ಕಾರವಾರ: ನಗರದ ಬೈತಖೋಲ ಬಂದರಿನ ಬಳಿ ಕಾಣಿಸಿಕೊಂಡಿದ್ದ 11 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ಪ್ರೇಮಿ ಮುರಾದ್ ಖಾನ್ ಅವರು ರಕ್ಷಣೆ ಮಾಡಿದ್ದಾರೆ.
ಬೈತಖೋಲ್ ಬಂದರಿನ ಎದುರು ಇರುವ ಗ್ಯಾರೇಜ್ ಬಳಿ ಕಾಳಿಂಗ ಸರ್ಪವೊಂದು ಕಾಣಿಸಿದೆ. ಹೆದ್ದಾರಿ ಪಕ್ಕದ ಗ್ಯಾರೇಜ್, ಚಹಾ ಅಂಗಡಿ ಸೇರಿದಂತೆ ಜನ ಸಂಪರ್ಕ ಇರುವ ಪ್ರದೇಶವಾಗಿದ್ದರಿಂದ ಸ್ಥಳೀಯರು ಉರಗ ಪ್ರೇಮಿ ಕರೆ ಮಾಡಿದ್ದಾರೆ.
ಬಳಿಕ ಉರಗ ಪ್ರೇಮಿ ಮುರಾದ್ ಖಾನ್ ಅವರು ಕಾಳಿಂಗ ಸರ್ಪವನ್ನು ಹಿಡಿದು ರಕ್ಷಿಸಿದ್ದಾರೆ. ಸರ್ಪವು 11 ಅಡಿ ಉದ್ದವಿದ್ದು, 4 ವರ್ಷ ವಯಸ್ಸಿನದ್ದಿರಬಹುದು ಎಂದು ತಿಳಿಸಿದ್ದಾರೆ.