News Karnataka Kannada
Monday, April 29 2024
ವಿದೇಶ

ಮೆಕ್ಸಿಕೋದಲ್ಲಿ ಕಂದಕಕ್ಕೆ ಉರುಳಿದ ಬಸ್: 18 ಮಂದಿ ಸಾವು

ಕ್ಯಾಂಟರ್ ವಾಹನವೊಂದು ಪಲ್ಟಿಯಾಗಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದ ಬಳಿ ಬುಧವಾರ ನಡೆದಿದೆ. 
Photo Credit : IANS

ಮೆಕ್ಸಿಕೊ: ಗುರುವಾರ ಮುಂಜಾನೆ ಮೆಕ್ಸಿಕೊದ ಪೆಸಿಫಿಕ್ ಕರಾವಳಿ ರಾಜ್ಯವಾದ ನಯರಿತ್‌ನಲ್ಲಿ ಬಸ್‌ ಒಂದು ಹೆದ್ದಾರಿ ಬಿಟ್ಟು ಕಡಿದಾದ ಬೆಟ್ಟದಿಂದ ಉರುಳಿ ಬಿದ್ದ ಪರಿಣಾಮ ಕನಿಷ್ಠ 18 ಪ್ರಯಾಣಿಕರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರಲ್ಲಿ ಮೂವರು ಅಪ್ರಾಪ್ತ ವಯಸ್ಕರು ಸೇರಿದ್ದಾರೆ. ಆರು ಮಂದಿ ಭಾರತೀಯರು ಸೇರಿದಂತೆ 40 ಮಂದಿ ಪ್ರಯಾಣಿಸುತ್ತಿದ್ದರು, ಘಟನೆಯಲ್ಲಿ 22 ಮಂದಿ ಗಾಯಗೊಂಡಿದ್ದಾರೆ.  ಅವರ ಆರೋಗ್ಯಸ್ಥಿತಿ ಸ್ಥಿರವಾಗಿದೆ ಎಂದು ಉನ್ನತ ಅಧಿಕಾರಿಗಳು ಹೇಳಿದ್ದಾರೆ.

ಮೆಕ್ಸಿಕೊದ ನಯಾರಿತ್ ರಾಜ್ಯದಲ್ಲಿ ಈ ದುರ್ಘಟನೆ ನಡೆದಿದ್ದು, ಪರಿಹಾರ ಕಾರ್ಯಾಚರಣೆ ತೀರಾ ಕಷ್ಟಕರವಾಗಿದೆ ಎಂದು ಭದ್ರತಾ ಮತ್ತು ನಾಗರಿಕ ಸುರಕ್ಷಾ ಕಾರ್ಯದರ್ಶಿ ಜಾರ್ಜ್ ಬೆನಿಟೊ ರಾಡ್ರಿಗಸ್ ಹೇಳಿದ್ದಾರೆ. 14 ಮಂದಿ ಮಕ್ಕಳು ಹಾಗೂ ಮೂವರು ದುರಂತದಲ್ಲಿ ಮೃತಪಟ್ಟಿದ್ದು, ತಿಜುನಾ ನಗರಕ್ಕೆ ಹೊರಟಿದ್ದ ಬಸ್ ರಸ್ತೆಯಿಂದಾಚೆ ಚಲಿಸಿ ಕಂದಕಕ್ಕೆ ಉರುಳಲು ಕಾರಣ ಏನು ಎನ್ನುವುದು ಇನ್ನೂ ತಿಳಿದು ಬಂದಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು