News Karnataka Kannada
Sunday, April 28 2024
ಮಂಡ್ಯ

ಮದ್ದೂರು:ನಾಳಿನ ಭವಿಷ್ಯಕ್ಕೆ ನೀರಿನ ಮಿತ ಬಳಕೆ ಅಗತ್ಯ

Limited use of water is essential for the future of tomorrow
Photo Credit : By Author

ಮದ್ದೂರು: ನಾಳಿನ ಭವಿಷ್ಯಕ್ಕಾಗಿ ನೀರಿನ ಮಿತ ಬಳಕೆ ಮಾಡಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನಿವೃತ್ತ ಜಿಲ್ಲಾಧಿಕಾರಿ ಕೃಷ್ಣೇಗೌಡ ತಿಳಿಸಿದರು.

ತಾಲೂಕಿನ ಕೌಡ್ಲೆ ಗ್ರಾಮದಲ್ಲಿ ದೇವರಾಜ ಅರಸು ನೀರು ಬಳಕೆದಾರರ ಸಹಕಾರ ಸಂಘ ಹಾಗೂ ನೀರು ಬಳಕೆದಾರರ ಸಹಕಾರ ಸಂಘಗಳ  ಉದ್ಘಾಟನೆ ನೆರವೇರಿಸಿ ಮಾತನಾಡಿ, ಹಿಂದಿನ ದಿನಗಳಲ್ಲಿ ನಾಲೆಗಳ ಮೂಲಕ ಜಮೀನುಗಳಿಗೆ ನೀರು ಹರಿಸುವ ಸಂಬಂಧ ಹಲವಾರು ವ್ಯಾಜ್ಯಗಳು ನಡೆಯುತ್ತಿದ್ದವು. ಇಂದು ಪರಿಸ್ಥಿತಿ ಬದಲಾಗಿದೆ. ಪ್ರಕೃತಿ ವಿಕೋಪದಂತಹ ಘಟನೆಗಳು ಸಂಭವಿಸುತ್ತದೆ. ಸ್ವಾಭಾವಿಕವಾದ ಅಸಮತೋಲನದಿಂದ ರೈತರಿಗೆ   ಕಾಲಾವಧಿಯಲ್ಲಿ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನೀರು ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಿ ಆದಾಯೋತ್ಪನ್ನ ಚಟುವಟಿಕೆಗಳನ್ನು ಜಮೀನುಗಳಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಧೀರ್ಘಾವಧಿ ಬೆಳೆಗಿಂತ ಅಲ್ಪಾವಧಿ ಬೆಳೆ ಬೆಳೆದು ಜೀವನ ಮಟ್ಟ ಸುಧಾರಣೆಯನ್ನು ಕಾಯ್ದುಕೊಳ್ಳಬೇಕು. ಕೆ.ಆರ್.ಎಸ್. ಕಡೇ ಭಾಗದ ಶಿಂಷಾ  ಬಲದಂಡೆ ಭಾಗದ ರೈತರು ನಾವಾಗಿದ್ದೇವೆ. ಬೇಸಿಗೆ ಸಂದರ್ಭದಲ್ಲಿ ನೀರಿಗೆ ಸಾಕಷ್ಟು ಹಾಹಾಕಾರವಾಗುತ್ತದೆ. ಇವುಗಳನ್ನೆಲ್ಲ ತಡೆಗಟ್ಟಲು ಸಹಕಾರ ತತ್ವದಡಿ ನೀರು ನಿರ್ವಹಣೆ ಮಾಡಬೇಕೆಂದು ಎಂದು ನೆರೆದಿದ್ದ ಅಚ್ಚುಕಟ್ಟುದಾರರಿಗೆ ಮನವಿ ಮಾಡಿದರು.ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ನಾಗೇಂದ್ರ ಮಾತನಾಡಿ, ಸಹಕಾರ ಕ್ಷೇತ್ರ ವಿಶಾಲ  ತಳಹದಿಯ ಮೇಲೆ ಬೆಳೆದಿದೆ.

ಗ್ರಾಹಕರಿಂದ ರೈತರ ತನಕ ಸಹಕಾರ ಕ್ಷೇತ್ರದಲ್ಲಿ ಸೇವಾ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಜನರ ಒಳಗೊಳ್ಳುವಿಕೆಯಿಂದ ಸಹಕಾರ ಕ್ಷೇತ್ರ ಬಲವರ್ಧನೆಯಾಗಬೇಕಿದೆ. ನೀರು ನಿರ್ವಹಣೆಯಂತಹ ಸಂದಿಗ್ಧ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಸಹಕಾರ ತತ್ವದಡಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಕೆ.ಆರ್.ಎಸ್. ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘದ ಮಹಾಮಂಡಲದ ಉಪಾಧ್ಯಕ್ಷ ಮಂಗಲ ಎಂ. ಯೋಗೀಶ್  ಮಾತನಾಡಿ, ಅಣೆಕಟ್ಟೆಗಳನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡಲು ಹೊರಟಿರುವ ಸಂದರ್ಭದಲ್ಲಿ ರೈತರು ಸಾಮೂಹಿಕ ಹೊಣೆಗಾರಿಕೆಯಿಂದ ನೀರು ನಿರ್ವಹಣೆಯಂತಹ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿರುವುದು ಅತಿ ತುರ್ತಾಗಿದೆ. ನೀರಾವರಿ ಕಾಯ್ದೆಗನುಗುಣವಾಗಿ ನೀರಿನ ಕಂದಾಯವನ್ನು ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಪಾವತಿಸಿ ಸಂಘಗಳು ಆರ್ಥಿಕವಾಗಿ ಸದೃಢವಾಗಲು ಸಾಧ್ಯವಾಗುತ್ತದೆ ಎಂದರು.

ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರವು ಕೃಷಿ, ಸಹಕಾರ ಮತ್ತು ಇಂಜಿನಿಯರಿಂಗ್ ವಿಭಾಗಗಳನ್ನು ಒಳಗೊಂಡ ಹಲವು ಆಡಳಿತಾತ್ಮಕ  ಕಾರ್‍ಯಗಳನ್ನು ನಿರ್ವಹಿಸುತ್ತಿದ್ದು, ಇವು ನೇರವಾಗಿ ನೀರು ಬಳಗೆದಾರರ ಸಹಕಾರ ಸಂಘಗಳ ಬಲವರ್ಧನೆಗೆ ಕಾರ್‍ಯ ನಿರ್ವಹಿಸುತ್ತಿದ್ದು, ಪ್ರತಿಯೊಬ್ಬರೂ ಇದರ ಬಗ್ಗೆ ಜಾಗೃತಿ ಪಡೆದು ಸಂಘದ ಚುನಾಯಿತ ಪ್ರತಿನಿಧಿಗಳು ಕಾರ್ಯ ನಿರ್ವಹಿಸಬೇಕೆಂದರು.

ನೀರು ಬಳಕೆದಾರರ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷ ಕೌಡ್ಲೆ ಚನ್ನಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಡಾ ಮಾಜಿ ಅಧ್ಯಕ್ಷ  ಶಿವಲಿಂಗಯ್ಯ, ಅಪೆಕ್ಸ್ ಬ್ಯಾಂಕ್ ಮಾಜಿ ನಿರ್ದೇಶಕ ಜೋಗೀಗೌಡ, ನಿವೃತ್ತ ಕಾರ್‍ಯಪಾಲಕ ಅಭಿಯಂತರ ನಂಜಯ್ಯ, ಕೆ.ಆರ್.ಎಸ್. ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಮಹಾ ಮಂಡಲದ ಅಧ್ಯಕ್ಷ ಬಿ.ಎಂ. ರಘು ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು