News Karnataka Kannada
Friday, May 10 2024
ಉತ್ತರಕನ್ನಡ

ಕಾರವಾರ: ಮತದಾರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕುರಿತು ಸಭೆ

Karwar: Meeting on special summary revision of electoral rolls
Photo Credit : By Author

ಕಾರವಾರ: ಯುವ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತದಾರ ಪಟ್ಟಿಯಲ್ಲಿ ಸೇರಿಸಲು ಬಿಎಲ್‌ಎಗಳ ಮೂಲಕ ರಾಜಕೀಯ ಪಕ್ಷದವರಿಗೆ ಪ್ರಾದೇಶಿಕ ಆಯುಕ್ತ ಕೆ. ಪಿ. ಮೋಹನ್‌ರಾಜ್‌ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ನ್ಯಾಯಾಲಯ ಸಭಾಂಗಣದಲ್ಲಿ ಮತದಾರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2023 ರ ಕುರಿತು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 1435 ಮತಗಟ್ಟೆ ಇದ್ದು ಎಲ್ಲಾ ಮತಗಟ್ಟೆಯಲ್ಲೂ ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಹಾಗೂ ಕರಡು ಮತದಾರ ಪಟ್ಟಿಯನ್ನು ಈಗಾಗಲೇ ನವೆಂಬರ್ 09 ರಂದು ಪ್ರಕಟಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1161687 ಮತದಾರರು ಇದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ನಮೂನ 6 ರಲ್ಲಿ ಮತ್ತು ಹೆಸರು ಕಡಿಮೆಗೊಳಿಸಲು ನಮೂನೆ-7 ರಲ್ಲಿ ಹಾಗೂ ಹೆಸರು ಇತ್ಯಾದಿ ತಿದ್ದುಪಡಿ ಬಯಸಿದ್ದಲ್ಲಿ ನಮೂನೆ 8 ರಲ್ಲಿ ಸೂಕ್ತ ದಾಖಲೆಗಳೊಂದಿಗೆ ಗರುಡಾ ಆಪ್ ಮೂಲಕ ಸಂಬಂಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿ ಬಿಎಲ್‌ಓ ಗಳ ಮೂಲಕ ದಾಖಲಿಸಬಹುದು ಎಂದರು.

ಮತದಾರ ಪಟ್ಟಿ ವಿಶೇಷ ಪರಿಷ್ಠರಣೆ ವೇಳಾ ಪಟ್ಟಯಂತೆ ನ. 09 ರಿಂದ ಡಿ. 08 ರ ಅವಧಿಯಲ್ಲಿ ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ನೀಡಲು ಕಾಲಾವಕಾಶ ನೀಡಲಾಗಿದೆ ಹಾಗೂ ಮತದಾರರು ಆನ್‌ಲೈನ್ ಮುಖಾಂತರ ವಿಎಚ್ಎ, ಎನ್ವಿಎಸ್ಪಿ ಮೂಲಕ ಮತದಾರರು ನೊಂದಣಿ ಮಾಡಿಕೊಳ್ಳಲು ಅವಕಾಶವಿರುತ್ತದೆ ಎಂದರು. ಈಗಾಗಲೇ ನ. 09 ರಂದು ಪ್ರಕಟಣೆಯಾದ ಕರಡು ಮತದಾರ ಪಟ್ಟಿಯನ್ನು ಎಲ್ಲಾ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಗೆ ನೀಡಲಾಗಿದೆ ಎಂದು ತಿಳಿಸಿದರು ಹಾಗೆಯೇ ರಾಜಕೀಯ ಪಕ್ಷಗಳಿಗೆ ತಮ್ಮ ಪಕ್ಷದ ವತಿಯಿಂದ ಬಿಎಲ್‌ಓ ಗಳನ್ನು ನೇಮಕ ಮಾಡುವಂತೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಬಿ.ಜೆ.ಪಿ ಪಕ್ಕದಿಂದ ಸಂದೇಶ ಟಿ ಶೆಟ್ಟಿ, ಕಾಂಗ್ರೇಸ್ ಪಕ್ಷದಿಂದ ಲೋಹಿದಾಸ ಎಸ್ ವೈಂಗಣಕರ, ಜೆ.ಡಿ.ಎಸ್ ಪಕ್ಷದಿಂದ ಅಜೀತ್ ಆರ್ ಪೋಕಳೆ, ಜಿಲ್ಲೆಯ ಎಲ್ಲಾ ಸಹಾಯಕ ಕಮೀಷನರರು ಹಾಗೂ ಎಲ್ಲಾ ತಹಶೀಲ್ದಾರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು