News Karnataka Kannada
Sunday, May 12 2024
ಉತ್ತರಕನ್ನಡ

ಕಾರವಾರ: ಮೂಲಸೌಕರ್ಯ ಒದಗಿಸಲು ಒತ್ತಾಯಿಸಿ ರಸ್ತೆ ಗುಂಡಿಗಳಲ್ಲಿ ಗಿಡ ನೆಟ್ಟು ಪ್ರತಿಭಟನೆ

Karwar: Protest by planting saplings in potholes demanding providing infrastructure
Photo Credit : News Kannada

ಕಾರವಾರ: ಭಟ್ಕಳದ ಜಂಬರ್ ಮಠಕ್ಕೆ ಸಾಗುವ ಮಾರ್ಗದ ವಾರ್ಡ್ ನಂಬರ್ 10 ಮತ್ತು 11ರ ರಸ್ತೆ ಸೇರಿದಂತೆ ಇತರೆ ಮೂಲಸೌಕರ್ಯಗಳನ್ನು ಪಡೆಯಲು ನಾಗರಿಕರು ಹರಸಾಹಸ ಪಡೆಬೇಕಾದಂತಹ ಪರಿಸ್ಥಿತಿ ಬಂದೊದಗಿದೆ. ಈ ಹಿನ್ನೆಲೆಯಲ್ಲಿ ರಸ್ತೆಯ ಮಧ್ಯ ಗಿಡ ನೆಟ್ಟು ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದರು.

ಇಲ್ಲಿನ ಸ್ಥಳಿಯ ಜನಪ್ರತಿನಿಧಿಗಳು ಹಾಗೂ ಇಲ್ಲಿನ ಸ್ಥಳೀಯ ನಿವಾಸಿಗಳು ಎಷ್ಟೇ ಬಾರಿ ಈ ಬಗ್ಗೆ ಮನವಿಯನ್ನು ನೀಡಿದರು ಪುರಸಭೆ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಹಲವಾರು ಬಾರಿ ಸಳೀಯಾಡಳಿತ ಹಾಗೂ ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಲಾದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಈ ಬಗ್ಗೆ ಗಮನಹರಿಸದಿರುವುದು ಇಲ್ಲಿನ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದಾಗಿ ಈ ಅವ್ಯವಸ್ಥೆಯಿಂದ ಬೇಸತ್ತು ರಸ್ತೆಯಲ್ಲಿರುವ ಹೊಂಡಗಳಲ್ಲಿ ಗಿಡಗಳನ್ನು ನೆಟ್ಟು ಸಾಂಕೇತಿಕವಾಗಿ ಸ್ಥಳೀಯರು ಪ್ರತಿಭಟಿಸಿದರು.

ಈ ಬಗ್ಗೆ ಮಾತನಾಡಿದ ಸ್ಥಳಿಯ ಸಚಿನ್ ಮಹಾಲೆ, ಜನರು ನಿತ್ಯ ಸಂಚಾರಕ್ಕೆ ಅನೂಕೂಲ ಕಲ್ಪಿಸುವ ರಸ್ತೆಯು ಕಳೆದ 5- 6 ವರ್ಷಗಳಿಂದ ಹಾಳಾಗಿದೆ. ಈ ಬಗ್ಗೆ ನಗರೋತ್ಥಾನ ಯೋಜನೆಯಡಿ ಕಳೆದ 2 ತಿಂಗಳ ಹಿಂದೆ ಭೂಮಿ ಪೂಜೆ ನಡೆಸಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕುಂದಾಪುರ ಮೂಲದ ಗುತ್ತಿಗೆದಾರು ಕಾಮಗಾರಿ ಟೆಂಡರ್ ಪಡೆದು ಕಾಮಗಾರಿ ಆರಂಭಿಸಲು ಮೀನಾಮೇಷ ಎಣಿಸುತ್ತಿದ್ದು, ಈ ಬಗ್ಗೆ ಪುರಸಭೆಗೆ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಗುತ್ತಿಗೆದಾರನಿಗೆ ಈ ಬಗ್ಗೆ ಪುರಸಭೆ ನೋಟಿಸ್ ನೀಡಿದ್ದರು ಕಾಮಗಾರಿ ಆರಂಭಿಸಿಲ್ಲ.

ಸ್ಥಳೀಯರು ಗುತ್ತಿಗೆದಾರನನ್ನು ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಗುತ್ತಿಗೆದಾರನಿಂದ ಯಾವುದೇ ರೀತಿಯ ಸಮರ್ಪಕವಾದಂತಹ ಉತ್ತರ ದೊರೆಯದಾಗಿದೆ ಎಂದರು. ಈ ಕಳೆದ ಹಲವು ವರ್ಷಗಳಿಂದ ರಸ್ತೆ ಸಂಪೂರ್ಣ ಹಾಳಾಗಿದ್ದು, ಕಬ್ಬಿಣದ ಸರಳುಗಳು ರಸ್ತೆಯಲ್ಲಿ ಎದ್ದು ನಿಂತಿದೆ. ಇದರಿಂದ ವಾಹನ ಸವಾರರು ವಾಹನಗಳನ್ನು ಚಲಾಯಿಸುವುದು ಕಷ್ಟವಾಗಿದೆ. ಅಲ್ಲದೇ ನೀರಿನ ಬಾವಿಗಳು ಅವೈಜ್ಣಾನಿಕವಾಗಿ ನಿರ್ಮಾಣಗೊಂಡ ಯುಜಿಡಿ ಅಂಡರ್ ಗ್ರೌಂಡ್ ಡ್ರ‍್ಯಾನೇಜ್ ಕಾಮಗಾರಿಯಿಂದಾಗಿ ಈ ಭಾಗದ ಹಲವು ಮನೆಗಳು ನೀರಿನ ಸಮಸ್ಯೆಯನ್ನು ಎದರಿಸುತ್ತಿದ್ದಾರೆ.

ರಥೋತ್ಸವದ ಸಮಯದಲ್ಲಿ ದೇವರ ಪಲ್ಲಕ್ಕಿ ಉತ್ಸವವು ಈ ಮಾರ್ಗದಿಂದಲೇ ಸಂಚರಿಸುವುದಿದ್ದು, ಈ ಬಗ್ಗೆ ಪುರಸಭೆಯಾದರೂ ಗಮನಹರಿಸಿ ಶೀಘ್ರವಾಗಿ ಕಾಮಗಾರಿಯನ್ನು ನಡೆಸಿ ನಾಗರಿಕರಿಗೆ ಮೂಲಸೌಕರ್ಯಗಳನ್ನು ಆದಷ್ಟು ಶೀಘ್ರದಲ್ಲಿ ಒದಗಿಸಬೇಕೆಂದು ಆಗ್ರಹಿಸಿದರು. ಜಿಲ್ಲಾಧಿಕಾರಿಗಳವರೆಗೂ ಈ ಬಗ್ಗೆ ಮಾಹಿತಿ ಸಲ್ಲಿಸಲಾಗಿದ್ದರೂ ಸಹ ಇಲ್ಲಿಯ ತನಕ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ.

ಇಂದು ಸಾಂಕೇತಿಕವಾಗಿ ಹೋರಾಟ ಮಾಡಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ನಡೆಸುವ ಬಗ್ಗೆ ಎಚ್ಚರಿಕೆಯನ್ನು ನೀಡಿದರು. ಈ ಸಂಧರ್ಭದಲ್ಲಿ ಸ್ಥಳೀಯರಾದ ವಿನಾಯಕ್ ಶೇಟ್, ಶ್ರೀಕಾಂತ ಮೋಗೇರ, ಅಮಿತ ಮಹಾಲೆ, ವಿಶ್ವನಾಥ ಶೇಟ್ ಸೇರಿದಂತೆ ನೂರಾರು ಮಂದಿ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು