News Karnataka Kannada
Sunday, May 05 2024
ಹಾಸನ

ಹಾಸನ: ದೇವೇಗೌಡರು ಅಡಿಗಲ್ಲಿಟ್ಟ ಕಾಮಗಾರಿಗೆ ಸಿಎಂ ಪುನಃ ಅಡಿಗಲ್ಲು- ರೇವಣ್ಣ ಆಕ್ಷೇಪ

Cm to lay foundation stone for Deve Gowda's foundation stone again: Revanna
Photo Credit : News Kannada

ಹಾಸನ: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಅಡಿಗಲ್ಲಿಟ್ಟ ಏರ್ಪೋರ್ಟ್ ಕಾಮಗಾರಿ ಪುನಃ ಅಡಿಗಲ್ಲಿಡಲು ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸುತ್ತಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ತಿಳಿಸಿದರು.

ಸಂಸದರ ನಿವಾಸದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು ದಶಕಗಳ ಹಿಂದೆಯೇ ಭುವನಹಳ್ಳಿ ಏರ್ಪೋರ್ಟ್ ಕಾಮಗಾರಿಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಗುದ್ದಲಿ ಪೂಜೆ ನೆರವೇರಿಸಿದ್ದಾರೆ.

ಇದೀಗ ಅದೇ ಕಾಮಗಾರಿಗೆ ಅಡಿಗಲ್ಲಿಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಚ್ ೧೩ರಂದು ಆಗಮಿಸುತ್ತಿರುವುದು ಎಷ್ಟು ಸರಿ…!! ಜೆಡಿಎಸ್ ಸರ್ಕಾರದ ಅಧಿಕಾರ ಅವಧಿಯಲ್ಲಿ ತಂದಂತಹ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲಿಡಲು ಮುಖ್ಯಮಂತ್ರಿಗಳು ಆಗಮಿಸುತ್ತಿದ್ದು ಅವಕಾಶ ಬಿದ್ದರೆ ಅಂದು ಪ್ರತಿಭಟನೆ ಮಾಡಲಾಗುವುದು ಎಂದರು.

ಏರ್ಪೋರ್ಟ್ ಕಾಮಗಾರಿ ನಡೆಸುವ ನೆಪದಲ್ಲಿ ೨೦೦ ಕ್ಕೂ ಹೆಚ್ಚು ಎಕರೆಯ ಖರಾಬು ಜಾಗವನ್ನು ಲೂಟಿ ಮಾಡಲು ಹೊರಟಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಮುಖ್ಯಮಂತ್ರಿಗಳ ಮೂಲಕ ಉದ್ಘಾಟನೆ ಮಾಡಿಸಲು ಹೊರಟಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ತಿಳಿಸಿರುವುದಾಗಿ ರೇವಣ್ಣ ಹೇಳಿದರು.

ನೂತನ ಆಸ್ಪತ್ರೆ ,ತಾಲೂಕು ಕಚೇರಿ ಇನ್ನೂ ನಿರ್ಮಾಣ ಹಂತದಲ್ಲೇ ಇದ್ದು ತರಾತುರಿಯಲ್ಲಿ ಮುಖ್ಯಮಂ ತ್ರಿಗಳು ಉದ್ಘಾಟನೆಗೆ ಆಗಮಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಕಾಮಗಾರಿ ಪ್ರಾರಂಭವಾಗಿ ಹಲವು ತಿಂಗಳು ಕಳೆದಿದ್ದು ಇದೀಗ ಅಡಿಗಲ್ಲು ಇಡಲು ಬರುವ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದರು .

ಬಜೆಟ್‌ನಲ್ಲಿ ಘೋಷಣೆ ಮಾಡಿ ರುವ ಕಾಮಗಾರಿಗಳಿಗೆ ಅಡಿಗಲ್ಲಿಡಲು ಮುಖ್ಯಮಂತ್ರಿ ಬರುವುದಕ್ಕೆ ನಮ್ಮ ಅಡ್ಡಿಯಿಲ್ಲ ನಾವೇ ಅವರನ್ನು ಸ್ವಾಗತಿಸು ತ್ತೇವೆ ಆದರೆ ನಮ್ಮ ಆಡಳಿತ ಅವಧಿಯಲ್ಲಿ ಅಡಿಗಲ್ಲು ಹಾಕಿರುವ ಕಾಮಗಾರಿಗಳಿಗೆ ಮತ್ತೆ ಅಡಿಗಲ್ಲಿಡಲು ಬರುತ್ತಿರುವುದಕ್ಕೆ ವಿರೋಧವಿದೆ ಎಂದರು.

ಇದೇ ಸಂದರ್ಭದಲ್ಲಿ ಮಹಿಳಾ ಸಂಘಕ್ಕೆ ಸಹಾಯಧನ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಹಣವನ್ನು ಕಳೆದ ವರ್ಷವೇ ನೀಡ ಬೇಕಾಗಿದ್ದು ಚುನಾವಣೆ ದೃಷ್ಟಿಯಿಂದ ಇದೀಗ ವಿತರಣೆಗೆ ಮುಂದಾಗಿದ್ದಾರೆ ಎಂದು ದೂರಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಗ್ಗೆ ನಮಗೆ ಗೌರವವಿದೆ ಆದರೆ ಅವರ ಪದವಿಗೆ ಚ್ಯುತಿ ತರುವಂತಹ ಇಂತಹ ಕೆಲಸಗಳನ್ನು ಅವರು ಮಾಡಬಾರದು ಎಂದು ಕಿಡಿ ಕಾರಿದ ಅವರು ಹಾಸನದಲ್ಲಿ ೪೮ ಮಧ್ಯದ ಅಂಗಡಿಗೆ ಪರವಾಗಿ ನೀಡಿರುವ ಬಿಜೆಪಿ ಸರ್ಕಾರ ಕಳೆದ ನಾಲ್ಕು ವರ್ಷದ ಸಾಧನೆಯಾಗಿದ್ದು ಬೇಕಿದ್ದರೆ ಈ ಅಂಗಡಿಗಳಿಗೆ ಗಂಧದ ಮರದಲ್ಲಿ ಕೆತ್ತಿಸಿ ಹೊಸ ನಾಮಫಲಕ ಹಾಕಿ ಕಾರ್ಯಕ್ರಮ ಮಾಡಲಿ ನಮ್ಮ ಅಭ್ಯಂತರವಿಲ್ಲ, ಜನರಿಗೆ ಇದೇ ನಮ್ಮ ಜನ ಸಂಕಲ್ಪ ಯಾತ್ರೆ ಎಂದು ಬಿಂಬಿಸಲಿ ಎಂದು ಲೇವಡಿ ಮಾಡಿದರು. ೪೮ ಮಧ್ಯದ ಅಂಗಡಿಗಳನ್ನು ತೆರೆಯುವ ಮೂಲಕ ಜನರನ್ನು ಮಧ್ಯದ ದಾಸರನ್ನಾಗಿ ಮಾಡುತ್ತಿರುವ ಬಿಜೆಪಿ ಸರ್ಕಾರದ ಸಾಧನೆ ಇದಾಗಿದ್ದು, ಹೊಸ ಕಾಮಗಾರಿ ಯನ್ನು ಉದ್ಘಾಟಿಸದೆ ಹಳೆ ಕಾಮಗಾರಿಗೆ ಅಡಿಗಲ್ಲು ಇಡುವುದು ಇವರ ಸಾಧನೆಯಾಗಿದೆ ಎಂದು ಟೀಕಿಸಿದರು.

ಅಕ್ರಮವಾಗಿ ಮಧ್ಯದ ಅಂಗಡಿ ಗಳಿಗೆ ಪರವಾನಿಗೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳ ಮೂಲಕ ಎರಡು ಮೂರು ಕೋಟಿ ಹಣ ಸಂಗ್ರಹ ಕ್ಕೆ ಮುಂದಾಗಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ.. ಎಂದು ಗಂಭೀರ ಆರೋಪ ಮಾಡಿದ ಅವರು ಜಿಲ್ಲೆಯಲ್ಲಿ ರಾಗಿ ಖರೀದಿ ಸರಿಯಾಗಿ ನಡೆಯುತ್ತಿಲ್ಲ, ರೈತರು ಎರಡು ಮೂರು ದಿನದಿಂದ ರಾಗಿ ಖರೀದಿ ಕೇಂದ್ರದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿಕೊಂಡು ಬಾಡಿಗೆ ರೂಪದಲ್ಲಿ ಸಾಕಷ್ಟು ಹಣ ವ್ಯಹಿಸುತಿದ್ದಾರೆ.

ಈ ಬಗ್ಗೆ ಜಿಲ್ಲಾಡಳಿತ ಗಮನಹರಿ ಸುತ್ತಿಲ್ಲ ಜಿಲ್ಲಾ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಬಿದ್ದಿದ್ದು ಮುಚ್ಚುವ ಕಾರ್ಯ ನಡೆದಿಲ್ಲ ಆದರೆ ಹಳೆ ಕಾಮಗಾರಿಗೆ ಅಡಿಗಲ್ಲನ್ನು ಇಡಲು ಬರುತ್ತಿದ್ದಾರೆ ಎಂದು ಟೀಕಿಸಿದರು. ಇವರು ಅಡಿಗಾಲಿಟ್ಟು ಹೋದರೆ ನಮ್ಮ ಸರ್ಕಾರ ಬಂದಾಗ ಅವುಗಳನ್ನು ನೀರಿಗೆ ಬಿಡುತ್ತೇನೆ ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಹೊಳೆನರಸೀಪುರ ಜಾತ್ರಾ ಮಹೋತ್ಸವ ಸಂಬಂಧ ಪ್ರಸಾದ ವಿತರ ಣೆಯಲ್ಲಿ ರಾಜಕೀಯ ಮಾಡಲಾಗುತ್ತಿದ್ದು ಕಳೆದ ೨೦ ವರ್ಷದಿಂದ ನಮ್ಮ ಕುಟುಂ ಬದಿಂದ ಸಂಪ್ರದಾಯಬದ್ಧವಾಗಿ ನಡೆದುಕೊಂಡು ಬರುತ್ತಿರುವ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಚುನಾ ವಣೆಯ ಸಂದರ್ಭ ಅಡ್ಡಿಪಡಿಸುತ್ತಿ ದ್ದಾರೆ. ತಾಲೂಕು ಆಡಳಿತ ಎಲ್ಲವನ್ನು ನಿಯಮ ಬದ್ಧವಾಗಿಯೇ ಮಾಡುತ್ತಿದೆ ಎಂದು ರೇವಣ್ಣ ಸಮರ್ಥಿಸಿಕೊಂಡರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು