News Karnataka Kannada
Friday, May 10 2024
ಉತ್ತರಕನ್ನಡ

ಶಾಸಕಿ ರೂಪಾಲಿ ವಿಶೇಷ ಪ್ರಯತ್ನ: ಕ್ಷೇತ್ರಕ್ಕೆ 2500 ಮನೆಗಳು ಮಂಜೂರು

MLA Rupali's special effort: 2,500 houses sanctioned for the constituency
Photo Credit :

ಕಾರವಾರ: ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಗ್ರಾಮ ಪಂಚಾಯತಿಗೆ ದಾಖಲೆ ಪ್ರಮಾಣದಲ್ಲಿ ಮನೆಗಳು ಮಂಜೂರಾಗಿವೆ ಎಂದು ಶಾಸಕಿ ರೂಪಾಲಿ ನಾಯ್ಕ ಅವರು ನಗರದಲ್ಲಿ ತಿಳಿಸಿದ್ದಾರೆ.

ಸೂರಿನ ಸಮಸ್ಯೆ ಎದುರಿಸುತ್ತಿದ್ದವರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ. ಎಲ್ಲ ವರ್ಗದವರಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ. ಬಸವ ವಸತಿ ಯೋಜನೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ ಯೋಜನೆ (ಗ್ರಾಮೀಣ)ಅಡಿಯಲ್ಲಿ 2022-23ನೇ ಸಾಲಿನ ಗುರಿಯಲ್ಲಿ ಒಟ್ಟೂ 2500 ಮನೆಗಳು ಮಂಜೂರಿಯಾಗಿದೆ. ಇಷ್ಟೊಂದು ಸಂಖ್ಯೆಯಲ್ಲಿ ಮನೆಗಳು ಮಂಜೂರಿ ಆಗಿರುವುದು ಗಮನಾರ್ಹವಾಗಿದೆ.

ಬಸವ ವಸತಿ ಯೋಜನೆಯಲ್ಲಿ ಸಾಮಾನ್ಯ ವರ್ಗಕ್ಕೆ 1647, ಅಲ್ಪಸಂಖ್ಯಾತರಿಗೆ 250 ಸೇರಿ ಒಟ್ಟೂ 1897ಮನೆಗಳು ಮಂಜೂರಾಗಿದ್ದರೆ, ಡಾ.ಬಿ.ಆರ್.ಅಂಬೇಡ್ಕರ್ ನಿವಾಸ ಯೋಜನೆ (ಗ್ರಾಮೀಣ)ಯಲ್ಲಿ ಪರಿಶಿಷ್ಟ ಜಾತಿಗೆ 429, ಪರಿಶಿಷ್ಟ ಪಂಗಡಕ್ಕೆ 174 ಸೇರಿ ಒಟ್ಟೂ 603 ಮನೆಗಳು ಮಂಜೂರಾಗಿವೆ. ಈ ಎರಡೂ ಯೋಜನೆಗಳಿಂದ ಕ್ಷೇತ್ರಕ್ಕೆ 2500 ಮನೆಗಳು ಮಂಜೂರಿಯಾಗಿವೆ.

ಈ ಬಗ್ಗೆ ರಾಜೀವ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಪ್ರತಿಯೊಂದು ಗ್ರಾಮ ಪಂಚಾಯತ್ ಗೆ 5-10 ಮನೆಗಳು ಮಂಜೂರಾಗುತ್ತಿದ್ದವು. ಆದರೆ ಈ ಬಾರಿ ಅತಿ ಹೆಚ್ಚು ಮನೆಗಳು ಮಂಜೂರಾಗಿವೆ. ಇದರಿಂದ ಮನೆ ನಿರ್ಮಾಣಕ್ಕೆ ವರದಾನವಾದಂತಾಗಿದೆ. ಅಮದಳ್ಳಿ 67, ತೊಡೂರು 47 , ಚೆಂಡಿಯಾ 90 , ಶಿರವಾಡ 112, ಕಡವಾಡ 72 , ಕಿನ್ನರ 35 , ವೈಲವಾಡ 30, ದೇವಳಮಕ್ಕಿ 55, ಕೆರವಡಿ 23, ಮಲ್ಲಾಪುರ 100 , ಕದ್ರಾ 106, ಗೋಟೆಗಾಳಿ 47, ಹಣಕೋಣ 57 , ಘಾಡಸಾಯಿ 63, ಅಸ್ನೋಟಿ 24, ಮುಡಗೇರಿ 53, ಮಾಜಾಳಿ 51, ಚಿತ್ತಾಕುಲ 133, ಸುಂಕಸಾಳ 77, ಡೋಂಗ್ರಿ 113, ಅಚವೆ 75, ಹಿಲ್ಲೂರು 65, ಮೊಗಟಾ 55, ಬೆಳಸೆ 42, ವಾಸರಕುದ್ರಗಿ 52, ಅಗಸೂರ 62, ಅಗ್ರಗೋಣ 65, ಸಗಡಗೇರಿ 61, ಶೆಟಗೇರಿ 83, ವಂದಿಗೆ 67, ಬೊಬ್ರುವಾಡ 48, ಬೆಳಂಬರ 45, ಹೊನ್ನೆಬೈಲ 56, ಹಾರವಾಡ 56, ಅವರ್ಸಾ 60, ಹಟ್ಟಿಕೇರಿ 55, ಬೆಲೇಕೇರಿ 53, ಭಾವಿಕೇರಿ 75, ಅಲಗೇರಿ 70 ಮನೆಗಳು ಸೇರಿ ಒಟ್ಟೂ 2500 ಮನೆಗಳು ಮಂಜೂರಾಗಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು