News Karnataka Kannada
Thursday, May 02 2024
ಹಾಸನ

ಹಾಸನ: ಮಾಜಿ ಸಚಿವ ಹೆಚ್.ಡಿ. ರೇವಣ್ಣ ವಿರುದ್ಧ ಶಾಸಕ ಎ.ಟಿ.ರಾಮಸ್ವಾಮಿ ವಾಗ್ದಾಳಿ

Former Minister H.D. MLA A T Ramasamy lashes out at Revanna
Photo Credit : News Kannada

ಹಾಸನ: ದೇವೇಗೌಡರನ್ನೇ ಮನೆ, ಜಿಲ್ಲೆಯಿಂದ ಹೊರಹಾಕಿದವರು ನನ್ನನ್ನು ಬಿಡ್ತಾರಾ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಶಾಸಕ ಎ.ಟಿ.ರಾಮಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊಳೆನರಸೀಪುರ ತಾಲ್ಲೂಕಿನ ಜೋಗಿಕೊಪ್ಪಲು ಗ್ರಾಮದಲ್ಲಿ ನಿವೇಶನ ಹಕ್ಕುಪತ್ರ ಹಂಚಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾವಣನಿಗೆ ಸಕಲ ಐಶ್ವರ್ಯ, ಈಶ್ವರನಿಂದ ಪಡೆದ ಶಕ್ತಿಶಾಲಿ ಅಸ್ತ್ರ ಇದ್ದು ಸಹ ನಾಶವಾದ. ಲಂಕೆ ಕೂಡ ಬೂದಿ ಆಯಿತು. ಯಾವುದಕ್ಕೆ ಆರಂಭ ಇರುತ್ತದೆಯೋ ಅದಕ್ಕೆ ಅಂತ್ಯ ಕೂಡ ಇರುತ್ತದೆ ಎಂದು ರೇವಣ್ಣ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನನ್ನಂತಹವನಿಗೆ ಹೀಗೆ ಮಾಡಿದ್ದಾರೆ. ನಿಮ್ಮನ್ನು ಬಿಡುತ್ತಾರಾ? ಎಂದು ಕಾರ್ಯಕರ್ತರಿಗೆ ಕರೆಕೊಟ್ಟ ಅವರು, ನೀವೆಲ್ಲಾ ಸ್ವಾಭಿಮಾನಿಗಳಾಗಬೇಕು. ಆತ್ಮಗೌರವದಿಂದ ನಿಲ್ಲಬೇಕು. ಯಾರ ಮುಂದು ಕೈಕಟ್ಟಿ ನಿಲ್ಲಬಾರದು. ಎಲ್ಲಿ ಜೊತೆಗೆ ಕುಳಿತುಕೊಳ್ಳುವ ಸ್ಥಾನಮಾನ ಇರುತ್ತದೆಯೋ ಅಲ್ಲಿಗೆ ಹೋಗಿ ಎಂದಿದ್ದಾರೆ.

ರಾಮಸ್ವಾಮಿ ಕೆಟ್ಟವರು ಅವರಿಗೆ ಟಿಕೆಟ್ ಕೊಡಬೇಡಿ ಎಂದು ಜನರಿಂದ ಹೇಳಿಸಿದ್ರು. ಮೈಕ್ ಹಾಕಿಕೊಂಡು ಅವರ ಮನೆಯೊಳಗೆ ಹೋಗಿ ಮಾತಾಡೋಕೆ ಸಾಧ್ಯ ಇದೆನಾ? ಎಂದು ಪರೋಕ್ಷವಾಗಿ ಮಾಜಿ ಶಾಸಕ ಹೆಚ್.ಡಿ ರೇವಣ್ಣ ಕುಟುಂಬದ ವಿರುದ್ಧ ಶಾಸಕ ಎ.ಟಿ ರಾಮಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಇಡೀ ರಾಜ್ಯಕ್ಕೆ ರಾಮಸ್ವಾಮಿ ಎಂತಹವರು ಎಂಬುದು ಗೊತ್ತಿದೆ. ನಾನು ಅವತ್ತು ಇಡೀ ರಾತ್ರಿ ನಿದ್ದೆ ಮಾಡಿಲ್ಲ. ಬೆಳಿಗ್ಗೆ ಕಾರ್ಯಕ್ರಮ ಇದೆ. ದೇವೇಗೌಡರನ್ನ ಕರೆಸಿ ಜ.೨೨ ರಂದು ಕಾರ್ಯಕ್ರಮ ಆಯೋಜಿಸಿದ್ದ ಕಾರ್ಯಕ್ರಮ ರದ್ದಾಗಿದೆ ಅಂತಾ ಹೇಳಿ ಮೆಸೇಜ್ ಹಾಕ್ತಾರೆ. ದೇವೇಗೌಡರು ಕಾರ್ಯಕ್ರಮಕ್ಕೆ ಬರುವುದಾಗಿ ಒಪ್ಪಿದ್ದರು. ಆದರೆ ಅವರನ್ನ ಬಾರದಂತೆ ತಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ನಾನು ದೇವೇಗೌಡರನ್ನ ಕಾರ್ಯಕ್ರಮಕ್ಕೆ ಕರೆಯೋದಕ್ಕೆ ಹೋದಾಗ ರಾಜಕೀಯ ಮಾತಾಡೋಕೆ ಶುರು ಮಾಡಿದರು. ಆರೋಗ್ಯ ಕಾಪಾಡಿಕೊಳ್ಳಿ ಇನ್ನೊಂದು ದಿನ ಮಾತಾಡೋಣ ಎಂದೆ. ನನ್ನ ಕೈ ಹಿಡಿದುಕೊಂಡ್ರು ನಿಮಗೆ ಏನು ಕಿರುಕುಳ ಕೊಡ್ತಿದ್ದಾರೆ, ಏನು ಅನ್ಯಾಯ ಆಗ್ತಿದೆ ನನಗೆ ಗೊತ್ತು. ನಾನು ಬದುಕಿರೋ ವರೆಗೆ ಅನ್ಯಾಯ ಆಗೋದಕ್ಕೆ ಬಿಡೊಲ್ಲ ಅಂದಿದ್ರು ಎಂದು ಹೇಳಿದ್ದಾರೆ.

ನಾನು ಕರೆದ ಕಾರ್ಯಕ್ರಮಕ್ಕೆ ದೇವೇಗೌಡರ ಟೂರ್ ಪ್ಲಾನ್ ಆಗಿತ್ತು. ಬರೋದನ್ನ ತಡೆದರು. ಇವರೆಲ್ಲಾ ಪಾಪ ಅವರನ್ನ ಉತ್ಸವ ಮೂರ್ತಿ ಮಾಡ್ಕೊಂಬಿಟ್ರು. ಅಂತಹ ಮುತ್ಸದಿ ರಾಜಕಾರಣಿಯನ್ನ ಮೂಲೆಗುಂಪು ಮಾಡಿದ್ದು ನನಗೆ ನೋವಾಗಿದೆ. ಅವರ ಮಾತಿಗೆ ಕಿಮ್ಮತ್ತು ಕೊಡ್ತಿದ್ದಾರಾ ಇವರು? ಎಂದು ಪ್ರಶ್ನಿಸಿದ್ದಾರೆ.

ಅವರಿಗೆ ಒಳ್ಳೆಯವರು ಬೇಕಾಗಿಲ್ಲ. ಕೆಲವು ಜನ ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡಲು ತಯಾರಿದ್ದಾರೆ. ಸತ್ಯವನ್ನೇ ಸಾಯಿಸುತ್ತಾರೆ. ಅದನ್ನು ಎದುರಿಸುವ ಶಕ್ತಿ ನನಗೆ ಜನ ಕೊಟ್ಟಿದ್ದಾರೆ. ರಾಜಕೀಯವಾಗಿ ನಾನು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.

ಅವರನ್ನ ಜಿಲ್ಲೆಯಿಂದ ಹೊರ ದಬ್ಬಿದ್ರು. ಹಾಸನದ ಚನ್ನಪಟ್ಟಣದಲ್ಲಿ ಲೋಕಸಭಾ ಚುನಾವಣೆ ಬಗ್ಗೆ ಪೂರ್ವಭಾವಿ ಸಭೆ ಆಯ್ತು. ಎಲ್ಲರೂ ಪ್ರಜ್ವಲ್ ರೇವಣ್ಣ ಅಂತಾ ಹೇಳಿದ್ರು, ನಾನು ಹೇಳಲಿಲ್ಲ. ನನ್ನ ಮೇಲೆ ಹಗೆತನ ಅಲ್ಲಿಂದಲೇ ಶುರುವಾಯ್ತು. ದೇವೇಗೌಡರು ನಿವೃತ್ತಿ ಆಗ್ತೀನಿ ಅಂದಿದ್ರೆ ನಾನು ಹೆಸರು ಹೇಳ್ತಿದ್ದೆ. ಅವರು ನಿಂತ್ಕೊಳ್ತಿನಿ ಅಂತಿರುವಾಗ ಜಿಲ್ಲೆಯಿಂದ ಹೊರದಬ್ಬಿ, ಮನೆಯಿಂದ ಹೊರದಬ್ಬಿದ್ರು. ಇವರು ಹೋಗ್ಬೇಕಾಗಿತ್ತು, ಕಾದಾಡಬೇಕಾಗಿತ್ತು. ಇದರಿಂದ ಪಕ್ಷಕ್ಕೂ ನಷ್ಟ ಆಯ್ತೋ ಇಲ್ವೋ ಎಂದಿದ್ದಾರೆ.

ದೇವೇಗೌಡರು ಪ್ರಧಾನಿ ಆಗಿದ್ದವರು. ಈ ದೇಶದ ದೊಡ್ಡ ಹುದ್ದೆಗೆ ಏರಿದ್ದವರು. ಅಂತವರನ್ನೇ ಮನೆಯಿಂದ, ಜಿಲ್ಲೆಯಿಂದ ಹೊರಹಾಕಿದಂತವರು ನನ್ನನ್ನು ಬಿಡುತ್ತಾರಾ? ಅವರು ಎಂಪಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದರೆ ಸರಿ, ಬೇರೆಯವರು ನಿಂತುಕೊಳ್ಳಬಹುದಿತ್ತು. ಆದರೆ ಅವರನ್ನು ತುಮಕೂರಿನಿಂದ ನಿಲ್ಲಿಸಿ ಸೋಲಿಸಿದ್ದನ್ನು ಯಾರು ಮರೆಯುವಂತಿಲ್ಲ ಎಂದು ರೇವಣ್ಣ ವಿರುದ್ಧ ಹರಿಹಾಯ್ದಿದ್ದಾರೆ.

ರಿಗಿಂತಲೂ ಹೆಚ್ಚು. ನನ್ನ ಮಕ್ಕಳು ಬೇರೆ ಅಲ್ಲ, ನನ್ನ ಕಾರ್ಯಕರ್ತರು ಬೇರೆ ಅಲ್ಲ ಎಂಬ ಭಾವನೆಯಿಂದ ನಾನು ರಾಜಕೀಯಕ್ಕೆ ಬಂದಿದ್ದೇನೆ. ನನ್ನ ಕುಟುಂಬ ಮನೆಗೆ ಮಾತ್ರ ಸೀಮಿತ. ಗಟ್ಟಿ ತಳಪಾಯ ಹಾಕಿಕೊಂಡು ಮುಂದಿನ ರಾಜಕೀಯ ನಿರ್ಧಾರ ತಿಳಿಸುತ್ತೇನೆ. ಮತ್ತೆ ವಿಧಾನಸೌಧಕ್ಕೆ ಹೋಗುತ್ತೇನೆ ಎಂದು ಅವರು ಹೇಳಿದ್ದಾರೆ.

ರೇವಣ್ಣ ಅಧಿವೇಶನದಲ್ಲಿ, ರಾಮಸ್ವಾಮಿ ಪ್ರಾಮಾಣಿಕರು ಅದರಲ್ಲಿ ಬೇರೆ ಮಾತಿಲ್ಲ ಎಂದಿದ್ದಾರೆ. ಅವರ ಒಳಗೊಂದು ಹೊರಗೊಂದು ಇದ್ದರೆ ನಾನೇನು ಮಾಡಲಿ ಎಂದು ಪ್ರತಿಕ್ರಿಸಿದ್ದಾರೆ.

ರೈತರ ಪಕ್ಷ ಎಂದು ಕಟ್ಟಿರುವ ಪಕ್ಷ ಕ್ಷೀಣಿಸುತ್ತಿದೆ ಎಂದು ಮೂರು ವರ್ಷಗಳ ಹಿಂದೆ ಸದನದಲ್ಲಿ ಹೇಳಿದ್ದೆ. ಅಕ್ಕಪಕ್ಕದ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಬಲಗೊಳ್ಳುತ್ತಿವೆ. ಹಿಂದಿನಿಂದ ಇದ್ದ ಪ್ರಾದೇಶಿಕ ಪಕ್ಷ ಯಾಕೆ ಕ್ಷೀಣಿಸುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ರೈತರ ಹೆಸರು ಹೇಳುತ್ತಾರೆ. ರೈತರಿಗೆ ಜಮೀನು ಮಂಜೂರು ಮಾಡಲು ಹೋದರೆ, ಮಾಡಿಕೊಡಬೇಡಿ ಎಂದು ಅಧಿಕಾರಿಗಳಿಗೆ ಹೇಳುತ್ತಾರೆ ಇದು ರೈತರ ಪಕ್ಷನಾ? ರೈತರ ಪರವಾಗಿ ಕೆಲಸ ಮಾಡುತ್ತಿದೆಯಾ? ರೈತರ ಹಿತ ಕಾಪಾಡುವ ಕೆಲಸ ಆಗಿದೆಯೇ? ರೈತರು ತಿನ್ನುವ ಅನ್ನಕ್ಕೆ ಕಲ್ಲು ಹಾಕುವ ಜನ ಇದ್ದಾರೆ. ಅದನ್ನು ಎದುರಿಸುವ ಶಕ್ತಿ ನನಗಿದೆ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದರು.

ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಎಂದುಕೊಂಡಿದ್ದಾರೆ ಅದು ಸಾಧ್ಯವಿಲ್ಲ. ನಾನು ಮತ್ತೆ ಶಾಸಕನಾಗುತ್ತೇನೆ. ನೆಲ ಹಾಗೂ ಜನರ ರಕ್ಷಣೆಗೆ ನನ್ನ ತಲೆ ಬೇಕಾದ್ರೂ ತೆಗೆಯಲಿ ಎಂದು ಸವಾಲು ಹಾಕಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು