News Karnataka Kannada
Friday, May 03 2024
ಶಿವಮೊಗ್ಗ

ಶಿವಮೊಗ್ಗ: ಪ್ರಾಣ ರಕ್ಷಣೆ ಮಾಡುವ ವೈದ್ಯರಿಗೆ ಆಭಾರಿ- ಸಂಸದ ಬಿ.ವೈ.ರಾಘವೇಂದ್ರ

Shivamogga: I am grateful to the doctors who saved lives, says MP BY Raghavendra
Photo Credit : News Kannada

ಶಿವಮೊಗ್ಗ, ನ.2: ಕೋವಿಡ್ ಸಮಯದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ತಮ್ಮ ಪ್ರಾಣದ ಹಂಗನ್ನು ತೊರೆದು ಪ್ರಾಣ ರಕ್ಷಣೆಗೆ ಮುಂದಾದ ವೈದ್ಯರಿಗೆ ನಾವುಗಳು ಆಭಾರಿಯಾಗಿದ್ದೇವೆ ಎಂದು ಸಂಸದರಾದ ಬಿ.ವೈ.ರಾಘವೇಂದ್ರ ನುಡಿದರು.

ಇಂದು ಸಾಗರ ರಸ್ತೆಯ ಪೆಸಿಟ್ ಕಾಲೇಜು ಮುಂಭಾಗದ ಶಕ್ತಿ ಧಾಮ ಒಂದನೇ ಹಂತ ಇಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳಸಂ ಶಿವಮೊಗ್ಗ ಜಿಲ್ಲಾ ಶಾಖೆ ಇವರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಭವನ ನೂತನ ಕಟ್ಟಡದ ಶಂಕುಸ್ಥಾಪನೆ ಸಮಾರಂಭದಲ್ಲಿ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳು ಕೋವಿಡ್ ಸಮಯದಲ್ಲಿ ನೀಡಿದ ಸೇವೆ ಶ್ಲಾಘನೀಯವಾದದ್ದು. ಕೋವಿಡ್ ಸಮಯದಲ್ಲಿ ಜಿಲ್ಲೆಯಲ್ಲಿ ಪಿಹೆಚ್‍ಸಿ ಯಿಂದ ಹಿಡಿದು ಜಿಲ್ಲಾ ಮಟ್ಟದವರೆಗೆ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಸಬಲಗೊಳಿಸಲಾಗಿದೆ. ತಾಲ್ಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್‍ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್‍ಗಳನ್ನು ಅಳವಡಿಸಲಾಗಿದೆ. ವೈದ್ಯರ ವೇತನ ಸೇರಿದಂತೆ ಜಿಲ್ಲೆಯಲ್ಲಿ 1117 ವೈದ್ಯರನ್ನು ಭರ್ತಿ ಮಾಡಿ ವ್ಯವಸ್ಥೆಯನ್ನು ಬಲಗೊಳಿಸಲಾಗಿದೆ.

ನೂತನ ಆರೋಗ್ಯ ಭವನದಲ್ಲಿ ಡಿಸ್ಪೆನ್ಸರಿಗೆ ಸಹ ಅವಕಾಶ ಮಾಡುತ್ತಿರುವುದು ಉತ್ತಮ ಕೆಲಸ. ಇನ್ನೊಬ್ಬರ ಜೀವ ಉಳಿಸಲಿಕ್ಕೆ ಜೀವನ ಪೂರ್ತಿ ಸೇವೆ ಸಲ್ಲಿಸುವ ನೀವುಗಳು ಈ ಭವನವನ್ನು ಕೇವಲ ಕಾನ್ಫರೆನ್ಸ್‍ಗೆ ಸೀಮಿತಗೊಳಿಸದೆ ತಮಗಾಗಿ ಉತ್ತಮ ಕಾರ್ಯಕ್ರಮ ಹಾಕಿಕೊಳ್ಳಬೇಕು. ಸರ್ಕಾರ ಒಳ್ಳೆಯ ಕಡೆ ಜಾಗ ನೀಡಿದ್ದು, ಸಚಿವರು, ಶಾಸಕರು, ಜನಪ್ರತಿನಿಧಿಗಳು ಸೇರಿ ಸರ್ಕಾರದ ಚೌಕಟ್ಟಿನಲ್ಲಿ ನೀಡಬಹುದಾದಂತಹ ಕೊಡುಗೆಯನ್ನು ಭವನಕ್ಕೆ ನೀಡುತ್ತೇವೆ ಎಂದರು.

ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ಮಾತನಾಡಿ, ಕೋವಿಡ್ ಸಮಯದಲ್ಲಿ ಜಿಲ್ಲೆಯ ವೈದ್ಯರು ಮಾದರಿಯಾಗುವಂತೆ ಕೆಲಸ ಮಾಡಿದ್ದಾರೆಂದು ಶ್ಲಾಘಿಸಿದರು.

ತಮ್ಮ ಕುಟುಂಬದಿಂದ ದೂರ ಇದ್ದು ಜೀವದ ಆಸೆ ತೊರೆದು ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ್ದೀರಿ. ಇಷ್ಟೆಲ್ಲಾ ಮಾಡಿದರೂ ಕೆಲವಾರು ಸ್ನೇಹಿತರು ಮರಣ ಹೊಂದಿದ್ದು ವಿಷಾಧನೀಯ ಎಂದ ಅವರು ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಸಕಾಲದಲ್ಲಿ ಉತ್ತಮ ಔಷಧೋಪಚಾರ, ಸಲಕರಣೆಗಳು ಮತ್ತು ಲಸಿಕಾಕರಣದಿಂದ ಜನತೆಯ ಪ್ರಾಣ ಉಳಿಸುವ ಕೆಲಸ ಆಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನಸಭಾ ಸದಸ್ಯರಾದ ಅರುಣ್ ಡಿ. ಎಸ್, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಷಡಾಕ್ಷರಿ,ಜಿಲ್ಲಾಧಿಕಾರಿ ಡಾ ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಜಿ.ಪಂ ಸಿಇಓ ಎನ್ ಡಿ ಪ್ರಕಾಶ್, ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷರಾದ ಡಾ. ಸಿದ್ದನಗೌಡ ಪಿ. ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ, ಡಾ.ನಾಗರಾಜ ನಾಯ್ಕ್, ಡಾ.ಕಿರಣ್ ಡಾ ಪೃಥ್ವಿ ಮತ್ತಿತರ ಮುಖಂಡರು ಹಾಗೂ ಆರೋಗ್ಯ ಅಧಿಕಾರಿಗಳು, ವೈದ್ಯರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು