ಕೊಟ್ಟಿಗೆಹಾರ: ಕರ್ನಾಟಕದ ಅಂಧ ಓಟಗಾರ್ತಿ ರಕ್ಷಿತಾರಾಜು ಪ್ರಾನ್ಸ್ ನ ಪ್ಯಾರಿಸ್ ನಲ್ಲಿ ಜುಲೈ೬ ರಿಂದ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ ನಲ್ಲಿ ಕೀನ್ಯಾ, ರಷ್ಯಾ, ಪೋಲೆಂಡ್, ಚೀನಾ, ಭಾರತ ಕ್ರೀಡಾಪಟುಗಳು ಭಾಗವಹಿಸಿದ್ದು ಜು.೮ ರಂದು ಶನಿವಾರ ನಡೆದ ಮಹಿಳೆಯರ ೧೫೦೦ಮೀ ಕ್ರೀಡಾಕೂಟದಲ್ಲಿ ರಕ್ಷಿತಾರಾಜು ಟಿ೧೧ವಿಭಾಗದಲ್ಲಿ ( ೫:೨೬.೪೭ಸೆಕೆಂಡುಗಳಲ್ಲಿ) ಮೂರನೇ ಸ್ಥಾನ ಪಡೆದು ಪೈನಲ್’ಗೆ ಪ್ರವೇಶಿಸಿದ್ದರು.
ಆದರೆ ಜು.೧೦ ಸೋಮವಾರದಂದು ನಡೆದ ೧೫೦೦ಮೀ ಓಟದಲ್ಲಿ (೫:೨೪.೯೫ ಸೆಕೆಂಡುಗಳಲ್ಲಿ) ರಕ್ಷಿತಾ ೫ ನೇ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಅವರ ಕೋಚ್ ರಾಹುಲ್ ಬಾಲಕೃಷ್ಣ ತಿಳಿಸಿದ್ದಾರೆ.