News Karnataka Kannada
Tuesday, April 30 2024
ಮಡಿಕೇರಿ

ಗೋಣಿಕೊಪ್ಪಲ್ಲಿನಲ್ಲಿ ಉಲ್ಬಣಗೊಂಡ ಕಸದ ಸಮಸ್ಯೆ

Garbage problem in Gonikoppal worsens
Photo Credit : By Author

ಗೋಣಿಕೊಪ್ಪಲು: ಗೋಣಿಕೊಪ್ಪಲ್ಲಿನಲ್ಲಿ ಕಸದ ಸಮಸ್ಯೆ ಇದೀಗ ಉಲ್ಬಣ ಗೊಂಡಿದೆ. ತ್ಯಾಜ್ಯ ವಿಲೇವಾರಿಗಾಗಿ ಈ ಹಿಂದೆ 2012ನೇ ಸಾಲಿನಲ್ಲಿ ಅಂದಿನ ಪೊನ್ನಂಪೇಟಿಯ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯ ಆಸಕ್ತಿಯಿಂದ ಅರ್ವತೋಕುಲು ಗ್ರಾಮ ಪಂಚಾಯಿತಿಗೆ ಸೇರಿದ ಹಳ್ಳಿ ಗಟ್ಟುವಿನಲ್ಲಿ 2 ಎಕರೆ ಸರ್ಕಾರಿ ಜಾಗವನ್ನು ಕಸವಿಲಿವರಿಗಾಗಿ 3 ಗ್ರಾಮ ಪಂಚಾಯಿತಿಗೆ ಸರ್ಕಾರದಿಂದ ಮೀಸಲಿಡಲಾಗಿತ್ತು.

ಇದಕ್ಕಾಗಿ ಗೋಣಿಕೊಪ್ಪಲು ಹಾಗೂ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ತಲಾ 20 ಲಕ್ಷ ರೂಪಾಯಿ ವೆಚ್ಚದಲ್ಲಿ ಕಸ ವಿಂಗಡಣೆಗೆ ಕಟ್ಟಡವನ್ನು ಕಟ್ಟಲಾಗಿತ್ತು. ಆದರೆ 2 ಗ್ರಾಮ ಪಂಚಾಯಿತಿಯ ನಿರ್ಲಕ್ಷದಿಂದ ಕಸವನ್ನು ಬೇರ್ಪಡಿಸದೆ ಅಲ್ಲಿ ತಂದು ಸುರಿದ ಪರಿಣಾಮ ಅಲ್ಲಿನ ನಿವಾಸಿಗಳು ಕಸವಿಲ್ಲವೇರಿ ಮಾಡದಂತೆ ಇದುವರೆಗೆ ತಡೆಹಿಡಿಯದಿದ್ದಾರೆ. ವಿಜ್ಞಾನಿಕ ರೀತಿಯಲ್ಲಿ ವಿಂಗಡಣೆ ಮಾಡಿ ಕಸವಿಲೆವರಿ ಮಾಡದೆ ಇರುವುದರಿಂದ ಇದೀಗ ಪೊನ್ನಂಪೇಟೆ ಹಾಗೂ ಗೋಣಿಕೊಪ್ಪಲಿನ ಕಸ ನಿಗೂಢ ರೀತಿಯಲ್ಲಿ ಡಿಲೇವರಿ ಆಗುತ್ತಿದೆ. ಕಿರಿಹೊಳೆ ಸಮೀಪ ರಾಥೋರಾತ್ರಿ ತಂದು ಕಸವನ್ನು ಸುರಿದು. ವಾರಕ್ಕೊಮ್ಮೆ ಮಧ್ಯರಾತ್ರಿಯ ನಂತರ ಹೊಳೆ ಬದಿ ತ್ಯಾಜ್ಯಗಳಿಗೆ ಬೆಂಕಿ ನೀಡಿ ಸುಡಲಾಗುತ್ತಿದೆ.

ಇದರಿಂದ ಹೊಳೆಯ ನೀರಿಗೆ ಕಸ ಸೇರಿ ರೋಗ ರುಜಿನಗಳು ಒಂದೆಡೆ ಕಾರಣವಾದರೆ ಮತ್ತೊಂದೆಡೆ ಈ ಕಿರೆ ಹೊಳೆಯ ಸಮೀಪದಲ್ಲಿರುವ ಮರಗಳಲ್ಲಿ ಹಲವು ದಶಕಗಳಿಂದ ಆಶ್ರಯ ಪಡೆದುಕೊಳ್ಳುತ್ತಿದ್ದ ಅಪರೂಪದ ಪಕ್ಷಿಗಳು ಹಕ್ಕಿಗಳು ಈ ಬೆಂಕಿಯ ಹೊಗೆಯಿಂದ ಮಧ್ಯರಾತ್ರಿಯಿಂದ ಬೆಳಗಿನವರೆಗೆ ಚೀರಾಡುತ್ತಾ ತಮ್ಮ ನೋವನ್ನು ವ್ಯಕ್ತಪಡಿಸುತಿದೆ. ಆದರೆ ಗ್ರಾಮ ಪಂಚಾಯಿತಿಯ ಆಡಳಿತಕ್ಕೆ ಈ ಪಕ್ಷಿಗಳ ವೇದನೆ ಕೇಳುತ್ತಿಲ್ಲ. ಇಲ್ಲಿನ ನಿವಾಸಿಗಳು ಕೂಡ ಅಸಹಾಯಕತೆಯಿಂದ ಪರಿಸ್ಥಿತಿಗೆ ಒಗ್ಗಿ ಕೊಂಡಿದ್ದಾರೆ. 2012 ರಿಂದ ಇದುವರೆಗೆ ಕಸ ವಿಲೇವಾರಿಗೆ ಜಾಗವಿದ್ದರೂ ಅಲ್ಲಿ ವೈಜ್ಞಾನಿಕ ರೂಪದಲ್ಲಿ ಕಸವನ್ನು ವಿಂಗಡಿಸಿ ವಿಲೇವರೇ ಮಾಡದಿರಲು ಕ್ಷೇತ್ರದ ಶಾಸಕರಿಗೂ ಹಾಗೂ ಪಂಚಾಯ್ತಿಯ ಆಡಳಿತಕ್ಕೂ ಸಾಧ್ಯವಾಗುತ್ತಿಲ್ಲ ಯಾಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡ್ತಿದೆ.

ನಿನ್ನೆ ಮಧ್ಯರಾತ್ರಿ ಕಿರೆ ಹೊಳೆ ಸಮೀಪ ಕಸವನ್ನು ಸುಡುತ್ತಿರುವ ಸಂದರ್ಭ ಚಲನಚಿತ್ರ ಸಹಸ ಕಲಾವಿದರ ಸಂಘದ ಅಧ್ಯಕ್ಷ ಗೋಣಿಕೊಪ್ಪಲಿನ ಫಯಾಜ್ ಖಾನ್ ಬೆಂಗಳೂರಿಂದ ತನ್ನ ಮನೆಗೆ ಬಂದಾಗ ಕಂಡ ದೃಶ್ಯವನ್ನು ವಿಡಿಯೋ ಮಾಡಿ ಕಳುಹಿಸಿರುವ ದೃಶ್ಯವನ್ನು ನೋಡಿದರೆ ಮೂಕ ಪ್ರಾಣಿಗಳ ವೇದನೆ ಅರ್ಥವಾಗುತ್ತೆ ನಮಗೆ. ಆದರೆ ಪಂಚಾಯಿತಿಯವರಿಗೆ ಯಾಕೆ ಅರ್ಥವಾಗುತ್ತಿಲ್ಲ? ಎಂಬುದೇ ಅವರ ಪ್ರಶ್ನೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು