News Karnataka Kannada
Thursday, May 02 2024
ಮಡಿಕೇರಿ

ಕೃಷಿ ವಿವಿಯ ಸ್ವರ್ಣ ಪದಕ ಮುಡಿಗೇರಿಸಿಕೊಂಡ ಮಗ್ಗುಲ ಗ್ರಾಮದ ಕುಪ್ಪಚ್ಚಿರ ಭರತ್

Kuppachira Bharath of Maggula village wins gold medal at Agriculture University
Photo Credit : News Kannada

ವಿರಾಜಪೇಟೆ: ತಾಲ್ಲೂಕಿನ ಮಗ್ಗುಲ ಗ್ರಾಮದ ಕುಪ್ಪಚ್ಚಿರ ದಿ॥ ಭೀಮಯ್ಯ ಮತ್ತು ಕವಿತ ಭೀಮಯ್ಯರವರ ಪುತ್ರ ಕುಪ್ಪಚ್ಚಿರ ಭರತ್ ಅವರಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ 57ನೇ ಘಟಿಕೋತ್ಸವದಲ್ಲಿ ಎಂ.ಎಸ್ಸಿ.(ಕೃಷಿ) ಪದವಿಯೊಂದಿಗೆ ಮೂರು ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.

ಕೃಷಿ ವಿಶ್ವವಿದ್ಯಾನಿಲಯದ ರೇಷ್ಮೆಕೃಷಿ ಸ್ನಾತಕೋತ್ತರ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಗಳಿಸಿ, “Bio-management of root-knot nematode in mulberry ( Morus alba L.) and its impact on silkworm rearing” ಎಂಬ ವಿಷಯದ ಕುರಿತಾಗಿ ಸಂಶೋಧನಾ ಪ್ರಬಂಧವನ್ನು ರಚಿಸಿರುವುದಕ್ಕೆ ಭರತ್ ಅವರಿಗೆ ಕರ್ನಾಟಕದ ರಾಜ್ಯಪಾಲರು ಹಾಗು ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ  ಥಾವರ್ ಚಂದ್ ಗೆಹ್ಲೋಟ್ ರವರು ಪ್ರಶಸ್ತಿ ಪತ್ರ ಮತ್ತು ಮೂರು ಸ್ವರ್ಣ ಪದಕಗಳನ್ನು ಪ್ರದಾನ ಮಾಡಿದರು.

ಈ ಸಂದರ್ಭ ಡಾ. ಹಿಮಾಂಶು ಪಾಠಕ್, ಮಹಾನಿರ್ದೇಶಕರು – ಭಾರತೀಯ ಕೃಷಿ ಅನುಸಂಧಾನ ಪರಿಷತ್ತು, ನವದೆಹಲಿ. ಎನ್. ಚೆಲ್ಲುವರಾಯಸ್ವಾಮಿ, ಕರ್ನಾಟಕ ಸರ್ಕಾರದ ಮಾನ್ಯ ಕೃಷಿ ಸಚಿವರು, ಡಾ. ಎಸ್. ವಿ. ಸುರೇಶ, ಕುಲಪತಿಗಳು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು