ಸಿಂಗಾಪುರ್ ನ ಪ್ರಾಣಿ ಸಂಗ್ರಹಾಲಯದ 4 ಸಿಂಹಗಳಿಗೆ ಕೊರೋನಾ ಸೋಂಕು ತಗುಲಿದ್ದು, ಅವುಗಳ ಆರೋಗ್ಯದಲ್ಲಿ ಸೂಕ್ಷ್ಮ ಬದಲಾವಣೆಯಾಗಿದೆ ಎಂದು ಮಂಡೈ ವೈಲ್ಡ್ಲೈಫ್ ಗ್ರೂಪ್ನ ಸಂರಕ್ಷಣೆ, ಸಂಶೋಧನೆ ಮತ್ತು ಪಶುವೈದ್ಯಕೀಯ ಉಪಾಧ್ಯಕ್ಷ ಡಾ ಸೋಂಜಾ ಲುಜ್ ತಿಳಿಸಿದ್ದಾರೆ.
ಜಗತ್ತಿನಾದ್ಯಂತ ಹಲವು ಮೃಗಾಲಯಗಳಲ್ಲಿನ ಹುಲಿ, ಸಿಂಹಗಳಿಗೆ ಸೋಂಕು ತಗುಲಿವೆ. ಅದೇ ರೀತಿ ಪ್ರವಾಸಿಗರ ಆಕರ್ಷಣೆಯಾದ ನೈಟ್ ಸಫಾರಿಯಲ್ಲಿ ನಾಲ್ಕು ಸಿಂಹಗಳಿಗೆ ಸೋಂಕು ಕಾಣಿಸಿಕೊಂಡಿದೆ. ಇವುಗಳಿಗೆ ಕೆಮ್ಮು, ಶೀತಗಳಂತ ಸೋಂಕಿನ ಲಕ್ಷಣಗಳಿದದು, ಸಿಂಹಗಳು ಅತಿಯಾಗಿ ನಿದ್ರಿಸುತ್ತಿವೆ ಎಂದರು.
ಈ ಕೋವಿಡ್ ಸೋಂಕಿಗೆ ಒಳಗಾಗಿರುವ ಸಿಂಹಗಳ ಸಂಪರ್ಕಕ್ಕೆ ಬಂದಿದ್ದ 9 ಏಷ್ಯಾಟಿಕ್ ಸಿಂಹ ಹಾಗೂ 5 ಆಫ್ರಿಕನ್ ಸಿಂಹಗಳನ್ನು ಐಸೊಲೇಟ್ ಮಾಡಲಾಗಿದೆ ಎಂದರು.