ಉತ್ತರಕನ್ನಡ: ಜಿಲ್ಲೆಯ ಹೊನ್ನಾವರ ತಾಲೂಕಿನ ಕಾವೂರು ಗ್ರಾಮದಲ್ಲಿ ಅಘಾತಕಾರಿ ಘಟನೆ ನಡೆದಿದೆ. ಮನೆಯಲ್ಲಿಟ್ಟಿದ್ದ ಸೊಳ್ಳೆನಾಶಕ ಲಿಕ್ವಿಡ್ ಕುಡಿದು 2 ವರ್ಷದ ಮಗು ಮೃತಪಟ್ಟಿದೆ.
ಆರವ್ ಮಹೇಶ ನಾಯ್ಕ(2) ಮೃತ ಮಗು. ಮನೆಯಲ್ಲಿ ಸೊಳ್ಳೆಕಾಟ ಜಾಸ್ತಿ ಇದೆ ಎಂದು ಗುಡ್ ನೈಟ್ ಲಿಕ್ವಿಡ್ ತರಲಾಗಿತ್ತು. ಆಟವಾಡುತ್ತಾ ಮನೆಯಲ್ಲೇ ಕುಳಿತ್ತಿದ್ದ ಮಗು, ನೆಲದ ಮೇಲಿದ್ದ ಸೊಳ್ಳೆನಾಶಕ ಔಷಧದ ಬಾಟಲಿಯನ್ನ ಬಾಯಿಗೆ ಇಟ್ಟುಕೊಂಡು ಚೀಪಿದೆ. ಲಿಕ್ವಿಡ್ ಮಗುವಿನ ದೇಹದೊಳಗೆ ಹೋದಂತೆ, ಮಗು ಅಸ್ವಸ್ಥಗೊಂಡಿದೆ. ಕೂಡಲೇ ಕುಟುಂಬಸ್ಥರು ಮಗುವನ್ನು ಮಣಿಪಾಲ ಆಸ್ಪತ್ರೆಗೆ ಕರೆತಂದರಾದರೂ ಚಿಕಿತ್ಸೆ ಫಲಿಸಲಿಲ್ಲ.
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.