News Karnataka Kannada
Monday, April 29 2024
ಬೀದರ್

ಬೀದರ್: ಬಿರುಗಾಳಿ ಸಹಿತ ಮಳೆ , ಮರ ನೆಲಕ್ಕುರುಳಿ ವಾಹನಗಳು ಜಖಂ – ಮೂವರಿಗೆ ಗಾಯ

Three injured as heavy rains, trees uprooted, vehicles damaged, 3 injured
Photo Credit : News Kannada

ಬೀದರ್: ಜಿಲ್ಲೆಯಲ್ಲಿ ಗುರುವಾರ ಈ ವರ್ಷದ ಮೊದಲ ವರ್ಷಧಾರೆಯಾಗಿದೆ. ಮಧ್ಯಾಹ್ನ ಭಾರಿ ಗಾಳಿ, ಗುಡುಗು ಸಹಿದ ಗಂಟೆಗೂ ಹೆಚ್ಚು ಕಾಲ‌ ಮಳೆ ಸುರಿದಿದ್ದು, ಇದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿತು.

ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಇದ್ದು ಮಧ್ಯಾಹ್ನ ಭಾರಿ ಮಳೆ ಆಗಿದೆ.

ಭಾರಿ ಗಾಳಿ ಬಿಸಿದ ಕಾರಣ ಜಿಲ್ಲೆಯ ಹಲವೆಡೆ ಮರಗಳು ನೆಲಕ್ಕುರುಳಿವೆ. ಬೀದರ ತಾಲೂಕಿನ ಯರನಳ್ಳಿ‌ ಗ್ರಾಮದಲ್ಲಿ ಬೃಹತ್ ಮರವೊಂದು ನೆಲಕ್ಕೆ ಬಿದ್ದಿದ್ದು, ದರ್ಗಾ ಬಳಿ ನಿಲ್ಲಿಸಿದ್ದ ಸ್ವಿಫ್ಟ್ ಕಾರು ಮತ್ತು ಆಟೋ ಸಂಪೂರ್ಣ ನುಜ್ಜು ನುಜ್ಜಾಗಿದೆ. ಈ ವೇಳೆ ಆಟೋದಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಜನವಾಡಾ ಪೋಲಿಸರು ಭೇಟಿ ನೀಡಿದ್ದಾರೆ.

ಇನ್ನೂ ಭಾರಿ ಮಳೆಯಿಂದ ನಗರದ ಪ್ರಮುಖ ರಸ್ತೆಗಳೆಲ್ಲ‌ ಜಲಮಯ ಆಗಿತ್ತು. ತಗ್ಗು ಪ್ರದೇಶಕ್ಕೆ ನೀರು ನುಗ್ಗಿ ಜನ ತೊಂದರೆ ಅನುಭವಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು