News Karnataka Kannada
Monday, May 06 2024
ಬೆಂಗಳೂರು

ಬೆಂಗಳೂರು: ಇಂದಿನ ಮಕ್ಕಳು ನಾಳಿನ ದೇಶ ಭವಿಷ್ಯದ ನಿರ್ಮಾಪಕರು ಎಂದ ಥಾವರ್ ಚಂದ್ ಗೆಹ್ಲೋಟ್

Today's children are the producers of tomorrow's country's future: Thaawar Chand Gehlot
Photo Credit : By Author

ಬೆಂಗಳೂರು: “ಇಂದಿನ ಮಕ್ಕಳು ನಾಳಿನ ಭಾರತ ಮತ್ತು ಈ ದೇಶದ ಭವಿಷ್ಯದ ನಿರ್ಮಾಪಕರು, ಆದ್ದರಿಂದ ಅವರ ಶಿಕ್ಷಣ ಮತ್ತು ಕಲ್ಯಾಣ ಮತ್ತು ಅವರಲ್ಲಿ ನೈತಿಕ ಗುಣಗಳ ಅಭಿವೃದ್ಧಿಗೆ ವಿಶೇಷ ಗಮನ ನೀಡಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

ನಗರದ ಬಾಲಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜವಾಹರ ಬಾಲಭವನ ಸೊಸೈಟಿ ವತಿಯಿಂದ ಆಯೋಜಿಸಲಾಗಿದ್ದ ಮಕ್ಕಳ ದಿನಾಚರಣೆ-2022 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ದೇಶದ ಪ್ರತಿಯೊಂದು ಮಗುವೂ ತನ್ನ ಮೂಲಭೂತ ಮಕ್ಕಳ ಹಕ್ಕುಗಳನ್ನು ಪಡೆಯಬೇಕು, ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು, ಆರ್ಥಿಕ ಕಾರಣಗಳಿಂದ ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದಂತೆ ಎಚ್ಚರವಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನವನ್ನು ನವೆಂಬರ್ 14 ರಂದು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವದ ಅನೇಕ ದೇಶಗಳಲ್ಲಿ ನವೆಂಬರ್ 20 ರಂದು ವಿಶ್ವ ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ವಿಶ್ವದ ಸುಮಾರು 50 ದೇಶಗಳು ಜೂನ್ 1 ರಂದು ಮಕ್ಕಳ ದಿನವನ್ನು ಆಚರಿಸುತ್ತವೆ ಎಂದು ಮಾಹಿತಿ ನೀಡಿದರು.

ಮಕ್ಕಳ ದಿನಾಚರಣೆಯಂದು ಕರ್ನಾಟಕ ಸರ್ಕಾರವು ಪ್ರತಿಭಾವಂತ ಮಕ್ಕಳನ್ನು ಅವರ ಶೌರ್ಯಕ್ಕಾಗಿ ಗೌರವಿಸುವ ಮತ್ತು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ಪ್ರಶಸ್ತಿಗಳನ್ನು ನೀಡುವ ಕೆಲಸವನ್ನು ಮಾಡುತ್ತಿದೆ. ಇದಕ್ಕಾಗಿ ನಾನು ಕರ್ನಾಟಕ ಸರ್ಕಾರಕ್ಕೆ ಹಾಗೂ ಪ್ರಶಸ್ತಿ ಪಡೆದ ಮಕ್ಕಳು, ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಅಭಿನಂದನೆಗಳು ಎಂದರು.

ಮಕ್ಕಳನ್ನು ಸುರಕ್ಷಿತ, ವಿದ್ಯಾವಂತ, ಉತ್ತಮ ಪೆÇೀಷಣೆ ಮತ್ತು ಸಬಲರನ್ನಾಗಿ ಮಾಡುವ ಕಡೆಗೆ. ಮಕ್ಕಳ ಕಲ್ಯಾಣ ಮತ್ತು ಸಬಲೀಕರಣಕ್ಕಾಗಿ, ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿವೆ. ಈ ಯೋಜನೆಗಳು ಸರಿಯಾಗಿ ಮಕ್ಕಳಿಗೆ ತಲುಪಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯ ಪ್ರವೃತ್ತರಾಗಿ ಕರ್ತವ್ಯವನ್ನು ನಿಭಾಯಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಕ್ಕಳಿಗೆ ಶೌರ್ಯ ಪ್ರಶಸ್ತಿ, ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಮಾನ್ಯ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವ ಆಚಾರ್ ಹಾಲಪ್ಪ ಬಸಪ್ಪ, ಶಾಸಕ  ರಿಜ್ವಾನ್ ಅರ್ಷದ್, ಸಂಸದರಾದ ಲೆಹರ್ ಸಿಂಗ್ ಸಿರೋಯಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಮಂಜುಳ ಎನ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಧೈರ್ಯ ಸಾಹಸ ಪ್ರದರ್ಶಿಸಿದ ಕೊಡಗಿನ ಕು.ನಮ್ರತಾ, ಶಿವಮೊಗ್ಗದ  ಕು.ಪ್ರಾರ್ಥನಾ,  ಕಾರವಾರದ ಕು.ಕೌಶಲ್ಯ ವೆಂಕಟರಮಣ ಹೆಗಡೆ, ಮಾಸ್ಟರ್ ಕೀರ್ತಿ ವಿವೇಕ್ ಎಂ ಸಾಹುಕಾರ್ ಹಾಗೂ ಕು. ಕಾವ್ಯ ಭಾಸ್ಕರ್ ಹೆಗಡೆ  ಅವರಿಗೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ, ತಲಾ 10 ಸಾವಿರ ರೂ. ಗಳ ನಗದು ಬಹುಮಾನ  ನೀಡಿ ಗೌರವಿಸಲಾಯಿತು.

ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಸಂಸ್ಥೆಗಳಾದ ಕಲಾ ಚೈತನ್ಯ ಸೇವಾ ಸಂಸ್ಥೆ, ಚಿಕತ್ರದುರ್ಗ. ತವರು ಚಾರಿಟಬಲ್ ಟ್ರಸ್ಟ್, ಹಾಸನ ಜಿಲ್ಲೆ. ಸ್ಪಂದನ ವಿಶೇಷ ದತ್ತು ಸ್ವೀಕಾರ ಕೇಂದ್ರ, ಹಾವೇರಿ.  ಇನ್ನರ್ ವ್ಹೀಲ್ ಕ್ಲಬ್, ಕೊಪ್ಪಳ ಜಿಲ್ಲೆ. ಈ ಸಂಸ್ಥೆಗಳಿಗೆ ತಲಾ ರೂ. 1 ಲಕ್ಷಗಳ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಮತ್ತು ಡಾ.ಹುಲಿಕಲ್ ನಟರಾಜ್, ದೊಡ್ಡಬಳ್ಳಾಪುರ.  ಡಾ: ಪವಿತ್ರ, ಶಿವಮೊಗ್ಗ, ಭೀಮಣ್ಣಾ ಮಾರುತಿ, ಹುಬ್ಬಳ್ಳಿ-ಧಾರವಾಡ. ಗುಂಡಿ ರಮೇಶ್, ವಿಜಯನಗರ ಜಿಲ್ಲೆ ಇವರುಗಳಿಗೆ ವೈಯಕ್ತಿಕ ಪ್ರಶಸ್ತಿ ತಲಾ  25 ಸಾವಿರ ರೂ.ಗಳ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು