News Karnataka Kannada
Sunday, May 05 2024
ಉಡುಪಿ

ನಿಟ್ಟೆ ಇಂಜಿನಿಯರಿಂಗ್ ಕಾಲೇಜಿಗೆ “ಇಮ್ ಟೆಕ್ಸ್ ನಲ್ಲಿ ಸಂಶೋಧನಾ ಪ್ರಶಸ್ತಿ

Nitte College of Engineering won the fourth best research award in "Imtex-2023"
Photo Credit : News Kannada

ಕಾರ್ಕಳ: ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ (ಬೆಂಗಳೂರು ಇಂಟರ್ ನ್ಯಾಷನಲ್ ಎಗ್ಸಿಬಿಶನ್ ಸೆಂಟರ್)ದಲ್ಲಿ ಜ.೧೯ ರಿಂದ ೨೫ ರವರೆಗೆ ಭಾರತೀಯ ಯಂತ್ರ ಸಾಧನಗಳ ತಯಾರಕರ ಒಕ್ಕೂಟ (ಇಂಡಿಯನ್ ಮೆಷಿನ್ ಟೂಲ್ ಮ್ಯಾನುಪ್ಯಾಕ್ಚರಸ್೯ ಅಸೋಸಿಯೇಶನ್ ಏರ್ಪಡಿಸಿದ ಅಂತಾರಾಷ್ಟ್ರೀಯ ಯಂತ್ರ ಸಾಧನಗಳ ಪ್ರದರ್ಶನದೊಂದಿಗೆ ಆಯೋಜಿಸಲಾದ ಶೈಕ್ಷಣಿಕ ಸಂಶೋಧನಾ ಪ್ರದರ್ಶನದಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ರೋಬೋಟಿಕ್ಸ್ ಎಂಡ್ ಅರ್ಟಿಫಿಶಿಯಲ್ ಇಂಟಲಿಜೆನ್ಸ್ ವಿಭಾಗದ ಮುಖ್ಯಸ್ಥ ಡಾ.ಮುರಳೀಧರ ಅವರ ನೇತೃತ್ವದಲ್ಲಿ ಪ್ರದರ್ಶಿಸಿದ ಡಿಸೈನ್ ಎಂಡ್ ಡೆವಲ್ಪ್ಮೆಂಟ್ ಆಫ್ ಎ ಲೋ ಕಾಸ್ಟ್ ೪-ಆಕ್ಸಿಸ್ ಸಿ.ಎನ್.ಸಿ ಮೆಶಿನ್ ಫಾರ್ ಆರ್ಟ್ ವರ್ಕ್ ಮೆಶಿನಿಂಗ್ ಎಂಬ ಸಂಶೋಧನೆಗೆ ನಾಲ್ಕನೇ ಶ್ರೇಷ್ಠ ಸಂಶೋಧನಾ ಪ್ರಶಸ್ತಿ ಲಭಿಸಿರುತ್ತದೆ.

ಈ ಪ್ರದರ್ಶನದಲ್ಲಿ ಭಾರತದ ವಿವಿಧೆಡೆಯಿಂದ ೨೨ ಶೈಕ್ಷಣಿಕ ಸಂಸ್ಥೆಗಳು ಭಾಗವಹಿಸಿದ್ದವು. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ತಂಡವು ಹಲವಾರು ವರ್ಷಗಳಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು ಪ್ರತೀ ಬಾರಿಯೂ ವಿವಿಧ ಬಹುಮಾನವನ್ನು ತನ್ನದಾಗಿಸಿಕೊಂಡಿದೆ ಎಂಬುದು ಹೆಮ್ಮೆಯ ವಿಷಯವೆಂದು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು