News Karnataka Kannada
Sunday, May 19 2024
ಉತ್ತರಕನ್ನಡ

ಕಾರವಾರ: 11 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳ ನಾಶ

Karwar: Rs 11 lakh Destruction of valuable drugs
Photo Credit : By Author

ಕಾರವಾರ: ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಒಟ್ಟು 51 ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸುಮಾರು 11 ಲಕ್ಷ ರೂ. ಮೌಲ್ಯದ 47 ಕೆಜಿಯಷ್ಟು ಮಾದಕ ವಸ್ತುಗಳನ್ನ ನ್ಯಾಯಾಲಯದ ಅನುಮತಿಯ ಮೇರೆಗೆ ನಾಶಪಡಿಸಲಾಯಿತು.

ಅಂಕೋಲಾ ತಾಲ್ಲೂಕಿನ ಬೊಗ್ರಿಬೈಲ್‌ನ ಕೆನರಾ ಐ.ಎಮ್.ಎ.(ಯು.ಕೆ) ಕಾನ್ ಗ್ರೀಟ್‌ಮೆಂಟ್ ಫೆಸಿಲಿಟಿ ರವರ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರ ಸಮ್ಮುಖದಲ್ಲಿ ಮಾದಕ ವಸ್ತುಗಳನ್ನ ನಾಶಪಡಿಸಲಾಯಿತು. ಒಂದು ತಿಂಗಳ ಅವಧಿಯಲ್ಲಿ ಉತ್ತರಕನ್ನಡ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಒಟ್ಟೂ 24 ಮಾದಕ ವಸ್ತು ಸೇವನೆ ಪ್ರಕರಣಗಳು ದಾಖಲಾಗಿದ್ದು, ಗಾಂಜಾ ಇರಿಸಿಕೊಂಡಿದ್ದಂತಹ ಹತ್ತರಿಂದ ಹನ್ನೆರಡು ಪ್ರಕರಣಗಳು ದಾಖಲಾಗಿದ್ದವು.

ಈ ನಿಟ್ಟಿನಲ್ಲಿ ಪೊಲೀಸರ ತಂಡವನ್ನ ರೂಪಿಸಿ ಗಾಂಜಾ ಸಾಗಾಟ, ಸೇವನೆ ಮಾಡುವವರ ಮಾಹಿತಿ ಕಲೆಹಾಕಿ ಅಂಥವರನ್ನ ಮಟ್ಟಹಾಕುವ ಕೆಲಸವನ್ನ ಸಿಬ್ಬಂದಿ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲೂ ಇದೇ ರೀತಿ ಮಾದಕ ವಸ್ತು ಸಾಗಾಟದಲ್ಲಿ ಭಾಗಿಯಾಗುವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನ ಎಸ್ಪಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕಾರವಾರ ಡಿವೈಎಸ್ಪಿ ವ್ಯಾಲೆಂಟೈನ್ ಡಿಸೋಜಾ, ಭಟ್ಕಳ ಡಿವೈಎಸ್ಪಿ ಶ್ರೀಕಾಂತ, ಡಿಸಿಆರ್‌ಬಿ ಡಿವೈಎಸ್ಪಿ ವಿಜಯಪ್ರಸಾದ್ ಹಾಗೂ ಜಿಲ್ಲೆಯ ವಿವಿಧ ಠಾಣೆಗಳ ಸಿಪಿಐ ಹಾಗೂ ಪಿಎಸೈ, ಸಿಬ್ಬಂದಿ ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು