹೆಸರಿಡಲು ಚಿಂತನೆ ನಡೆದಿರುವುದು ಗೊತ್ತಾಗಿದೆ. ಇದನ್ನು ಮೈಸೂರಿನಲ್ಲಿ  ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್  ಅವರು ಬಹಿರಂಗಪಡಿಸಿದ್ದು, ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಹೇಳಿದ್ದಾರೆ.

ಜತೆಗೆ ಪುನಿತ್ ರಾಜ್‌ಕುಮಾರ್ ಅವರಿಗೆ ಮೈಸೂರಿನಲ್ಲಿ ದೊಡ್ಡ ವೇದಿಕೆಯಲ್ಲಿ “ನುಡಿನಮನ” ಸಲ್ಲಿಸುವ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸುವುದಾಗಿಯೂ ಅವರು ಹೇಳಿದ್ದಾರೆ. ಈ ಕುರಿತಂತೆ ಹೆಚ್ಚಿನ ಮಾಹಿತಿ ನೀಡಿರುವ ಅವರು, ನುಡಿನಮನ ಕಾರ್ಯಕ್ರಮವನ್ನು ಆಯೋಜಿಸಲು ಉಪಸಮಿತಿಗಳನ್ನು ರಚಿಸಲಾಗುವುದು. ಈ ಸಮಿತಿಗಳು ಚರ್ಚಿಸಿ ನೀಡುವ ಸಲಹೆಯಂತೆ ಅಚ್ಚುಕಟ್ಟಾಗಿ ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯಲ್ಲಿರುವ ಬಯಲುರಂಗ ಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು. ಕಾರ್ಯಕ್ರಮದ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

ಇನ್ನು ನುಡಿನಮನ  ಕಾರ್ಯಕ್ರಮದಲ್ಲಿ ಪುನಿತ್ ರಾಜ್‌ಕುಮಾರ್ ಕುರಿತು ಪುಸ್ತಕ  ಬಿಡುಗಡೆ ಮಾಡಲಾಗುವುದು. ಈ ಪುಸ್ತಕಕ್ಕೆ ಸಾರ್ವಜನಿಕರಿಂದ ಲೇಖನ ಆಹ್ವಾನಿಸಲಾಗುವುದು. ಅಭಿಮಾನಿಗಳು ಲೇಖನ ಕಳುಹಿಸಿಕೊಡಬಹುದು. ನುಡಿನಮನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳನ್ನು ಸಹ ಆಹ್ವಾನಿಸಲಾಗುವುದು ಎಂದು ಅವರು ಹೇಳಿದರು.

ಈ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಶಾಸಕ ಎಲ್. ನಾಗೇಂದ್ರ, ಮುಡಾ ಅಧ್ಯಕ್ಷರಾದ ಹೆಚ್.ವಿ.ರಾಜೀವ್, ವಿವಿಧ ನಿಗಮಮಂಡಳಿಗಳ ಅಧ್ಯಕ್ಷರಾದ ಅಪ್ಪಣ್ಣ, ಕೌಟಿಲ್ಯ ರಘು, ಎ.ಹೇಮಂತ್ ಕುಮಾರ್ ಗೌಡ, ಎಲ್.ಆರ್.ಮಹದೇವಸ್ವಾಮಿ, ಫಣೀಶ್, ಕೃಷ್ಣಪ್ಪಗೌಡ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಡಾ. ವೈ.ಡಿ.ರಾಜಣ್ಣ, ರಾಜಶೇಖರ್ ಕದಂಬ, ಡಾ. ರಾಜ್‌ಕುಮಾರ್ ಶಿವರಾಜ್‌ಕುಮಾರ್ ಸಂಘದ ಅಧ್ಯಕ್ಷರಾದ ರವಿ, ಮಹದೇವ, ನಟ ಜಯಪ್ರಕಾಶ್, ಬಿ.ಎಂ.ರಾಮಚಂದ್ರ, ಸಾಹಿತಿ ಬನ್ನೂರು ರಾಜು, ಭಾನು ಮೋಹನ್, ಮುಳ್ಳೂರು ನಂಜುಂಡಸ್ವಾಮಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು