News Karnataka Kannada
Tuesday, April 30 2024
ಮಂಗಳೂರು

ಬಂಟ್ವಾಳ: ಮನೆಯ ಬೀಗ ತೆಗೆದು ಲಕ್ಷಾಂತರ ರೂ ಮೌಲ್ಯದ ನಗನಗದು ಕಳವು

Bantwal: Cash worth lakhs of rupees stolen from house
Photo Credit : News Kannada

ಬಂಟ್ವಾಳ: ಮನೆಯ ಬೀಗ ತೆಗೆದು ಲಕ್ಷಾಂತರ ರೂ ಮೌಲ್ಯದ ನಗನಗದು ಕಳವು ಮಾಡಿದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಇರಾದಲ್ಲಿ ನಡೆದಿದೆ.

ಒಟ್ಟು 3,11,550 ರೂ ಮೌಲ್ಯದ ಚಿನ್ನಾಭರಣ ಕಳವಾಗಿದ್ದು, ಸಣ್ಣ ಪ್ಲಾಸಿಕ್‌ ಬಾಕ್ಸ್‌ನಲ್ಲಿ ಇಟ್ಟಿದ್ದ 10 ಗ್ರಾಂ ತೂಕದ ಕಿವಿಯ ಬೆಂಡೋಳೆ , 8 ಗ್ರಾಂ ತೂಕದ 3 ಉಂಗುರಗಳು, 20 ಗ್ರಾಂ ತೂಕದ ಹವಳದ ಸರ, 35 ಗ್ರಾಂ ತೂಕದ ಕರಿಮಣಿ ಸರ, 20 ಗ್ರಾಂ ತೂಕದ 2 ಕೈಬಳೆಗಳು ಕಳವಾಗಿದೆ. ಇವುಗಳ ಒಟ್ಟು ತೂಕ 93 ಗ್ರಾಂ ಆಗಿದೆ.

ಮನೆಯಲ್ಲಿ ಯಾರು ಇಲ್ಲದ ವೇಳೆ ಹಗಲು ಹೊತ್ತಿನಲ್ಲಿ ಮನೆಯಿಂದ ಮಾಡಿದ್ದಾರೆ ಎಂದು ಗ್ರಾಮಾಂತರ ಪೋಲೀಸ್ ಠಾಣೆಗೆ ಮನೆಯ ಮಾಲಕಿ ರೋಹಿಣಿ ದೂರು ನೀಡಿದ್ದಾರೆ.

ರೋಹಿಣಿ ಹಾಗೂ ಅವರ ಗಂಡ ಇಬ್ಬರು ಮನೆಗೆ ಬೀಗ ಹಾಕಿ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಅದೇ ರೀತಿ ಮಾ.7.ರಂದು ಮನೆಯಿಂದ ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದರು. ಕೆಲಸಕ್ಕೆ ಹೋಗುವ ವೇಳೆ ಮನೆಗೆ ಬೀಗ ಹಾಕಿ ಬೀಗದ ಕೀಯನ್ನು ಬಚ್ಚಲು ಕೋಣೆಯಲ್ಲಿ ಇರಿಸಿ ಹೋಗುತ್ತಿದ್ದರು.ನಿನ್ನೆಯೂ ಅದೇ ರೀತಿ ಬೀಗದ ಕೀಯನ್ನು ಬಚ್ಚಲು ಮನೆಯ ಕಿಟಕಿ ಯಲ್ಲಿಟ್ಟು ತೆರಳಿದ್ದರು.

ಸಂಜೆ ಗಂಡ ಹೆಂಡತಿ ಕೆಲಸ ಮುಗಿಸಿ ಮನೆಗೆ ಬಂದು ನೋಡುವಾಗ ಮನೆಗೆ ಬೀಗ ಹಾಕಿತ್ತು.ಬೀಗ ತೆಗೆದು ಮನೆಯ ಒಳಗೆ ಹೋದಾಗ ಕೋಣೆಯಲ್ಲಿ ದ್ದ ಗೊದ್ರೆಜ್ ನಿಂದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಕೆಳಗೆ ಬಿದ್ದಿತ್ತು.

ಗೊದ್ರೆಜ್ ಓಪನ್ ಮಾಡಿ ನೋಡಿದಾಗ ಅದರೊಳಗಿದ್ದ ಚಿನ್ನಾಭರಣಗಳು ಕಳವಾಗಿರುವುದು ಗಮನಕ್ಕೆ ಬಂದಿದೆ.
ಸ್ಥಳಕ್ಕೆ ಗ್ರಾಮಾಂತರ ಎಸ್.ಐ.ಉದಯ ರವಿ ಭೇಟಿ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು