News Karnataka Kannada
Wednesday, May 08 2024
ಚಿಕಮಗಳೂರು

ಚಿಕ್ಕಮಗಳೂರು: ಪಶು ಆಸ್ಪತ್ರೆ ಅವ್ಯವಸ್ಥೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

Congress protests against the mismanagement of veterinary hospital
Photo Credit : News Kannada

ಚಿಕ್ಕಮಗಳೂರು: ಪಶು ಆಸ್ಪತ್ರೆಯ ಅವ್ಯವಸ್ಥೆಯನ್ನು ಕಂಡು ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಪಶು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಅಂಶುಮಂತ್ ಮಾತನಾಡಿ ಜಿಲ್ಲಾ ಕಾಂಗ್ರೆಸ್ ಮತ್ತು ಬ್ಲಾಕ್ ಕಾಂಗ್ರೆಸ್ ಪಕ್ಷದ ಎಲ್ಲಾ ಪದಾಧಿಕಾರಿಗಳು ಸೇರಿ ಚಿಕ್ಕಮಗಳೂರಿನ ಸಾಮಾನ್ಯ ಜನರಿಂದ ಹಿಡಿದು ರೈತರವರೆಗೂ ಎದುರಿಸುತ್ತಿರುವ ಸಮಸ್ಯೆಯ ವಿರುದ್ಧ ಇಂದು ಹೋರಾಟವನ್ನು ನಡೆಸಲಾಗುತ್ತಿದೆ, ಜಿಲ್ಲೆಯಲ್ಲಿ ಇರುವ ಪಶು ಆಸ್ಪತ್ರೆಯು ಜನರ ಬಳಕೆಯ ಯೋಗ್ಯವಾದ ಆಸ್ಪತ್ರೆ ಆಗಿಲ್ಲ, ಇದಕ್ಕೆ ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳ ಗಮನ ಸೆಳೆಯುವ ಕೆಲಸವನ್ನು ಮಾಡಿದ್ದರು ಸಹ ಅಧಿಕಾರಿಗಳ ಜತೆಗೆ ಕ್ಷೇತ್ರದ ಶಾಸಕರು ನಿರ್ಲ್ಯಕ್ಷ ತೊರಿರುವುದೇ ಇಲ್ಲಿಯ ಅವ್ಯವಸ್ಥೆಗೆ ಕಾರಣವಾಗಿದೆ, ಮೂಕ ಪ್ರಾಣಿ ಪಕ್ಷಿಗಳ ಹಿತ ಕಾಪಾಡದೆ ಇರುವ ಇಂತಹ ಜನಪ್ರತಿನಿಧಿಗಳು ನಮಗೆ ಬೇಕೆ ಎಂದರು.

ಪಶು ಆಸ್ಪತ್ರೆಯಲ್ಲಿ ಸರಿಯಾದ ಕಟ್ಟವಾಗಲಿ, ಅಧಿಕಾರಿಗಳಿಗೆ ಕೂರಲು ವ್ಯವಸ್ಥೆಯಾಗಲಿ ಇಲ್ಲ, ಮೂಕ ಪ್ರಾಣಿಗಳಿಗೆ ಕಾರ್ ಶೆಡ್‌ನಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಮುಂದಿನ ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗುತ್ತಿದ್ದು ರೈತರು ತಮ್ಮ ಪ್ರಾಣಿಗಳಿಗೆ ಚಿಕಿತ್ಸೆ ಕೊಡಿಸಲು ಪರದಾಡುವಂತಹ ಸ್ಥಿತಿಯಲ್ಲಿದ್ದಾರೆ, ೩ ವರ್ಷಗಳಿಂದ ಬೇಜವಾಬ್ದಾರಿ ತನವನ್ನು ತೊರಿದ್ದು, ಕಂಟ್ರಾಕ್ಟರ್ ಕಾರಣವೆಂದು ಇಲಾಖೆಯ ಅಧಿಕಾರಿಗಳು ಸಾರ್ವಜನಿಕರು ಮಾತನಾಡುತ್ತಿದ್ದು, ೪೦%ನ ಬಿಸಿ ಚಿಕ್ಕಮ ಗಳೂರು ಜಿಲ್ಲೆಯ ಪಶು ಆಸ್ಪತ್ರೆಗೂ ತಲುಪಿ ದೆಯೇ ಎಂಬ ಅನುಮಾನ ಮೂಡುತ್ತದೆ ಎಂದರು.

ಕ್ಷೇತ್ರದ ಶಾಸಕರು ತಮ್ಮ ಜವಾಬ್ದಾರಿ ಯನ್ನು ಮರೆತು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದು, ನೈಜ ವಿಚಾರಗಳನ್ನು ಮರೆಮಾಚಲಾಗುತ್ತಿದೆ, ಕಾಂಗ್ರೆಸ್ ಪಕ್ಷ ಸಾರ್ವಜನಿಕರ ಪರವಾಗಿ ಧ್ವನಿ ಎತ್ತಿದೆ, ಕ್ಷೇತ್ರದ ಪ್ರತಿಯೊಬ್ಬ ನಾಗರೀಕರು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ, ಎಂದರು.

ಕಾಂಗ್ರೆಸ್ ಮುಖಂಡ ಎಚ್.ಡಿ.ತಮ್ಮಯ್ಯ ಮಾತನಾಡಿ ಪಶು ಆಸ್ಪತ್ರೆ ಕಟ್ಟಡವನ್ನು ಕಟ್ಟಲು ಪ್ರಾರಂಭಿಸಿ ವರ್ಷಗಳೆ ಕಳೆದರೂ ಪೂರ್ಣಗೊಂಡಿಲ್ಲ, ಇದಕ್ಕೆ ಸಬಂದಪಟ್ಟು ಅಧಿಕಾರಿಗಳು ಮತ್ತು ಸರ್ಕಾರವನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತಿದೆ, ೪೦% ಕಮಿಷನ್ ಎಂಬ ಸಾರ್ವಜನಿಕರ ಮಾತಿಗೆ ನಿದರ್ಶನವಾಗಿದೆ, ಮಲೆನಾಡು ಭಾಗವಾದ ಜಿಲ್ಲೆಯಲ್ಲಿ ಎತ್ತು, ಹಸುಗಳನ್ನು ನಂಬಿಕೊಂಡು ಬದುಕುತ್ತಿರುವ ಜನರು ಪಶು ಆಸ್ಪತ್ರೆಗೆ ಬಂದರೆ ಉಪಕರಣಗಳ ಸೌಲಭ್ಯವಿಲ್ಲದೆ ಸರಿಯಾದ ಚಿಕಿತ್ಸೆ ದೋರೆಯುತ್ತಿಲ್ಲ ಎಂದರು.

ನಾಲ್ಕು ಬಾರಿ ಶಾಸಕರಾಗಿರುವ ಶಾಸಕ ಸಿ.ಟಿ.ರವಿ ರವರು ಈ ರೀತಿಯ ಬೇಜ ವಾಬ್ದಾರಿಯಿಂದ ಮೂಕ ಪ್ರಾಣಿಗಳಿಗೆ ಈ ಸ್ಥಿತಿ ಬಂದಿದೆ, ಕಟ್ಟಡವನ್ನು ಶೀಘ್ರವಾಗಿ ಪೂರ್ಣಗೊಳಿಸಿ ಪಶು ವೈದ್ಯರಿಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಜಿಲ್ಲಾ ಕಾಂಗ್ರೆಸ್ ಈ ಮೂಲಕ ಶಾಸಕರಿಗೆ ಒತ್ತಾಯಿಸಲಾಗಿದೆ ಎಂದರು.

ಕಾಂಗ್ರೆಸ್ ಮುಖಂಡ ಬಿ.ಹೆಚ್.ಹರೀಶ್ ಮಾತನಾಡಿ ಶಾಸಕ ಸಿ.ಟಿ.ರವಿ ರವರು ೨೦ ವರ್ಷಗಳಿಂದ ಅಧಿಕಾರದಲ್ಲಿ ಇದ್ದರು ಪಶು ಆಸ್ಪತ್ರೆಯಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತದೆ, ಪ್ರಾಣಿಗಳಿಗೆ ಚಿಕಿತ್ಸೆ ನೀಡಲು ಸರಿಯಾದ ವ್ಯವಸ್ಥೆಯು ಇಲ್ಲ, ಅಧಿಕಾರಿಗಳಿಗು ಕೂರಲು ವ್ಯವಸ್ಥೆ ಇಲ್ಲ, ೨೦ ವರ್ಷಗಳಿಂದ ಏನು ಮಾಡಿದರು ಎಂದು ಸಾರ್ವಜನಿಕರಲ್ಲಿ ಪ್ರಶ್ನೆ ಮೂಡುತ್ತದೆ, ಇಲ್ಲಿ ಕಟ್ಟತ್ತಿರುವ ಕಟ್ಟಡವು ಪ್ರಾರಂಭವಾಗಿ ೩ ವರ್ಷ ಕಳೆದರು ಪೂರ್ಣಗೊಂಡಿಲ್ಲ ಶಾಸಕರು ಇದರ ಬಗ್ಗೆ ಗಮನ ಕೊಡದೆ ಸೀರೆ ಅಂಚುವ ಕೆಲಸದಲ್ಲಿ ತೊಡಗಿದ್ದಾರೆ, ಜನರಿಗೆ ಭರವಸೆ ನೀಡಿರುವ ಕೆಲಸಗಳನ್ನು ಮಾಡಿದರೆ ಸಾಕು ಓಟು ನೀಡುತ್ತಾರೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಕಾರ್ಯದರ್ಶಿ ಶಿವಾ ನಂದಸ್ವಾಮಿ, ಕಾಂಗ್ರೆಸ್ ಮುಖಂಡರಾದ ರೇಖಾಹುಲಿಯಪ್ಪ ಗೌಡ, ನಗರಸಭೆ ಸದಸ್ಯರಾದ ಶದಾಬ್ ಅಲಂಖಾನ್, ಮುಖ ಂಡರಾದ ನಾಗಭೂಷಣ್, ಸಂದೇಶ್, ಎಂ.ಡಿ.ರಮೇಶ್, ರಾಘು ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು