News Karnataka Kannada
Friday, May 03 2024
ಶಿವಮೊಗ್ಗ

ಕೆ.ಎಸ್ ಈಶ್ವರಪ್ಪಗೆ ಕೆಟ್ಟ ಮೇಲೆಯೂ ಬುದ್ದಿ ಬರುವುದಿಲ್ಲ- ವೈ ಎಚ್ ನಾಗರಾಜ್

People like K.S. Eshwarappa don't get their senses even after the worst.
Photo Credit : By Author

ಶಿವಮೊಗ್ಗ: ಕೆಲವರಿಗೆ ಕೆಟ್ಟ ಮೇಲೆ ಬುದ್ಧಿ ಬರುತ್ತದೆ ಆದರೆ ಕೆ ಎಸ್ ಈಶ್ವರಪ್ಪ ಅಂಥವರಿಗೆ ಕೆಟ್ಟ ಮೇಲೆಯೂ ಬುದ್ದಿ ಬರುವುದಿಲ್ಲ ಎಂದು ಕೆಪಿಸಿಸಿ ಸದಸ್ಯ ವೈಎಚ್ ನಾಗರಾಜ್ ಹೇಳಿದ್ದಾರೆ.

ನಮ್ಮ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಮಾತನಾಡುವ ಯಾವ ನೈತಿಕತೆಯೂ ಈಶ್ವರಪ್ಪನಿಗೆ ಇಲ್ಲ ಪದೇಪದೇ ಅವರನ್ನು ಅಲೆಮಾರಿ ಎಂದು ಹೇಳುವ ಮೂಲಕ ಅಲೆಮಾರಿ ಜನಾಂಗಕ್ಕೂ ಅವಮಾನ ಮಾಡುತ್ತಿದ್ದಾರೆ. ಈಗಾಗಲೇ ಅಲೆಮಾರಿ ಎಂಬ ಪದ ಬಳಕೆಯ ವಿರುದ್ಧ ಅವರ ಮೇಲೆ ದೂರು ಕೂಡ ದಾಖಲಿಸಲಾಗಿದೆ.

ಈಶ್ವರಪ್ಪ ಸಹನೆ ಕಳೆದುಕೊಂಡು ಬಹಳ ವರ್ಷಗಳೇ ಆಗಿವೆ. ಯಾವಾಗ ಸಿದ್ದರಾಮಯ್ಯ ಅವರನ್ನು ಹೀಯಾಳಿಸಲು ಹೊರಟರೋ ಆಗಲೇ ಅವರ ಶಕ್ತಿ ಕುಂದಿ ಹೋಯಿತು. ಯಾವಾಗ ಶೇಕಡ 40ರ ಆರೋಪ ಹೊತ್ತು ಸಚಿವ ಪಟ್ಟ ಕಳೆದುಕೊಂಡರೋ ಆವಾಗಲೇ ಅವರ ಮತಗಳು ಕಳೆದು ಹೋದವು. ಯಾವಾಗ ಬಿಜೆಪಿಯ ಪಾಲಿಗೆ ಶ್ರೀ ಕೃಷ್ಣನಂತೆ ಇದ್ದ ಯಡಿಯೂರಪ್ಪನವರ ವಿರುದ್ಧ ರಾಜಪಾಲರಿಗೆ ದೂರು ನೀಡಿ ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಲು ಕಾರಣರಾದರೋ ಆವಾಗಲೇ ಅವರ ಮೇಲೆ ಬಿಜೆಪಿ ಭಕ್ತಿ ಯೂ ಹೊರಟು ಹೋಯಿತು.

ಈಶ್ವರಪ್ಪ ಈಗ ಏಕಾಂಗಿಯಾಗಿದ್ದಾರೆ ಚುನಾವಣೆಯನ್ನು ಎದುರಿಸುವ ಯಾವ ಶಕ್ತಿಯು ಅವರಿಗೆ ಉಳಿದಿಲ್ಲ. ಚುನಾವಣೆಯನ್ನು ಗೆಲ್ಲಲು ಇದ್ದ ತಂತ್ರ ಮಂತ್ರಗಳು ಅವರಿಗೆ ಮರೆತು ಹೋಗಿವೆ ಜನರ ಶಾಪದ ಪಾತ್ರೆ ತುಂಬಿ ತುಳುಕುತ್ತಿದೆ,ಸಿದ್ದರಾಮಯ್ಯ ಅವರನ್ನು ಹೀಯಾಳಿಸಿದ ಮರುಕ್ಷಣವೇ ಅವರ ಸೋಲಿನ ಮೂಟೆ ಹೆಗಲೇರಿದೆ.

ಸಿದ್ದರಾಮಯ್ಯ ಅವರಿಗೆ ರಾಜ್ಯದಲ್ಲಿ ನೂರಾರು ಕ್ಷೇತ್ರಗಳಿವೆ ಆದರೆ ಈಶ್ವರಪ್ಪನವರಿಗೆ ಎಲ್ಲಿದೆ ಕ್ಷೇತ್ರ? ಶಿವಮೊಗ್ಗದಲ್ಲಿ ಈಗಾಗಲೇ ತನಗೆ ಸೀಟು ಸಿಗುವುದಿಲ್ಲ ಎಂದು ಮಗನನ್ನು ಕರೆತರಲು ಹೊರಟಿದ್ದಾರೆ, ಕಾಲ ಇನ್ನೂ ಇನ್ನು ಮಿಂಚಿಲ್ಲ ಧರ್ಮವನ್ನು ಸ್ವಾರ್ಥಕ್ಕೆ ಬಳಸಿ ಕೊಂಡ ಅಮಲು ಇಳಿಯಲಿ ,ಅವರು ಚುನಾವಣೆ ಕಣದಿಂದ ದೂರ ಸರಿಯಲಿ ,ಇಡೀ ಶಿವಮೊಗ್ಗದಲ್ಲಿ ಅಶಾಂತಿ ಹುಟ್ಟಿಸಿ ಶಾಂತಿ ಕದಡಿದ್ದ ಅವರ ಮಲಿನ ಮನಸ್ಸನ್ನು ಈಗಲಾದರೂ ಶುದ್ಧಗೊಳಿಸಿಕೊಳ್ಳಲಿ. ಸಿದ್ದರಾಮಯ್ಯ ಯೋಚನೆ ಬಿಟ್ಟು ಜೊತೆಗೆ ಮಗನ ಪ್ರೀತಿ ಬಿಟ್ಟು ನೆಮ್ಮದಿಯಿಂದ ಜೀವನ ನಡೆಸಲಿ ಎಂದು ವೈ ಎಚ್ ನಾಗರಾಜ್  ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು